ರಾಜ್ಯ ಸುದ್ದಿ

ಲೋಕಸಭಾ ಚುನಾವಣೆ: ಮುಸ್ಲಿಮ್ ರಾಜಕೀಯ ಸಮಾವೇಶದ ಬೇಡಿಕೆಗಳ ಪಟ್ಟಿ ಬಿಡುಗಡೆ

ಬೇಡಿಕೆಗಳ ಪಟ್ಟಿ ಬಿಡುಗಡೆಗೊಳಿಸಿದ ಪಾಪ್ಯುಲರ್ ಫ್ರಂಟ್

ವರದಿಗಾರ (ಮಾ.14): 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ-ಪಿ.ಎಫ್.ಐ ಮಾರ್ಚ್ 6ರಂದು ನವದೆಹಲಿಯಲ್ಲಿ ನಡೆದ ಮುಸ್ಲಿಂ ರಾಜಕೀಯ ಸಮಾವೇಶದ ಬೇಡಿಕೆಗಳ ಪಟ್ಟಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್ ಬಿಡುಗಡೆಗೊಳಿಸಿದರು.

ಪ್ರಸಕ್ತ ರಾಜಕೀಯ ಪರಿಸ್ಥಿತಿ, ರಾಷ್ಟ್ರದ ಮುಂದಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿ, ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಕಳವಳವನ್ನು ಮುಂಚೂಣಿಗೆ ತಂದು ಅವುಗಳನ್ನು ಪರಿಹರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಅಭಿವೃದ್ಧಿ, ಪ್ರಾತಿನಿಧ್ಯ, ಶಿಕ್ಷಣ, ಸಂಸ್ಕೃತಿ, ಭದ್ರತೆ ಮತ್ತು ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಒಳಗೊಂಡ ಬೇಡಿಕೆಯ ಪಟ್ಟಿಯನ್ನು ಸಮಾವೇಶ ಅಂಗೀಕರಿಸಿದೆ ಎಂದು ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ ಹೇಳಿದ್ದಾರೆ.

ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಕಾಳಜಿ ಇರುವ ಎಲ್ಲಾ ರಾಜಕೀಯ ಪಕ್ಷಗಳು, ಸಕಾರಾತ್ಮಕವಾಗಿ ಸ್ಪಂದಿಸುವಂತೆ ಮತ್ತು ಸಮುದಾಯದ ಬೇಡಿಕೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಅವರು ಆಗ್ರಹಿಸಿದರು.

ರಾಜಕೀಯ ಪಕ್ಷಗಳ ಅಜೆಂಡಾದಲ್ಲಿ ಈ ಬೇಡಿಕೆಗಳ ಪಟ್ಟಿಯನ್ನು ಸೇರಿಸಲು  ಪ್ರಯತ್ನಿಸಲು ಹಾಗೂ ಮತದಾರರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಕ್ರಮಗಳ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು,ಮುಸ್ಲಿಮ್ ಮತಗಳು ನಿರ್ಣಾಯಕವಾಗಿರುವ 100 ಲೋಕಸಭಾ ಕ್ಷೇತ್ರಗಳಲ್ಲಿ ಕರಪತ್ರ ವಿತರಣೆ, ಜನರ ಸಮಾವೇಶ ಮುಂತಾದವುಗಳನ್ನು ನಡೆಸುವ ಮೂಲಕ ಪರಿಣಾಮಕಾರಿ ಪ್ರಚಾರಕ್ಕೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ನೇತೃತ್ವದ ಮತ್ತು ಆರ್‍ಎಸ್‍ಎಸ್ ನಿಯಂತ್ರಣದಲ್ಲಿರುವ ಕೇಂದ್ರದ ಎನ್‍ಡಿಎ ಸರ್ಕಾರದಲ್ಲಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ಮತ್ತು ತಾರತಮ್ಯವೆಸಗಲಾಗುತ್ತಿದೆ ಎಂದು ಸಮಾವೇಶ ಬೊಟ್ಟು ಮಾಡಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ನಾಯಕರು ಹೇಳಿದ್ದಾರೆ.

ವೀಡಿಯೋ ವೀಕ್ಷಿಸಿ:

 

ಎಲ್ಲರಿಗೂ ನ್ಯಾಯದ ರಾಜಕೀಯದ ಬದಲಾಗಿ, ಸರಕಾರದಿಂದ ದ್ವೇಷದ ರಾಜಕೀಯ ನೀತಿ ಅನುಸರಿಸಲಾಗುತ್ತಿದೆ.ಆದ್ದರಿಂದ ಧಾರ್ಮಿಕ ಅಲ್ಪಸಂಖ್ಯಾತರ ಹಿತಾಸಕ್ತಿಯಿಂದ ಮುಂಬರುವ ಚುನಾವಣೆಯಲ್ಲಿ ಸರ್ಕಾರವನ್ನು ಬದಲಾಯಿಸುವ ಒಂದು ಅವಕಾಶ ದೊರೆಯಲಿದೆ. ಇದೇ ವೇಳೆ, ಸಾಂಪ್ರದಾಯಿಕವಾಗಿ ಮುಸ್ಲಿಂ ಮತಗಳನ್ನು ಅವಲಂಬಿಸಿರುವ ಪ್ರಮುಖ ಬಿಜೆಪಿಯೇತರ ಪಕ್ಷಗಳು, ಅಲ್ಪಸಂಖ್ಯಾತರ ಸಮುದಾಯದ ಅಸ್ತಿತ್ವ ಹಾಗೂ ಅವರ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮೂಲೆಗುಂಪು ಮಾಡಿವೆ. ಆದ್ದರಿಂದ, ಸರ್ಕಾರಿ ನೀತಿಗಳ ಬದಲಾವಣೆಯಾಗದೆ ಆಡಳಿತ ಪಕ್ಷದ ಬದಲಾವಣೆ ಅಥವಾ ಮೈತ್ರಿ ಕೂಟದ ಬದಲಾವಣೆಯಿಂದ ನಿರೀಕ್ಷಿಸಿದ ಪರ್ಯಾಯ ಈಡೇರದು. ಬಿಜೆಪಿಗೆ ಸರಿಯಾದ ಪರ್ಯಾಯ ಸೃಷ್ಟಿಸಲು ಇತರ ಪಕ್ಷಗಳು, ತಮ್ಮ ನೀತಿಯನ್ನು ಬದಲಿಸಿ, ಜನಪರವಾದ ಮತ್ತು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿ ಜಾತ್ಯತೀತ ವಿಧಾನವನ್ನು ಅಳವಡಿಸಿಕೊಳ್ಳಬೇಕು.

ಬಾಬರಿ ಮಸ್ಜಿದ್, ಪ್ರಾತಿನಿಧ್ಯ, ಜನ ವಿರೋಧಿ ಕಾನೂನು ಇತ್ಯಾದಿ ವಿಷಯಗಳಲ್ಲಿ ವಿರೋಧ ಪಕ್ಷಗಳು ಒಂದೋ ತಮ್ಮ ಮೃದು ಬೆಂಬಲ ನೀಡುತ್ತಿವೆ ಅಥವಾ ಬಿಜೆಪಿಯ ಕೋಮುವಾದಿ ಮತ್ತು ಜಾತಿವಾದಿ ವಿಧಾನದ ಬಗ್ಗೆ ಮೌನವಹಿಸುತ್ತವೆ ಮುಂತಾದ ಹಲವಾರು ಸಮಸ್ಯೆಗಳನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ. ಜನರ ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಸಮುದಾಯದ ಜ್ವಲಂತ ಸಮಸ್ಯೆಗಳನ್ನು ಒಳಗೊಂಡ 25 ಯೋಜನೆಗಳಡಿ ಒಟ್ಟು 75 ಬೇಡಿಕೆಗಳನ್ನು ಪಟ್ಟಿ ಮಾಡಲಾಗಿದೆ. ಈ ಬೇಡಿಕೆಗಳಲ್ಲಿ ಪ್ರಮುಖವಾದವು, ಸಾಚಾರ್ ಸಮಿತಿ, ಮಿಶ್ರಾ ಆಯೋಗದ ಶಿಫಾರಸುಗಳು, ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳು, ಕೌಶಲ್ಯಾಧಾರಿತ ಕೆಲಸಗಾರರು ಮತ್ತು ಕುಶಲಕರ್ಮಿಗಳು, ಕರಾಳ ಕಾನೂನುಗಳು, ಎನ್‍ಆರ್‍ಸಿ ಬಳಕೆ, ಪೌರತ್ವ ತಿದ್ದುಪಡಿ ಬೆಳವಣಿಗೆ, ಎನ್‍ಕೌಂಟರ್ ಸಾವುಗಳು, ವಿಚಾರಣಾಧೀನ ಕೈದಿಗಳು, ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ, ಅಲ್ಪಸಂಖ್ಯಾತ ಸಂಸ್ಥೆಗಳು, ಮುಸ್ಲಿಂ ವೈಯಕ್ತಿಕ ಕಾನೂನು, ಆರಾಧನಾ ಸ್ಥಳಗಳು, ವಕ್ಫ್, ಮಹಿಳಾ ಸಬಲೀಕರಣ ಇತ್ಯಾದಿಗಳಾಗಿವೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ದೆಹಲಿಯ ಸಮಾವೇಶದಲ್ಲಿ ಹೊರತರಲಾದ ಬೇಡಿಕೆಯ ಪಟ್ಟಿಯನ್ನು  ಕರ್ನಾಟಕದ ಎಲ್ಲಾ ಜಾತ್ಯತೀತ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಮುಂದಿಟ್ಟಿದ್ದು, ಬೇಡಿಕೆಗಳಿಗೆ ಪೂರಕವಾದ ಅಂಶಗಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಬೇಕೆಂದು ಈ ಸಂದರ್ಭ ಒತ್ತಾಯಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಕ್ಕುಗಳನ್ನು ಚಲಾಯಿಸುವಾಗ; ಈ ಬೇಡಿಕೆಗಳ ಪಟ್ಟಿಯ ಬಗ್ಗೆ ಚುನಾವಣೆಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಮತ್ತು ಅಭ್ಯರ್ಥಿಗಳ ಪ್ರತಿಕ್ರಿಯೆಯನ್ನು ವೀಕ್ಷಿಸಿ ಮೌಲ್ಯಮಾಪನ ಮಾಡುವಂತೆ ಪಾಪ್ಯುಲರ್ ಫ್ರಂಟ್ ಕರೆ ನೀಡಿದೆ.

ಮುಸ್ಲಿಮ್ ರಾಜಕೀಯ ಸಮಾವೇಶದ ಬೇಡಿಕೆಗಳ ಪಟ್ಟಿ ಈ ಕೆಳಗಿನಂತಿವೆ:-

ಅಭಿವೃದ್ಧಿ ವಿಷಯಗಳು:-

 • ಸಾಚಾರ್ ಸಮಿತಿ: ನ್ಯಾಯಮೂರ್ತಿ ಸಾಚಾರ್ ಸಮಿತಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರಲು ಕ್ರಮಗಳನ್ನು ಕೈಗೊಳ್ಳುವುದು.
 • ಸಂವಿಧಾನದ  ಅನುಬಂಧ 15 ಮತ್ತು 16ರಲ್ಲಿ ಆಡಳಿತ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ವೈವಿಧ್ಯತೆಯನ್ನು  ಪರಿಶೀಲಿಸುವ ವೈವಿಧ್ಯ ಸೂಚ್ಯಂಕವನ್ನು ರಚಿಸಬೇಕು.
 • ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕುರಿತ ಅಂಕಿ ಅಂಶವನ್ನು ಸಿದ್ಧ ಪಡಿಸಬೇಕು.
 • ಅನುಬಂಧ 340, 341 ಮತ್ತು 342 ಹಾಗೂ ಅನುಬಂಧ 14, 15, 16, 29 ಮತ್ತು 30 ಗಳ ಕಡ್ಡಾಯ ಉದ್ದೇಶಗಳ ಜಾರಿಯನ್ನು ವೀಕ್ಷಿಸುವ ಮತ್ತು ಖಚಿತಪಡಿಸುವ ಸಮಾನ ಅವಕಾಶಗಳ ಆಯೋಗ(ಈಓಸಿ)ವನ್ನು  ಶಾಸನಬದ್ಧ ಮಂಡಳಿಯಾಗಿ ರಚಿಸಬೇಕು.
 • ಎಂಎಸ್ಡಿಪಿ (ಪಿಎಂಜೆವಿಕೆ)ಯನ್ನು 2020ರಾಚೆಗೆ ವಿಸ್ತರಿಸಬೇಕು ಮತ್ತು ಇದು ಮುಸ್ಲಿಂ ಸಮುದಾಯವನ್ನು ಅಭಿವೃದ್ಧಿಪಡಿಸುತ್ತದೆ, ಹೊರತು ಪ್ರದೇಶವನ್ನಲ್ಲ ಎಂಬುದನ್ನು ಖಚಿತಪಡಿಸುವುದಕ್ಕಾಗಿ ಬದಲಾವಣೆಯನ್ನು ತರಬೇಕು.

ಕಲ್ಯಾಣ ಯೋಜನೆಗಳು:-

 • ಕೇಂದ್ರ ಮತ್ತು ರಾಜ್ಯ ಬಜೆಟ್ ಗಳಲ್ಲಿ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ನಿಧಿ ಹಂಚಿಕೆಯನ್ನು ಗುರುತಿಸುವುದಕ್ಕಾಗಿ ಉಪ ಯೋಜನೆಯನ್ನು ಪರಿಚಯಿಸಬೇಕು. SC ಮತ್ತು STಯಂತೆ ಇದರ ಅನುಷ್ಠಾನವನ್ನು ಖಚಿತ ಪಡಿಸುವುದಕ್ಕಾಗಿ ರಾಜ್ಯ ಆದಾಯ ಮತ್ತು ಹಣಕಾಸು ಗುರಿಯೊಂದಿಗೆ ಪ್ರತ್ಯೇಕ ತಲೆ ಮತ್ತು ಉಪ ತಲೆಯನ್ನು ರಚಿಸಬೇಕು.
 • ಇಂತಹ ಯೋಜನೆಗಳ ಮೂಲಕ ವಿತರಿಸುವ ಸಂಪನ್ಮೂಲಗಳ ಸಂಪೂರ್ಣ ಮತ್ತು ಸಮಗ್ರ ಬಳಕೆಯನ್ನು ಖಚಿತ ಪಡಿಸುವುದಕ್ಕಾಗಿ ಫಲಾನುಭವಿಗಳ ಸಾಮಾಜಿಕ ಲೆಕ್ಕ ಪರಿಶೋಧನೆ ಕ್ರಮವನ್ನು  ಪರಿಚಯಿಸಬೇಕು.
 • ಅಲ್ಪ ಸಂಖ್ಯಾತ ಕಲ್ಯಾಣ ಮತ್ತು ಅಭಿವದ್ಧಿ ನಿಧಿಗಳ ದುರ್ಬಳಕೆ ಗೆ ಹೊಣೆಯಾಗುವ ಸ್ಥಳೀಯ ಸಂಸ್ಥೆಗಳು, ಮಂಡಳಿಗಳು ಮತ್ತು ಮಹಾ ನಗರ ಪಾಲಿಕೆಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ನುರಿತ ಕಾರ್ಮಿಕರು ಮತ್ತು ಕುಶಲಕರ್ಮಿಗಳು:-

 • ಅಸಂಘಟಿತ ವಲಯಗಳಲ್ಲಿರುವ  ಕರ ಕುಶಲ ವ್ಯಕ್ತಿಗಳು, ಕುಶಲ ಕರ್ಮಿಗಳು ಮತ್ತು ಇತರ ನುರಿತ ಕಾರ್ಮಿಕರಿಗೆ ಸೌಲಭ್ಯಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸುವುದು.
 • ಭಾರತೀಯ ಸರಕಾರವು ಅವರ ಕಲೆಗೆ ಪ್ರಮಾಣೀಕರಣ ನೀಡುವ ಕಾರ್ಯವನ್ನು ಪರಿಚಯಿಸಬೇಕು.
 • ಕುಶಲ ಕರ್ಮಿಗಳು ಮತ್ತು ಕರಕುಶಲ ಕೈಗಾರಿಕೆಯ ಅಭಿವದ್ಧಿಗಾಗಿ ಒಂದು ವಿಶೇಷ ಕೇಂದ್ರ ಏಜೆನ್ಸಿಯನ್ನು ಸ್ಥಾಪಿಸಬೇಕು.
 • ನುರಿತ ಕಾರ್ಮಿಕರನ್ನು ಆಧರಿಸಿದ ಕೈಗಾರಿಕೆಗಳ ಪುನರುಜ್ಜೀವನ ಮತ್ತು ಬೆಳವಣಿಗೆಗಾಗಿ ವಿಶೇಷ ಯೋಜನೆಗಳನ್ನು ಪರಿಚಯಿಸುವುದು.
 • ಈ ಕೈಗಾರಿಕೆಗಳ ಸಮಸ್ಯೆಗಳು  ಮತ್ತು ಸ್ವ ಉದ್ಯೋಗ ಹಾಗೂ ಅಸಂಘಟಿತ ವಲಯದಲ್ಲಿ ತೊಡಗಿಸಿ ಕೊಂಡಿರುವ  ಕುಶಲ ಕರ್ಮಿಗಳು, ಕರಕುಶಲ ಕರ್ಮಿಗಳು ಮತ್ತು ನುರಿತ ಕಾರ್ಮಿಕರನ್ನು ಬೆಂಬಲಿಸಬಲ್ಲ ವಿಧಾನಗಳನ್ನು ಅಧ್ಯಯನ ಮಾಡಲು ಒಂದು ಆಯೋಗವನ್ನು ನೇಮಿಸುವುದು.
 • ಸಣ್ಣ ಮತ್ತು ಸಾಂಪ್ರದಾಯಿಕ ಕರಕೌಶಲಗಳ ಪುನರುಜ್ಜೀವನಕ್ಕಾಗಿ ಬಡ್ಡಿ ರಹಿತ ಸಾಲವನ್ನು ವಿತರಿಸುವುದು.

ಬಡ್ಡಿ ರಹಿತ ಬ್ಯಾಂಕಿಂಗ್:-

 • ಬಡ್ಡಿ ರಹಿತ ಬ್ಯಾಂಕ್ಗಳನ್ನು ಸ್ಥಾಪಿಸುವ ಹಾದಿಯಲ್ಲಿರುವ ಅಡೆತಡೆಗಳನ್ನು ನೀಗಿಸಿಶಾಸನ ಬದ್ಧ ಬ್ಯಾಂಕ್ನ ಸ್ಥಾನಮಾನವನ್ನು ನೀಡಬೇಕು.

ವಕ್ಫ್ ಆಸ್ತಿ:-

 • ವಕ್ಫ್  ಆಸ್ತಿಗಳ ಪರಿಣಾಮಕಾರಿ ಬಳಕೆಯ ಉದ್ದೇಶದಿಂದ ರಾಷ್ಟ್ರೀಯ ಮತ್ತು ರಾಜ್ಯಮಟ್ಟಗಳಲ್ಲಿ ನ್ಯಾಯಾಂಗ ಅಧಿಕಾರದೊಂದಿಗೆ  ವಕ್ಫ್  ಆಯುಕ್ತರನ್ನು ರಚಿಸಬೇಕು.
 • ವಕ್ಫ್  ಆಸ್ತಿಗಳನ್ನು  ಎಲ್ಲಾ ಸರಕಾರೀ ಮತ್ತು ಖಾಸಗಿ ಅತಿಕ್ರಮಣಗಳಿಂದ ತೆರವುಗೊಳಿಸಬೇಕು ಮತ್ತು ವಕ್ಫ್  ಆಯುಕ್ತರಿಗೆ ಹಸ್ತಾಂತರಿಸಬೇಕು.
 • ವಕ್ಫ್  ಆಸ್ತಿಗಳನ್ನು ಕಸಿದುಕೊಳ್ಳುವ ಕೆಟ್ಟ ಉದ್ದೇಶವನ್ನು ಹೊಂದಿರುವ ಶತ್ರು ಆಸ್ತಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕು.
 • ವಿವಿಧ ರಾಜ್ಯಗಳಲ್ಲಿ ಸಮುದಾಯದ ಅಭಿವೃದ್ಧಿಗಾಗಿ ವಕ್ಫ್  ಆಸ್ತಿಗಳನ್ನುಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಭದ್ರತಾ ವಿಷಯಗಳು:-

 • ದಮನಕಾರಿ ಕಾನೂನುಗಳು
 • 2004, 2008 ಮತ್ತು 2012ರಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ) ಗೆ ತಂದ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳಬೇಕು.
 • 1908ರ ಅಪರಾಧ ಕಾನೂನು (ತಿದ್ದುಪಡಿ) ಕಾಯ್ದೆಯ 15, 16 ಮತ್ತು 17ನೇ ವಿಧಿಗಳನ್ನು ಹಿಂಪಡೆಯುವುದು.
 • ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂತೆಗೆಯುವುದು.
 • ವರ್ಷಗಳ ಕಾಲ ಜೈಲಿನಲ್ಲಿದ್ದು ನಂತರ ಅಮಾಯಕರೆಂದು ಬಿಡುಗಡೆಗೊಳ್ಳುವ ಬಲಿಪಶುಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಅಪರಾಧ ಕಾನೂನುಗಳಲ್ಲಿ ತಿದ್ದುಪಡಿಯನ್ನು ತರುವುದು.
 • ಯುಎಪಿಎ ಅಡಿ ಬಂಧಿಸಲ್ಪಟ್ಟು ಚಿತ್ರಹಿಂಸೆಗೆ ಗುರಿಯಾದ ಸಂತ್ರಸ್ತರ ಅಂಕಿಅಂಶವನ್ನು ಸಂಗ್ರಹಿಸುವುದಕ್ಕಾಗಿ ಉನ್ನತ ಮಟ್ಟದ ಆಯೋಗವನ್ನು ಸ್ಥಾಪಿಸುವುದು.
 • ಕರಾಳ ಕಾನೂನುಗಳ ಅಡಿಯಲ್ಲಿ ಜಾಮೀನು ರಹಿತವಾಗಿ ಜೈಲಿನಲ್ಲಿ ಇಡಲಾಗುವ ಆರೋಪಿಗಳು ನ್ಯಾಯಾಲಯದಿಂದ  ಬಿಡುಗಡೆಗೊಂಡಾಗ ಹಣಕಾಸಿನ ಬೆಂಬಲಒದಗಿಸುವುದು.
 • ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ)ಯನ್ನು ವಿಸರ್ಜಿಸುವುದು.
 • ಕಾನೂನು ಪುಸ್ತಕದಿಂದ (ಭಾರತೀಯ ದಂಡ ಸಂಹಿತೆಯ 124  ಎ) ದೇಶದ್ರೋಹ ಆರೋಪವನ್ನು ಹೊರಿಸುವ ಅವಕಾಶವನ್ನು ಹಿಂದೆಗೆಯುವುದು.
 • ಗುಜರಾತ್ ಹತ್ಯಾಕಾಂಡದ ಕುರಿತ ಪ್ರಕರಣಗಳನ್ನು ಮತ್ತೆ ತೆರೆಯುವುದು.
 • ಎಲ್ಲಾ ಭಯೋತ್ಪಾದಕ ಘಟನೆಗಳನ್ನು ಪರಿಶೀಲಿಸುವುದಕ್ಕಾಗಿ ರಾಷ್ಟ್ರೀಯ ಆಯೋಗವನ್ನು ನೇಮಿಸುವುದು.

ಪೌರತ್ವ ಮತ್ತು ಎನ್ಆರ್ಸಿ:

 •  ಅಸ್ಸಾಮ್ ಒಳಗೊಂಡಂತೆ ಎಲ್ಲಾ ರಾಜ್ಯಗಳಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ)ಯನ್ನು ನಿಲ್ಲಿಸುವುದು.
 •  ಎನ್ಡಿಎ ಸರಕಾರ ಅಸ್ತಿತ್ವಕ್ಕೆ ತಂದ  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ರೀತಿಯಲ್ಲಿ ಮರು ಜಾರಿಗೊಳಿಸದಿರುವುದು.
 •  ಕಾನೂನು ಬಾಹಿರ ವಲಸೆ (ನಿರ್ಣಯ) ನ್ಯಾಯಮಂಡಳಿ ಕಾಯ್ದೆ 198 ಯನ್ನು ಪುನಃಸ್ಥಾಪಿಸುವುದು.

ಎನ್ಕೌಂಟರ್ ಹತ್ಯೆಗಳು:-

 • ನ್ಯಾಯಾತಿರಿಕ್ತ ಮತ್ತು ಕಸ್ಟಡಿ ಕೊಲೆ ಪ್ರಕರಣಗಳನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕು ಮತ್ತು ಸಂಬಂಧಿತ ಪೊಲೀಸರನ್ನು ಸುಪ್ರೀಂ ಕೋರ್ಟ್ನಿಂದ ನಿರ್ದೇಶಿಸಲಾದ ಬಿಗಿಯಾದ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಶಿಕ್ಷಿಸಬೇಕು. ಎನ್ಕೌಂಟರ್ ಹತ್ಯೆಗಳೊಂದಿಗೆ ವ್ಯವಹರಿಸಲು ಈಗಿರುವ ಕಾನೂನುಗಳಲ್ಲಿ ನಿಬಂಧನೆಗಳನ್ನು ಕಲ್ಪಿಸಬೇಕಾಗಿದೆ ಮತ್ತು ಅರ್ಹ ಪರಿಹಾರವನ್ನು ಪಡೆಯಲೂ ಅವಕಾಶ ದೊರಕಿಸಬೇಕಾಗಿದೆ.

ವಿಚಾರಣಾಧೀನ ಖೈದಿಗಳು:-

 •  ದೀರ್ಘಕಾಲದ ವರೆಗೆ ಜೈಲುಗಳಲ್ಲಿ ಸಿಲುಕಿರುವ ಖೈದಿಗಳ ತ್ವರಿತ ವಿಚಾರಣೆಗಾಗಿ ಪರಿಣಾಮಕಾರಿ ಕಾರ್ಯ ವಿಧಾನಗಳನ್ನು ರೂಪಿಸಬೇಕು.

ಶಿಕ್ಷೆಗೊಳಗಾದ ಖೈದಿಗಳು:-

 • ಶಿಕ್ಷೆಗೊಳಗಾದ ಖೈದಿಗಳನ್ನು ಕ್ಷಮಿಸಲು ರಾಜ್ಯಗಳ ಗವರ್ನರ್ಗಳಿಗೆ ಅಧಿಕಾರ ನೀಡುವ ಭಾರತೀಯ ಸಂವಿಧಾನದ ಪರಿಚ್ಛೇದ 161ರ ಅಡಿಯಲ್ಲಿ, 14 ವರ್ಷ ಜೈಲು ಶಿಕ್ಷೆಗೆ ಒಳಗಾದ ಎಲ್ಲಾ ಖೈದಿಗಳನ್ನು ಬಿಡುಗಡೆಗೊಳಿಸಬೇಕು.

ಕೋಮು ಹಿಂಸಾಚಾರ:-

 •  ಸಂಘಟಿತ ಮತ್ತು ಕೋಮು ಹಿಂಸಾಚಾರದ ವಿರುದ್ಧ ಕೋಮು ಹಿಂಸಾಚಾರ ಮಸೂದೆ 2011ಅನ್ನು ಜಾರಿಗೊಳಿಸಬೇಕು.
 • ಕೋಮು ಗಲಭೆಗಳ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು ರಾಜ್ಯದ ಜವಾಬ್ದಾರಿಯಾಗಿದೆ.
 • ದ್ವೇಷ ಪ್ರಚಾರದ ವಿರುದ್ಧ ಕ್ರಮಕೈಗೊಳ್ಳುವಾಗ ಐಪಿಸಿ ಮತ್ತು ಸಿಆರ್ಪಿಸಿ ಸಂಬಂಧಿತ ನಿಬಂಧನೆಗಳನ್ನು ಕಟ್ಟುನಿಟ್ಟಾಗಿಸಬೇಕು.
 • ಚುನಾಯಿತರನ್ನೊಳಗೊಂಡಂತೆ ಸಾರ್ವಜನಿಕ ಪ್ರತಿನಿಧಿಗಳು ದ್ವೇಷ ಉಂಟು ಮಾಡುವ ಯಾವುದೇ ಕೃತ್ಯದಲ್ಲಿ ಭಾಗಿಯಾದಾಗ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು.
 • ಜನರನ್ನು ಕೋಮು ಆಧಾರಿತವಾಗಿ ಧ್ರುವೀಕರಿಸುವ ಉದ್ದೇಶದ ಚುನಾವಣಾ ಪ್ರಚಾರಗಳು ಗುರುತಿಸಬಹುದಾದ ಅಪರಾಧವಾಗಿದೆ. ಇದರಿಂದಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಳಿಸಬೇಕು.

 ಅಲ್ಪಸಂಖ್ಯಾತರ ಆಯೋಗ:-

 • ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಅಲ್ಪಸಂಖ್ಯಾತರ ಆಯೋಗಗಳಿಗೆ ನ್ಯಾಯಾಂಗ ಅಧಿಕಾರವನ್ನು ನೀಡಬೇಕು.

ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ:-

 • ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಸಾಮಾಜಿಕ ಬಹಿಷ್ಕಾರ ಮತ್ತು ದೌರ್ಜನ್ಯವನ್ನು ತಡೆಗಟ್ಟಲು ಎಸ್ಸಿ-ಎಸ್ಟಿ ದೌರ್ಜನ್ಯ ತಡೆಗಟ್ಟುವಿಕೆ ಕಾಯ್ದೆಯ ಮಾದರಿಯಲ್ಲಿ ಕಠಿಣ ಕಾನೂನುಗಳನ್ನು ಜಾರಿಗೆ ತರವುದು.
 •  ಗುಂಪು ಹತ್ಯೆಯನ್ನು ತಡೆಗಟ್ಟಲು ಮತ್ತು ಘಟನೆಯ ಕಾರಣಕರ್ತರಿಗೆ ಶಿಕ್ಷೆ ವಿಧಿಸಲು ಕಾನೂನನ್ನು ಜಾರಿಗೊಳಿಸಬೇಕು. ಆಡಳಿತ ವ್ಯವಸ್ಥೆಯು ಇಂತಹ ಘಟನೆಗಳಿಗೆ ಜವಾಬ್ದಾರಿಯಾಗಿದೆ.

ಪ್ರಾತಿನಿಧ್ಯದ ಸಮಸ್ಯೆಗಳು:-

ಪ್ರಾತಿನಿಧ್ಯ ಮತ್ತು ಮೀಸಲಾತಿ:

 • ಜನಸಂಖ್ಯೆಗೆ ಅನುಗುಣವಾಗಿ ಸರಕಾರದಿಂದ ನಾಮಕರಣಗೊಂಡ ಶಾಸಕಾಂಗಗಳಲ್ಲಿರುವ ಎಲ್ಲಾ ಸಾಮಾಜಿಕ ಗುಂಪುಗಳು ಮತ್ತು ಆಡಳಿತಾತ್ಮಕ ಸಂಸ್ಥೆಗಳ ಅರ್ಹ ಪ್ರಾತಿನಿಧ್ಯವನ್ನು ಖಾತರಿಪಡಿಸಬೇಕು.
 • ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರ ಪ್ರತ್ಯೇಕ ಕೋಟಾ ಮೀಸಲಾತಿಯನ್ನು ಪರಿಚಯಿಸಬೇಕು.
 • ಹುದ್ದೆ ಮತ್ತು ವಿಶೇಷ ನೇಮಕಾತಿಯ ಮೂಲಕ ಎಲ್ಲಾ ಕೇಂದ್ರೀಯ ಮತ್ತು ರಾಜ್ಯ ತನಿಖಾ/ಗುಪ್ತಚರ ಸಂಸ್ಥೆಗಳಲ್ಲಿ ಮುಸ್ಲಿಮರಿಗೆ ಸಮರ್ಪಕ ಪ್ರಾತಿನಿಧ್ಯವನ್ನು ಪರಿಚಯಿಸಬೇಕು.
 • ಶಿಕ್ಷಣ ಮತ್ತು ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿ ವ್ಯವಸ್ಥೆಯ ಕಟ್ಟುನಿಟ್ಟಾದ ಅನುಷ್ಠಾನಕ್ಕಾಗಿ ಸಮಗ್ರ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಬೇಕು.
 • ಯಾವುದೇ ರೀತಿಯ ಸರಕಾರದ ಬೆಂಬಲವನ್ನು ಪಡೆಯುವ ಖಾಸಗಿ ವಲಯದ ಉದ್ಯಮಗಳಲ್ಲಿ ಮೀಸಲಾತಿಯನ್ನು ಪರಿಚಯಿಸಬೇಕು.
 • ಎಸ್ಸಿ/ಎಸ್ಟಿಗಳಿಗೆ ಅನ್ವಯಿಸುವ ವಿಶೇಷ ನೇಮಕಾತಿಗಳನ್ನು ಪ್ರಾತಿನಿಧ್ಯವಿಲ್ಲದ ಇತರ ವರ್ಗಗಳು ಮತ್ತು ಸಮುದಾಯಗಳಿಗೂ ವಿಸ್ತರಿಸಬೇಕು.
 • ಜನಸಂಖ್ಯಾನುಪಾತದ ಪ್ರಕಾರ, ಪೊಲೀಸ್ ಪಡೆಗಳು ಮತ್ತು ಸಶಸ್ತ್ರ ಪಡೆಗಳಲ್ಲಿ ಪ್ರಾತಿನಿಧ್ಯವಿಲ್ಲದ ಎಲ್ಲಾ ಗುಂಪುಗಳು, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಾತಿನಿಧ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.
 • ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿರುವ ಹುದ್ದೆಗಳಲ್ಲಿ ಸಮುದಾಯ ಕೋಟಾ ಮೀಸಲಾತಿಯನ್ನು ಪರಿಚಯಿಸಬೇಕು.
 • ಜಾತಿ ತಾರತಮ್ಯವನ್ನು ತೆಗೆದುಹಾಕಲು ಅನುಸೂಚಿತ ಜಾತಿಗಳ ಮೀಸಲಾತಿ ಕುರಿತು 1950ರ ಅಧ್ಯಕ್ಷೀಯ ಆದೇಶ(ಎಸ್ಸಿ/ಎಸ್ಟಿ)ಯ ತಿದುಪಡಿಯು ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವಿನ ಅತಿ ತುಳಿತಕ್ಕೊಳಗಾದ ವರ್ಗಗಳನ್ನೂ ತನ್ನ ವ್ಯಾಪ್ತಿಗೆ ತಂದಿದೆ.

 ಮಿಶ್ರಾ ಆಯೋಗ:-

 • ಮುಸ್ಲಿಮರಿಗೆ ಶೇ.10 ಮೀಸಲಾತಿಯೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರ ಶೇ.15ರಷ್ಟು ಮೀಸಲಾತಿಯ ಜಸ್ಟಿಸ್ ರಂಗನಾಥ್ ಮಿಶ್ರಾ ಆಯೋಗದ ಶಿಫಾರಸನ್ನು ಅನುಷ್ಠಾನಗೊಳಿಸಬೇಕು.
 • ಪರಿಶಿಷ್ಟ ಜಾತಿಯವರ ಸೌಲಭ್ಯಗಳನ್ನು ಸಮಾನ ಜೀವನೋಪಾಯದಲ್ಲಿ ತೊಡಗಿರುವ ಕ್ರಿಶ್ಚಿಯನ್ ಮತ್ತು ಮುಸ್ಲಿಮರ ನಡುವಿನ ಸಾಮಾಜಿಕ ಗುಂಪುಗಳಿಗೆ ವಿಸ್ತರಿಸಬೇಕು.

ಮುಸ್ಲಿಮ್ ಬಾಹುಳ್ಯ ಕ್ಷೇತ್ರಗಳನ್ನು ಮೀಸಲಿಡಿ:-

 • ಗಮನಾರ್ಹವಾದ ಮುಸ್ಲಿಮ್ ಜನಸಂಖ್ಯೆಯನ್ನು ಹೊಂದಿರುವ ಸಂಸತ್ತು ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಎಸ್ಸಿ/ಎಸ್ಟಿ ಮೀಸಲಾತಿ ಕ್ಷೇತ್ರಗಳನ್ನಾಗಿ ಮಾಡಬಾರದು.

ಚುನಾವಣಾ ಸುಧಾರಣೆಗಳು:-

 •  ಶಾಸಕಾಂಗಗಳಲ್ಲಿ ಅನುಪಾತದ ಪ್ರಾತಿನಿಧ್ಯವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರಸಕ್ತ ಚುನಾವಣಾ ವ್ಯವಸ್ಥೆಯನ್ನು ಮಾರ್ಪಡಿಸಬೇಕು.

ಶೈಕ್ಷಣಿಕ ಸಮಸ್ಯೆಗಳು:-

 • ಸಂಬಂಧಿತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ದಾಖಲಾತಿ ಮತ್ತು ಸಿಬ್ಬಂದಿಗಳ ನೇಮಕಾತಿಯಲ್ಲಿ ಅಲ್ಪಸಂಖ್ಯಾತರ ಸಂಸ್ಥೆಗಳ ಆಡಳಿತವನ್ನು ಮತ್ತಷ್ಟು ಉತ್ತರದಾಯಿಯನ್ನಾಗಿ ಮಾಡಬೇಕು.
 • ಎಲ್ಲಾ ಸರಕಾರಿ ಮತ್ತು ಸರಕಾರಿ ಅನುದಾನಿತ ಶೈಕ್ಷಣಿಕ ಸಂಸ್ಥೆಗಳು ಮುಸ್ಲಿಮ್ ಸಮುದಾಯದ ಶೇ.15ರಷ್ಟು ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಉರ್ದು ಭಾಷಿಕ ಪ್ರದೇಶಗಳಲ್ಲಿ ಅನುಮೋದಿತ ಕೆಲಸಕ್ಕನುಗುಣವಾಗಿ ಉರ್ದು ಶಿಕ್ಷಕರನ್ನು ನೇಮಿಸಬೇಕು.
 • ಎಎಂಯು ಮತ್ತು ಅಲ್ಪಸಂಖ್ಯಾತರ ಸಂಸ್ಥೆಗಳು
 • ವಿಶೇಷ ಕಾನೂನು ರೂಪಿಸುವ ಮೂಲಕ ಎಎಂಯುವಿನ ಅಲ್ಪಸಂಖ್ಯಾತರ ಸ್ಥಾನಮಾನವನ್ನು ಪುನಃಸ್ಥಾಪಿಸಿ.
 • ಸಂವಿಧಾನದ 29 ಮತ್ತು 30ರ ಅನುಚ್ಛೇದದ ನಿಬಂಧನೆಯ ಪ್ರಕಾರವಾಗಿ ಇತರ ಅಲ್ಪಸಂಖ್ಯಾತರ ಸಂಸ್ಥೆಗಳ ಅಲ್ಪಸಂಖ್ಯಾತ ವೈಶಿಷ್ಟತೆಯನ್ನು ಸುರಕ್ಷಿತವಾಗಿರಿಸಬೇಕು.

 ಪಠ್ಯಕ್ರಮಗಳು ಕೇಸರೀಕರಣದಿಂದ ಮುಕ್ತವಾಗಲಿ:-

 • ಬಿಜೆಪಿ ಆಡಳಿತವಿರುವ ಕೇಂದ್ರ ಮತ್ತು ರಾಜ್ಯಗಳಡಿಯಲ್ಲಿ ಮೆಲ್ಲಮೆಲ್ಲನೆ ಅನುಷ್ಠಾನಗೊಳಿಸಲಾದ ಕೇಸರೀಕರಣವನ್ನು ತೆಗೆದುಹಾಕಲು ಶಾಲೆಗಳ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪಠ್ಯಕ್ರಮವನ್ನು  ಪುನರ್ರಚಿಸಬೇಕು.
 • ಸರಕಾರಿ ಶಾಲೆಗಳು
 • ಮುಖ್ಯವಾಗಿ ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲ ವರ್ಗಗಳು ಅವಲಂಬಿಸಿರುವ ಸರಕಾರಿ ಮತ್ತು ಸರಕಾರಿ ಅನುದಾನಿತ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕು.
 • ಗುಣಮಟ್ಟದ ಶಿಕ್ಷಣವನ್ನು ಖಾತರಿಪಡಿಸಲು ವಿಶೇಷವಾಗಿ ಸ್ಥಳೀಯ ಅಥವಾ ಮಾಧ್ಯಮವು ಉರ್ದುವಾಗಿರುವಂತಹ ಯಾವುದೇ ಅಲ್ಪಸಂಖ್ಯಾತರ ಭಾಷಿಕ ಶಾಲೆಗಳಲ್ಲಿ ಸಾಮಾಜಿಕ ನಿಯಂತ್ರಣವನ್ನು ಪರಿಚಯಿಸಬೇಕು ಮತ್ತು ಜಾಗೃತಿಯನ್ನು ಮೂಡಿಸಬೇಕು.

ಸಾಂಸ್ಕೃತಿಕ ವಿಚಾರಗಳು:-

 •  ಮುಸ್ಲಿಮ್ ವೈಯಕ್ತಿಕ ಕಾನೂನು
 •   ತ್ರಿವಳಿ ತಲಾಖ್ ಕುರಿತ ವಿವಾದಿತ ಕಾನೂನನ್ನು ನಾಗರಿಕ ಕಾನೂನುಗಳ ವ್ಯಾಪ್ತಿಯೊಳಗೆ ತರಬೇಕು, ಹೊರತು ಅಪರಾಧಿಕ ಕಾನೂನುಗಳ ವ್ಯಾಪ್ತಿಗಲ್ಲ.

 ಆರಾಧನಾ ಮತ್ತು ಸ್ಮಾರಕ ಸ್ಥಳಗಳು:-

 • ಅನುಮತಿಯನ್ನು ಸರಳಗೊಳಿಸುವ ಪ್ರಕ್ರಿಯೆಯ ಮೂಲಕ ಮಸ್ಜಿದ್ ಮತ್ತು ದಫನಭೂಮಿಗಳ ಕಾಮಗಾರಿಗಳ ಅಡಚಣೆಗಳನ್ನು ನಿವಾರಿಸಬೇಕು.
 •  ಎಲ್ಲಾ ಆರಾಧನಾ ಸ್ಥಳಗಳ ಸ್ಥಾನಮಾನವನ್ನು ಆಗಸ್ಟ್ 15, 1947ರಂತೆ ರಕ್ಷಿಸಬೇಕು. ನಂತರ ಧ್ವಂಸಗೊಳಿಸಲಾದ ಕಟ್ಟಡಗಳನ್ನು ಪುನರ್ನಿರ್ಮಿಸಬೇಕು ಮತ್ತು ಅವುಗಳನ್ನು ಸಂಬಂಧಿತ ಸಮುದಾಯಗಳಿಗೆ ವರ್ಗಾಯಿಸಬೇಕು.
 •  ಎಲ್ಲಾ ಆರಾಧನಾ ಸ್ಥಳಗಳನ್ನು, ವಿಶೇಷವಾಗಿ ಮಸ್ಜಿದ್ಗಳನ್ನು ಆರ್ಕಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ(ಎಎಸ್ಐ)ಯಾದ ನಿಯಂತ್ರಣದಲ್ಲಿರಿಸಬೇಕು ಮತ್ತು ಅವುಗಳನ್ನು ನಿತ್ಯ ಆರಾಧನಾ ಕರ್ಮಗಳಿಗಾಗಿ ತೆರೆದಿಡಬೇಕು.
 •  ಪುರಾತನ ಸ್ಮಾರಕ ಸಂರಕ್ಷಣಾ ಕಾಯ್ದೆ 1904ನ್ನು ಪರಿಶೀಲನೆ ಮತ್ತು ತಿದ್ದುಪಡಿಗೊಳಪಡಿಸಬೇಕು.
 •  ದ್ವೇಷ ಪ್ರಚಾರವನ್ನು ಕಾನೂನು ಕ್ರಮದ ಮೂಲಕ ತಡೆಯಬೇಕು.
 •  ಕೋಮು ದ್ವೇಷ ಹರಡಲು ಮತ್ತು ಶಸ್ತ್ರ ತರಬೇತಿಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆರಾಧನಾ ಸ್ಥಳಗಳ ದುರ್ಬಳಕೆ ಮಾಡುವುದನ್ನು ತಡೆಯಬೇಕು.
 •  ಬಾಬರಿ ಮಸ್ಜಿದ್ ಧ್ವಂಸಗೊಂಡ ಬಳಿಕ ಯಾವುದೇ ವಿಳಂಬವಿಲ್ಲದೆ ಯಥಾಸ್ಥಳದಲ್ಲಿ ಮಸ್ಜಿದ್ ನಿರ್ಮಿಸಲಾಗುವುದು ಎಂದು ಸರಕಾರವು ದೇಶಕ್ಕೆ ನೀಡಿದ ವಾಗ್ದಾನವನ್ನು ಕೂಡಲೇ ಈಡೇರಿಸಬೇಕು.
 •  ಬಾಬರಿ ಮಸ್ಜಿದ್ ಧ್ವಂಸದ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರೆಲ್ಲರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕೈಗೆತ್ತಿಕೊಂಡ ಕ್ರಿಮಿನಲ್ ಪ್ರಕರಣಗಳ ಕುರಿತು ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು. ಧ್ವಂಸದಲ್ಲಿ ಭಾಗಿಯಾದವರೆಂದು ಲಿಬರ್ಹಾನ್ ಆಯೋಗವು ಗುರುತಿಸಿದ ವ್ಯಕ್ತಿಗಳ ವಿರುದ್ಧ ಸರಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು.

  ಉರ್ದು:-

 •  ಭಾರತದ ವಿಭಿನ್ನ ಪ್ರದೇಶಗಳಲ್ಲಿ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿದ ಉರ್ದು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ಭಾಷೆಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

 ಹಜ್:-

 • ಪ್ರಯಾಣ ವೆಚ್ಚ ಮತ್ತು ಖಾಸಗಿ ಏಜೆನ್ಸಿಗಳ ಪಾತ್ರವನ್ನು ಕಡಿಮೆಗೊಳಿಸುವ ಮೂಲಕ ಸರಕಾರಿ ಕೋಟಾದಲ್ಲಿ ಗರಿಷ್ಠ ಯಾತ್ರಿಕರಿಗೆ ಹಜ್ ನಿರ್ವಹಣೆಯನ್ನು ಖಾತರಿಪಡಿಸಲು ಹಜ್ ನಿಯಮಗಳನ್ನು ನವೀಕರಿಸಬೇಕು.

 ಇತರ ವಿಚಾರಗಳು:

ಮಹಿಳಾ ಸಬಲೀಕರಣ:-

 • ಎಸ್ಸಿ, ಎಸ್ಟಿ, ಓಬಿಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಸೇರಿದ ಮಹಿಳೆಯರಿಗೆ ವಿಶೇಷ ಕೋಟಾದೊಂದಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿಯ ಕಾನೂನನ್ನು ತರಬೇಕು.
 • ಕಡಿಮೆ ಸಾಕ್ಷರತೆ ಹೊಂದಿರುವ ಪಟ್ಟಣ ಮತ್ತು ಹಳ್ಳಿಗಳಿಗೆ ಸೇರಿದ ಅಲ್ಪಸಂಖ್ಯಾತರ ಹುಡುಗಿಯರಿಗೆ ವಿಶೇಷ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಬೇಕು.
 • ಉದಾರೀಕೃತ ಸೌಲಭ್ಯಗಳು ಮತ್ತು ಉದ್ಯೋಗ ಸೃಷ್ಟಿಯ ಮೂಲಕ ಮಹಿಳಾ ಸ್ವ ಸಹಾಯ ಗುಂಪುಗಳ ಜಾಲಕ್ಕೆ ಸರಕಾರವು ನೆರವು ಕಲ್ಪಿಸಬೇಕು.

ಮರಳಿದ ವಲಸಿಗರು:-

 • ವಿದೇಶದಲ್ಲಿ ದುಡಿಯುತ್ತಿರುವ ಎನ್ಆರ್ಐಗಳ ರಕ್ಷಣೆ ಮತ್ತು ಮರಳಿ ಬಂದವರ ಪುನರ್ವಸತಿಗಾಗಿ ಪ್ರತ್ಯೇಕ ಸಚಿವಾಲಯವನ್ನು ರಚಿಸಬೇಕು.

ಈ ಮೇಲಿನ ಪಟ್ಟಿಯನ್ನು ಮುಸ್ಲಿಮ್ ರಾಜಕೀಯ ಸಮಾವೇಶ ಬಿಡುಗಡೆಗೊಳಿಸಿದ್ದು, ನಕಲಿ ಜಾತ್ಯಾತೀತ ಮುಖವಾಡ ಹೊತ್ತು ಈ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಓಲೈಸುವುದು ಬೇಡವೆಂದು ಖಾರವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್, ರಾಜ್ಯ ಸಮಿತಿ ಸದಸ್ಯರಾದ ಇಲ್ಯಾಸ್ ಅಹ್ಮದ್, ಶಾಫಿ ಬೆಳ್ಳಾರೆ, ಬೆಂಗಳೂರು ಜಿಲ್ಲಾಧ್ಯಕ್ಷ ಝಫರುಲ್ಲಾ ಖಾನ್ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group