ರಾಜ್ಯ ಸುದ್ದಿ

ಕಲ್ಲಡ್ಕ ಭಟ್, ಅಮಿತ್ ಶಾ, ಮೋದಿ ಹೇಳುವ ಹಿಂದೂ ಧರ್ಮದ ಬಗ್ಗೆ ನನ್ನ ಧಿಕ್ಕಾರವಿದೆ: ಅಮೀನ್ ಮಟ್ಟು

ಆರೆಸ್ಸೆಸ್, ಬಿಜೆಪಿ ಮುಗ್ದ ಯುವಕರನ್ನು ತಮ್ಮ ರಾಜಕೀಯಕ್ಕಾಗಿ ಬಳಸಿ ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ: ಮಹೇಂದ್ರ ಕುಮಾರ್

ವರದಿಗಾರ (ಮಾ.11): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರದಾನಿ ನರೇಂದ್ರ ಮೋದಿ ಹೇಳುವ ಹಿಂದೂ ಧರ್ಮದ ಬಗ್ಗೆ ನನಗೆ ಧಿಕ್ಕಾರವಿದೆ ಎಂದು ಹಿರಿಯ ಪತ್ರಕರ್ತ, ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ಅವರು ಆದಿತ್ಯವಾರ ನಮ್ಮ ಧ್ವನಿ ಬಳಗವು ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ “ಪ್ರಬುದ್ಧ ಭಾರತ” ಸಂವಾದ ಕಾರ್ಯಕ್ರಮದ ‘ಅನನ್ಯ ಭಾರತ ಮತ್ತು ಅನುಪಮ ಭಾರತ’ ಎಂಬ ವಿಷಯದಲ್ಲಿ ಮಾತನಾಡುತ್ತಾ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ ಸುದೀರ್ ಕುಮಾರ್ ಮುರೋಳಿ ಭಾಷಣದಲ್ಲಿ ‘ನಮಗೆ ಯೋಗಿ ಆದಿತ್ಯನಾಥ್ ಹೇಳುವ ಹಿಂದೂ ಧರ್ಮ ಬೇಕಾಗಿಲ್ಲ’ ಎಂಬುವುದನ್ನು ಅಮೀನ್ ಮಟ್ಟು ಉಲ್ಲೇಖಿಸುತ್ತಾ, ‘ನಮಗೆ ವಿವೇಕಾನಂದರು, ನಾರಾಯಣ ಗುರು, ಮಹಾತ್ಮಾ ಗಾಂಧೀಜಿಯವರು ಹೇಳಿದ ಹಿಂದೂ ಧರ್ಮದಲ್ಲಿ ತಕರಾರಿಲ್ಲ. ಆದರೆ ಕಲ್ಲಡ್ಕ ಪ್ರಭಾಕರ ಭಟ್ ಹೇಳುವ ಹಿಂದೂ ಧರ್ಮದ ಬಗ್ಗೆ ಧಿಕ್ಕಾರವಿದೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿ ಹೇಳುವ ಹಿಂದೂ ಧರ್ಮದ ಬಗ್ಗೆ ಧಿಕ್ಕಾರವಿದೆ ಇದನ್ನು ಹೇಳಲು ನನಗೇನೂ ಮುಜುಗರವಿಲ್ಲ’ ಎಂದು ಅಮೀನ್ ಮಟ್ಟು ಹೇಳಿದ್ದಾರೆ.

ಬಿಜೆಪಿಯ ನಿಜವಾದ ಮುಖವಾಡಗಳು ವಾಜಪೇಯಿ, ಅಡ್ವಾಣಿ, ಮೋದಿ, ಯಡಿಯೂರಪ್ಪ, ಸದಾನಂದ ಗೌಡ ಅಲ್ಲ. ಬದಲಾಗಿ ನಾಗ್ಪುರಾ ಮತ್ತು ಕೇಶವಕೃಪದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್ ಮುಖಂಡರಾಗಿದ್ದಾರೆ. ಹಾಗಾಗಿ ನಾವು ಬಿಜೆಪಿಯ ಮೂಲ ಸಿದ್ಧಾಂತಗಳನ್ನು ತಿಳಿದು ಅದರ ವಿರುದ್ಧ ಪರ್ಯಾಯ ರಾಜಕಾರಣ ಮಾಡಬೇಕು. ಇಂದಿನ ಯುವಕರಿಗೆ ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಮತ್ತು ಸ್ವಾಮೀ ವಿವೇಕಾನಂದರು ಪ್ರತಿಪಾದಿಸಿದ ರಾಜಕಾರಣದ ಬಗ್ಗೆ ತಿಳುವಳಿಕೆ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸಭಾ ಸದಸ್ಯರಾದ ಡಾ.ಎನ್ ಹನುಮಂತಯ್ಯ ಮಾತನಾಡಿ, ಬಿಜೆಪಿ ಹಾಗೂ ಆರೆಸ್ಸೆಸ್ ಟೊಳ್ಳು ದೇಶಭಕ್ತಿಯನ್ನು ಜನತೆಯ ಮೇಲೆ ಹೇರಲು ಬಂದರೆ ಅವರಿಗೆ ಜನಸಾಮಾನ್ಯರು ನಿಜವಾದ ದೇಶ ಭಕ್ತಿಯನ್ನು ಪಾಠ ಮಾಡುವ ಮೂಲಕ ಸರಿಯಾಗಿ ತಿರುಗೇಟು ನೀಡಬೇಕು ಎಂದು ಕರೆ ನೀಡಿದ್ದಾರೆ.

ನಮ್ಮ ಧ್ವನಿ ಬಳಗದ ಸ್ಥಾಪಕ, ಮಾಜಿ ಬಜರಂಗದಳದ ಸಂಚಾಲಕ ಮಹೇಂದ್ರ ಕುಮಾರ್ ಮಾತನಾಡಿ, ಆರೆಸ್ಸೆಸ್, ಬಿಜೆಪಿ ಮುಗ್ದ ಯುವಕರನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡು ಅವರ ಮೇಲೆ ಕೇಸು ಹಾಕಿಸಿಕೊಂಡು ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ. ಕೇಸಿನ ಬಳಿಕ ಯಾವೊಬ್ಬನೂ ತಿರುಗಿ ನೋಡುವುದಿಲ್ಲ. ಇದರಲ್ಲಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವವರು ಬಡವರ್ಗವಾಗಿದೆ. ಯಾವ ಯುವಕರೂ ಅವರೊಂದಿಗೆ ಸೇರಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನಾವೆಲ್ಲರೂ ಸೇರಿ ಸೌಹಾರ್ದ, ಶಾಂತಿ, ಸಹೋದರತ್ವದ ಭಾರತವನ್ನು ಕಟ್ಟೋಣ. ಹಿಂದೂ ಎಂದರೆ ಪ್ರೀತಿ. ಪ್ರೀತಿಯ ಮೂಲಕ ದೇಶವನ್ನು ಮುನ್ನಡೆಸೋಣ ಎಂದು ಹೇಳಿದ್ದಾರೆ.

ವೇದಿಕೆಯಲ್ಲಿ ಸುದೀರ್ ಕುಮಾರ್ ಮುರೋಳಿ, ವೈಎಸ್ವಿ ದತ್ತ ಉಪಸ್ಥಿತರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group