ರಾಜ್ಯ ಸುದ್ದಿ

ಸುಳ್ಳು ಹೇಳುವುದಕ್ಕೆ ದೊಡ್ಡ ನೋಬೆಲ್ ಪ್ರಶಸ್ತಿಯನ್ನು ಮೋದಿಗೆ ಕೊಡಬೇಕು: ಇಲ್ಯಾಸ್ ತುಂಬೆ

‘ಪ್ರಧಾನಿ ನರೇಂದ್ರ ಮೋದಿ ಹುಲಿಯಲ್ಲ, ಹೆಗ್ಗಣ’

ವರದಿಗಾರ (ಮಾ.18): ‘ನಮ್ಮ ದೇಶದಲ್ಲಿ ಸುಳ್ಳು ಹೇಳುವ ಸರದಾರನೊಬ್ಬನಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಮಾತ್ರವಾಗಿದೆ. ಸುಳ್ಳು ಹೇಳುವುದಕ್ಕೆ ದೊಡ್ಡ ನೋಬೆಲ್ ಪ್ರಶಸ್ತಿ ಕೊಡುವುದಾದರೆ ಅದು ಮೋದಿಗೆ ನೀಡಬೇಕು. ರಫೇಲ್ ಹಗರಣದಲ್ಲಿ ಯುದ್ಧ ವಿಮಾನವನ್ನೇ ಕದಿಯುವ ಪ್ರಧಾನ ಮಂತ್ರಿ ನಮ್ಮ ದೇಶದ ಅತ್ಯಂತ ದೊಡ್ಡ ಕಳ್ಳ ಎಂದು ಹೇಳಲು ನಮಗೆ ಯಾವುದೇ ನಾಚಿಕೆಯಾಗುತ್ತಿಲ್ಲ’ ಎಂದು ಎಸ್.ಡಿ.ಪಿ.ಐ ಮಂಗಳೂರು ಲೋಕಸಭಾ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಅವರು ಮೋದಿ ನೇತೃತ್ವದ ಬಿಜೆಪಿಯ 5 ವರ್ಷದ ಆಡಳಿತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅವರು ಆದಿತ್ಯವಾರ ಮಂಗಳೂರಿನ ನೆಹರು ಮೈದಾನದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ -ಎಸ್.ಡಿ.ಪಿ.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಹಮ್ಮಿಕೊಂಡಿದ್ದ ಜಿಲ್ಲಾ ಸಮಾವೇಶ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿ ಘೋಷಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

‘ದೇಶದಲ್ಲಿ ಜನಗಳಿಗಿಂತ ಹೆಚ್ಚು ದನಗಳಿಗೆ ಬೆಲೆ ಕೊಡಲಾಗುತ್ತಿದೆ. ದನಗಳಿಗೆ ಗೋ ಶಾಲೆಗಳನ್ನು ನಿರ್ಮಿಸುತ್ತಿದ್ದಾರೆ. ಆದರೆ ಬಡವರ ಮಕ್ಕಳಿಗೆ ಕಲಿಯಲು ಸರಿಯಾದ ಶಾಲೆಗಳೇ ಇಲ್ಲ. ಉತ್ತರ ಪ್ರದೇಶದಲ್ಲಿ ಶಾಲಾ ಕಾಲೇಜುಗಳನ್ನು ಖಾಲಿ ಮಾಡಿ ಅದನ್ನು ದನಗಳು ತುಂಬಿಸುವ ಕೊಟ್ಟಿಗಯಾಗಿ ಮಾಡಲಾಗಿದೆ ಎಂದಾದರೆ ಈ ದೇಶದಲ್ಲಿ ಜನಗಳಿಗೆ ಬೆಲೆ ಇದೆಯೋ, ದನಗಳಿಗೆ ಬೆಲೆ ಇದೆಯೋ ಎಂಬುವುದು ಸ್ಪಷ್ಟವಾಗುತ್ತದೆ’.

‘ಅಚ್ಛೇ ದಿನಗಳನ್ನು ನಿರೀಕ್ಷಿಸುತ್ತಿದ್ದ ಜನತೆ ಬೆಳಿಗ್ಗೆ ಎದ್ದು ನೋಡಿದರೆ ನೋಟು ನಿಷೇಧದಿಂದ ಬ್ಯಾಂಕ್ ಮುಂದೆ ನಿಂತು ಪರದಾಡುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಿರುವುದೇ ಮೋದಿಯ ಹೆಗ್ಗಳಿಕೆ. 50 ದಿನ ಕೊಡಿ ಎಂದು ಕೇಳಿದ ಮೋದಿ 2 ವರ್ಷವಾದರೂ ನೋಟು ಅಮಾನ್ಯೀಕರಣ ಎಂಬ ಹಗರಣದ ಬಗ್ಗೆ ಮಾತನಾಡಿಲ್ಲ’.

ಸಿಬಿಐ, ಆರ್.ಬಿ.ಐ, ಹೆಚ್.ಎ.ಎಲ್ ಎಂಬ ದೇಶದ ಪ್ರತಿಷ್ಠಿತ ವಿಮಾನ ಕಂಪನಿಗಳೆಲ್ಲವನ್ನು ಕಾರ್ಪೋರೇಟ್ ಮಾಡಿದಂತಹ ಕೀರ್ತಿ ಬಿಜೆಪಿ ಹಾಗೂ ಮೋದಿಗೆ ಸಲ್ಲುತ್ತದೆ ಎಂದಿದ್ದಾರೆ.

‘ಬಿಜೆಪಿ ಆಡಳಿತವು ದೇಶದ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಿದ್ದಾರೆ ಎಂದಿರುವ ಇಲ್ಯಾಸ್ ಮುಹಮ್ಮದ್, ಮೋದಿ ವಿರುದ್ಧ ಮಾತನಾಡಿದರೆ ಜೈಲು, ಆರೆಸ್ಸೆಸ್ ವಿರುದ್ಧ ಮಾತನಾಡುವವರನ್ನು ಕೊಲ್ಲುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡಲಾಗಿದೆ. ಜನರಿಗೆ ಮಾತನಾಡಲೂ ಭಯವಾಗುವಂತಹ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಸೇನೆಯ ಕಾರ್ಯಾಚರಣೆಯನ್ನು ಬಿಜೆಪಿ ಕೋಮುವಾದವನ್ನು ಮಾಡುವ ಮೂಲಕ ಚುನಾವಣೆಯ ಲಾಭ ಪಡೆಯುವ ದುಷ್ಪ್ರಯೋಜನ ಪಡೆಯಲು ಪ್ರಧಾನಿ ಮೋದಿ ಹಾಗೂ ಬಿಜೆಪಿ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡುತ್ತಿದೆ’ ಎಂದು ಹೇಳಿದ್ದಾರೆ.

‘ದೇಶದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಯು ವಿದ್ಯಾವಂತ ಯುವ ಸಮಾಜವನ್ನು ಪರದಾಡುವಂತಹ ಸ್ಥಿತಿಗೆ ತಳ್ಳಿದ್ದಾರೆ. ಮೋದಿ ಆಡಳಿತದಲ್ಲಿ 6 ಕೋಟಿ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಅಧಿಕಾರ ಹಿಡಿದ ಮೋದಿ ದೇಶವನ್ನು ಅರಾಜಕತೆಗೆ ತಳ್ಳಿದ್ದಾರೆ’.

‘ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್, ಫೇಸ್ಬುಕ್ ನಲ್ಲಿ ಮೋದಿ ಜೊತೆ ಹುಲಿಯ ಚಿತ್ರವನ್ನು ಬಳಸುವುದರೆ ಬಗ್ಗೆ ಪ್ರಶ್ನಿಸಿದಾಗ, ಮೋದಿ ಭೃಷ್ಟಚಾರ, ಕೋಮುವಾದದ ವಿರುದ್ಧ ಘರ್ಜಿಸುವ ಹುಲಿ ನಮಗೆ ಬೇಕಾಗಿತ್ತು ಅದಕ್ಕಾಗಿ ಬಳಸಲಾಗುತ್ತಿದೆ ಎಂದು ಹೇಳುತ್ತಿದ್ದರು. ಆದರೆ ನಾವು ಹೇಳುತ್ತೇವೆ ಮೋದಿ ಹುಲಿಯಲ್ಲ ದೊಡ್ಡ ಹೆಗ್ಗಣವೆಂದು. ಯಾಕೆಂದರೆ ದೇಶಕ್ಕೆ ಇಂತಹ ಸುಳ್ಳು ಹೇಳುವ ಪ್ರಧಾನ ಮಂತ್ರಿ ಇದುವರೆಗೆ ಬಂದೇ ಇಲ್ಲ’ ಎಂದು ಇಲ್ಯಾಸ್ ಹೇಳಿದ್ದಾರೆ.

ನಳಿನ್ ಕುಮಾರ್ ಕಟೀಲ್ ರನ್ನು ಪ್ರಸ್ತಾಪಿಸುತ್ತಾ, ನಳಿನ್ ಕುಮಾರ್ ಮೋದಿಗಿಂತಲೂ ದೊಡ್ಡ ಸುಳ್ಳುಗಾರ. ಕೇವಲ ಪಂಪ್ವೆಲ್ ಮೇಲ್ಸೆತುವೆಯನ್ನೇ 10 ವರ್ಷಗಳಿಂದ ನಿರ್ಮಿಸಲು ಸಾಧ್ಯವಾಗದ ಅವರಂತಹ ಪ್ರತಿನಿಧಿ ಬುದ್ದಿವಂತರ ಜಿಲ್ಲೆಗೆ ಬೇಕಾ? ಎಂದು ಪ್ರಶ್ನಿಸುತ್ತಾ, ಸಂಸತ್ತಿನಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಸರಿಯಾಗಿ ಕನ್ನಡವೇ ಮಾತನಾಡಲು ಬರದ ಅಂತವರನ್ನು ಕಳುಹಿಸಿ ಏನು ಪ್ರಯೋಜನವೆಂದು ಹೇಳಿದರು.

ಸಭೆಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್, ದಲಿತ ಹೋರಾಟಗಾರ, ಬಿಎಸ್ಪಿ ನಾಯಕ ಬಿ.ಆರ್. ಭಾಸ್ಕರ್ ಪ್ರಸಾದ್, ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಪಾನ್ಸೋ ಫ್ರಾಂಕೋ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ವುಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಎಸ್.ಡಿ.ಪಿ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಕ್ಷವನ್ನು ಸೇರ್ಪಡೆಗೊಂಡರು, ಇವರನ್ನು ಉಪಸ್ಥಿತ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ವಹಿಸಿದ್ದರು, ಜಿಲ್ಲಾ ಸಮಿತಿ ಸದಸ್ಯರಾದ ಜಾಬಿರ್ ಅರಿಯಡ್ಕ, ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group