ರಾಷ್ಟ್ರೀಯ ಸುದ್ದಿ

ಏಕತೆಯ ಪ್ರತಿಮೆಗಾಗಿ ಕೆಲಸ ಮಾಡಿದ ಕಾರ್ಮಿಕರಿಗೆ 3 ತಿಂಗಳಿಂದ ಸಂಬಳವೇ ಇಲ್ಲ: ಕಾರ್ಮಿಕರಿಂದ ಪ್ರತಿಭಟನೆ

ವರದಿಗಾರ (ಮಾ.11): ಸುಮಾರು ಮೂರು ತಿಂಗಳುಗಳಿಂದ ವೇತನ ಸಿಗದೆ ಕಂಗಾಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲರ ಏಕತೆಯ ಪ್ರತಿಮೆಗಾಗಿ ಕೆಲಸ ಮಾಡಿದ 100ಕ್ಕೂ ಹೆಚ್ಚು ಕಾರ್ಮಿಕರು ಈ ಬಗ್ಗೆ ಪ್ರತಿಭಟನೆ ನಡೆಸಿದ್ದು, ತಮ್ಮ ಹಕ್ಕನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಏಕತೆಯ ಪ್ರತಿಮೆಗಾಗಿ ಕಂಪೆನಿಯೊಂದರ ಕೆಳಗೆ ಕೆಲಸ ಮಾಡುತ್ತಿರುವ ಈ ಕಾರ್ಮಿಕರು ತಮ್ಮನ್ನು ಶೋಷಿಸಲಾಗಿದೆ ಎಂದು ಆರೋಪಿಸಿದ್ದಾರೆ. ತಮಗೆ ಬಾಕಿಯಿರುವ ಸಂಬಳಕ್ಕೆ ಆಗ್ರಹಿಸಿ ಕಾರ್ಮಿಕರು ಏಕತೆಯ ಪ್ರತಿಮೆಯ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.

ಸಂಬಳ ಸಿಗದೆ ಇರುವ ಕಾರಣ ನಮ್ಮ ಬದುಕು ಕಷ್ಟವಾಗಿದೆ ಎಂದು ಭದ್ರತಾ ಸಿಬ್ಬಂದಿ, ಗಾರ್ಡನರ್ ಗಳು, ಕಸ ಗುಡಿಸುವವರು, ಲಿಫ್ಟ್ ಮೆನ್, ಟಿಕೆಟ್ ಪರಿಶೀಲಕರಾಗಿ ಕೆಲಸ ಮಾಡುತ್ತಿರುವ ಪುರುಷ ಮತ್ತು ಮಹಿಳಾ ಕಾರ್ಮಿಕರು ಆರೋಪಿಸಿದ್ದಾರೆ ಎಂದು ನ್ಯೂಸ್ ಸೆಂಟ್ರಲ್ ವರದಿ ಮಾಡಿದೆ.

ಅತ್ಯಂತ ಎತ್ತರದ ಪ್ರತಿಮೆ ನಿರ್ಮಿಸಿದ ಖ್ಯಾತಿಗೆ ಕಾರಣಕಾರ್ತರಾದ ಕಾರ್ಮಿಕರ ವೇತನವನ್ನು ನೀಡದೆ ಅವರನ್ನು ಸಂಕಷ್ಟದಲ್ಲಿರಿಸುವುದು ಎಷ್ಟು ಸರಿ?. ಎತ್ತರ ಕೇವಲ ಫೋಟೋ ಹಿಡಿಯಲು ಮಾತ್ರವಾಗಿರಬೇಕು. ಫೋಟೋ ಹಿಡಿದ ಬಳಿಕ (ತಮ್ಮ ಕೆಲಸ ಮುಗಿದ ಬಳಿಕ) ಕಾರ್ಮಿಕರು ಸಂಕಷ್ಟದಲ್ಲಿದ್ದರೆ ಅವರಿಗೇನು ಅಲ್ಲವೇ???

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group