ರಾಜ್ಯ ಸುದ್ದಿ

ದೇಶವು ಸುರಕ್ಷಿತರ ಕೈಯ್ಯಲ್ಲಿದೆ ಎಂದ ಮೋದಿ ಆಡಳಿತದಲ್ಲಿಯೇ ಅತ್ಯಂತ ಹೆಚ್ಚು ಮಹಿಳಾ ದೌರ್ಜನ್ಯವಾಗಿದೆ: ಲುಬ್ನ ಸಿರಾಜ್

ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ವಿರೋಧಿ ಬಿಜೆಪಿಯನ್ನು ಸೋಲಿಸುವಂತೆ ಪ್ರತಿಜ್ಞೆ

“ಆಗದಿರಲಿ ಸಂತ್ರಸ್ತರು, ಹರಿಯದಿರಲಿ ಕಣ್ಣೀರು” ಎನ್.ಡಬ್ಲ್ಯೂ.ಎಫ್ ನಿಂದ ರಾಷ್ಟ್ರೀಯ ಅಭಿಯಾನದ ಉದ್ಘಾಟನೆ

ವರದಿಗಾರ (ಮಾ.08): ಪ್ರಧಾನಿ ನರೇಂದ್ರ ಮೋದಿಯು ಇತ್ತೀಚೆಗೆ ನೀಡಿರುವ ಹೇಳಿಕೆ “ಭಾರತವು ಸುರಕ್ಷಿತರ ಕೈಯ್ಯಲ್ಲಿದೆ” ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ವುಮೆನ್ಸ್ ಫ್ರಂಟ್ – ಎನ್.ಡಬ್ಲ್ಯೂ.ಎಫ್ ರಾಷ್ಟ್ರೀಯ ಉಪಾಧ್ಯಕ್ಷೆ ಲುಬ್ನ ಸಿರಾಜ್, ‘ದೇಶವು ಸುರಕ್ಷಿತರ ಕೈಯ್ಯಲ್ಲಿದೆ ಎಂದ ಮೋದಿ ಆಡಳಿತದಲ್ಲಿಯೇ ಅತ್ಯಂತ ಹೆಚ್ಚು ಮಹಿಳಾ ದೌರ್ಜನ್ಯವಾಗಿದೆ’ ಎಂದು ಹೇಳಿದ್ದಾರೆ.

ಅವರು ನ್ಯಾಷನಲ್ ವುಮೆನ್ಸ್ ಫ್ರಂಟ್ – ಎನ್.ಡಬ್ಲ್ಯೂ.ಎಫ್ ಕರ್ನಾಟಕ ಘಟಕವು ಬೆಂಗಳೂರಿನ ಹಸನತ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ “ಆಗದಿರಲಿ ಸಂತ್ರಸ್ತರು, ಹರಿಯದಿರಲಿ ಕಣ್ಣೀರು” ರಾಷ್ಟ್ರೀಯ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

‘ಪ್ರಧಾನಿ ಮೋದಿ ಆಡಳಿತದಲ್ಲಿ ಮಹಿಳಾ ದೌರ್ಜನ್ಯಗಳು ಮಿತಿಮೀರಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಮೌನ ಸಮ್ಮತಿ ನೀಡುವುದರ ಮೂಲಕ ಪರೋಕ್ಷವಾಗಿ ಆರೋಪಿಗಳಿಗೆ ಬೆಂಗಾವಳಾಗಿ ನಿಂತಿದ್ದಾರೆ. ವಿಶ್ವ ಮಹಿಳಾ ದಿನವಾದ ಇಂದು ಮಹಿಳಾ ವಿರೋಧಿ ಸರಕಾರವಾಗಿರುವ ಬಿಜೆಪಿಯನ್ನು ಮುಂಬರುವ ಚುನಾವಣೆಯಲ್ಲಿ ಕಿತ್ತೆಸೆಯುವ ಪ್ರತಿಜ್ಞೆಯನ್ನು ನಾವು ಕೈಗೊಳ್ಳಬೇಕೆಂದು ಲುಬ್ನ ಸಿರಾಜ್ ಹೇಳಿದ್ದಾರೆ.”

‘ತ್ರಿಪಲ್ ತಲಾಖ್ ಬಿಲ್ ಜಾರಿಗೊಳಿಸಿರುವ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರಕಾರಕ್ಕೆ ನಿಜವಾಗಿಯೂ ಮಹಿಳೆಯರನ್ನು ಅಭಿವೃದ್ಧಿ ಮುಖ್ಯವೆಂದಾಗಿದಲ್ಲಿ ಶೈಕ್ಷಣಿವಾಗಿ ಮೇಲೆಕ್ಕೆತ್ತುವಂತಹ ಕಾರ್ಯ ಯೋಜನೆ ರೂಪಿಸಬೇಕಾಗಿತ್ತು. ತ್ರಿಪಲ್ ತಲಾಖ್ ಹೆಸರಿನ ಮೂಲಕ ಒಂದು ಸಮುದಾಯವನ್ನು ಮೋದಿ ಗುರಿಯಾಗಿಸಿದ್ದಾರೆ. ತನ್ನ ಪತ್ನಿಯ ನೋವನ್ನು ಅರಿಯದ ಅವರು ಈ ದೇಶದ ಮಹಿಳೆಯರ ಪರ ಚಿಂತಿಸುತ್ತಾರೆ ಎಂಬುವುದು ಹಸ್ಯಾಸ್ವದ’ ಎಂದು ಅವರು ಹೇಳಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಾಹಿಸಿದ್ದ ವಿಮೋಚನಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೊಣ್ಣ ಫೆರ್ನಾಂಡೀಸ್ ಮಾತನಾಡಿ, ಮಹಿಳೆಯರು ಯಾವುದೇ, ಯಾರದೇ ಹೆದರಿಕೆಗಳಿಗೆ ಕಿವಿಕೊಡದೆ ತನ್ನ ಕಾಲ ಮೇಲೆ ನಿಲ್ಲಬೇಕಾಗದ ಅನಿವಾರ್ಯತೆಯಿದೆ. ಮಹಿಳೆಯರು ದೌರ್ಜನ್ಯ, ಅನ್ಯಾಯ, ಸ್ತ್ರೀ ಶೋಷಣೆಯ ವಿರುದ್ಧ ಧ್ವನಿ ಮೊಳಗಿಸಬೇಕು. ಮಹಿಳೆ ಕೇವಲ ಭೋಗದ ವಸ್ತುವಲ್ಲ ಎಂಬುವುದನ್ನು ಕಾಣಿಸಿಕೊಡಬೇಕು. ಎಲ್ಲಾ ರಂಗಗಳಲ್ಲೂ ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದ್ದಾರೆ.

 

ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಷನಲ್ ವುಮೆನ್ಸ್ ಫ್ರಂಟ್ – ಎನ್.ಡಬ್ಲ್ಯೂ.ಎಫ್ ಕರ್ನಾಟಕ ಘಟಕ ಕಾರ್ಯದರ್ಶಿ ಫಾತಿಮಾ ನಸೀಮಾ ಮಾತನಾಡಿ, ಭೇಟಿ ಬಚಾವೋ, ಭೇಟಿ ಪಡಾವೋ ಎಂದು ಹೇಳಿದ ಬಿಜೆಪಿಯಿಂದ “ಭೇಟಿಯನ್ನೇ ಬಚಾವೋ” ಮಾಡಬೇಕಾದ ತುರ್ತು ಅವಶ್ಯಕತೆಯಿದೆ. ಮುಸ್ಲಿಂ ಹಾಗೂ ದಲಿತ ಹಿಂದುಳಿದ ವರ್ಗದ ಮಹಿಳೆಯರು ದೇಶದಲ್ಲಿ ದಿನದಿಂದ ದಿನಕ್ಕೆ ಅತ್ಯಂತ ಹೆಚ್ಚು ದೌರ್ಜನ್ಯಗಳಿಗೆ ಒಳಗಾಗುತ್ತಿದೆ. ಫ್ಯಾಶಿಷ್ಟರು ಮಹಿಳೆಯರ ಶತ್ರುಗಳಾಗಿದ್ದಾರೆ. ರಾಜ್ಯದ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ರವರ ಹತ್ಯೆಯೇ ಇದಕ್ಕೊಂದು ಉದಾಹರಣೆ ಎಂದು ಹೇಳಿದ ಅವರು ಗೌರಿ ಲಂಕೇಶ್ ರವರನ್ನು ಈ ಸಂದರ್ಭ ಸ್ಮರಿಸಿದರು.

ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಜೀವನದ ಪ್ರತಿ ಹಂತದಲ್ಲೂ ಮಹಿಳೆಯ ಸಕ್ರಿಯ ಉಪಸ್ಥಿತಿ ಕಂಡುಬರುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಅವರ ಭದ್ರತೆ ಮತ್ತು ಸುರಕ್ಷತೆಗೆ ಸರ್ಕಾರಗಳು ಹೆಚ್ಚಿನ  ಒತ್ತು ನೀಡಿಲ್ಲ.

ಅಭಿವೃದ್ಧಿಶೀಲ ರಾಷ್ಟ್ರಗಳಿಂದ ಹಿಡಿದು, ಬಡ ಮತ್ತು ತೀರಾ ಹಿಂದುಳಿದ ದೇಶಗಳವರೆಗೆ, ಕೆಲಸದ ಸ್ಥಳದಿಂದ ಹಿಡಿದು ಪೂಜಾಸ್ಥಳವರೆಗೆ ಮಹಿಳೆ ದಿನಂಪ್ರತಿ ದೈಹಿಕ ಹಲ್ಲೆಯಂತಹ ದೌರ್ಜನ್ಯಗಳನ್ನು ಎದುರಿಸಬೇಕಾದ ಪರಿಸ್ಥಿತಿ ಇದೆ. ಕಠಿಣ ಕಾನೂನುಗಳ ಹೊರತಾಗಿಯೂ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಲ್ಲೆ ಪ್ರಮಾಣ ಹೆಚ್ಚಾಗಿದೆ. ನಮ್ಮ ದೇಶದಲ್ಲಂತೂ ಮಹಿಳೆಯರ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.

ಇತ್ತೀಚೆಗೆ ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತ, ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ. ಇಂತಹ ಸಂದರ್ಭಗಳಲ್ಲಿ ಪರಿಣಾಮಕಾರಿ ಕ್ರಮಗಳೊಂದಿಗೆ, ಪರಿಸ್ಥಿತಿಯನ್ನು ಅತ್ಯಂತ ಧೈರ್ಯದಿಂದ ಮತ್ತು ಸ್ವಯಂ ಆತ್ಮವಿಶ್ವಾಸದಿಂದ ಎದುರಿಸಲು ಮಹಿಳೆಯರನ್ನು ತಯಾರುಗೊಳಿಸುವ ಜವಾಬ್ದಾರಿ ಅಧಿಕಾರಿಗಳು, ಸಮಾಜ ಮತ್ತು ಜನ ಸಾಮಾನ್ಯರ ಮೇಲಿದೆ ಎಂದು ವುಮೆನ್ಸ್ ಫ್ರಂಟ್ ಭಾವಿಸುತ್ತದೆ. ಇದಕ್ಕಾಗಿ ಸಂಘಟನೆಯು, “ಆಗದಿರಲಿ  ಸಂತ್ರಸ್ತರು, ಹರಿಯದಿರಲಿ ಕಣ್ಣೀರು” ಎಂಬ ಘೋಷ ವಾಕ್ಯದೊಂದಿಗೆ ರಾಷ್ಟ್ರೀಯ ಅಭಿಯಾನಯವನ್ನು ಹಮ್ಮಿಕೊಂಡಿದೆ ಎಂದು ಹೇಳಿದ್ದಾರೆ.

ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆದ ಸಂದರ್ಭದಲ್ಲಿ ಆಕೆ ಕೈಗೊಳ್ಳಬೇಕಾದ ಸ್ವಯಂ ರಕ್ಷಣಾ ಕಲೆಗಳ ಪ್ರದರ್ಶನ ಕೂಡ ಕಾರ್ಯಕ್ರಮದಲ್ಲಿ ನಡೆಯಲಿದೆ. ಈ ಸಂಬಂಧದ ವೀಡಿಯೋ ಕೂಡ ಬಿಡುಗಡೆಯಾಗಲಿದೆ. ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಕಾನೂನು ಅರಿವು ಮತ್ತು ಸ್ವ ರಕ್ಷಣಾ ತರಬೇತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಈ ಸಂದರ್ಭ ಅವರು ಹೇಳಿದ್ದಾರೆ.

ಮುಖ್ಯ ಅತಿಥಿಗಳಾದ ಡಾ. ಅಸಿಫಾ ನಿಸಾರ್, ಡಾ.ಮಹ್ಜಬೀನ್ ನಾಝ್, ಹೈಕೋರ್ಟ್ ನ್ಯಾಯವಾದಿ ಅಡ್ವಕೇಟ್ ಬದ್ರುನ್ನಿಸಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ವಯಂ ರಕ್ಷಣೆಯ ಕಲೆಗಳನ್ನು, ವೀಡಿಯೋ ಪ್ರದರ್ಶನ ನಡೆಯಿತು.

 

 

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group