ಜಿಲ್ಲಾ ಸುದ್ದಿ

ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಸಲ್ಲಿಸುವವರಿಗೆ OBC/ EWS ಪ್ರಮಾಣ ಪತ್ರ ಶೀಘ್ರದಲ್ಲಿ ನೀಡಲು ಎಸ್ ಡಿ ಪಿ ಐ ಆಗ್ರಹ

SDPI

ವರದಿಗಾರ ಮಾ 5 : ಕೇಂದ್ರ  ಲೋಕಸೇವಾ ಆಯೋಗವು 2019 ರ ಸಾಲಿನ  ಅತ್ಯುನ್ನತ ನಾಗರಿಕ ಸೇವಾ  ಹುದ್ದೆಗಳಾದ ಐ.ಎ.ಎಸ್. ಐ ಪಿ.ಎಸ್, ಐಎಫ್ ಎಸ್ ನಂತವುಗಳಿಗೆ  ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಆಹ್ವಾನಿಸಿದೆ.  ಅರ್ಜಿ ಸಲ್ಲಿಸುವಾಗ ಆಕಾಂಕ್ಷಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೊತೆಗೆ OBC/EWS  ಪ್ರಮಾಣ ಪತ್ರಗಳನ್ನು ಕೂಡ ಸಲ್ಲಿಸಬೇಕಾಗಿದ್ದು, ಬಹಳಷ್ಟು ಮಂದಿ ಆಕಾಂಕ್ಷಿಗಳು ರಾಜ್ಯ ಸರಕಾರ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು OBC/EWSಪ್ರಮಾಣ ಪತ್ರಗಳೆಂದು  ಭಾವಿಸಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿ ವಿಫಲರಾದ ಬಗ್ಗೆ ನಮ್ಮ ಗಮನಕ್ಕೆ ಬಂದಿರುತ್ತದೆ.

ಸಾಮಾನ್ಯವಾಗಿ ತಾಲೂಕು ಮಟ್ಟದಲ್ಲಿ ತಹಶಿಲ್ದಾರರು ನೀಡುವ ಎಲ್ಲಾ ಪ್ರಮಾಣ ಪತ್ರಗಳು, ಅರ್ಜಿ ಸಲ್ಲಿಸಿದ ೨೧ ದಿನಗಳಲ್ಲಿ ದೊರೆಯುತ್ತದೆಯಾದರೂ,  ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು  18-03-2019  ಕೊನೆಯ ದಿನಾಂಕವಾಗಿರುವುದರಿಂದ OBC, EWS ಪ್ರಮಾಣ ಪತ್ರಗಳು ನಿಗದಿ ಸಮಯಕ್ಕೆ ಸರಿಯಾಗಿ ಅಭ್ಯರ್ಥಿಗಳ ಕೈ ಸೇರುವ ಸಾಧ್ಯತೆ ಕಡಿಮೆ ಇದೆ. ಈಗಾಗಲೇ ಹಲವು ಮಂದಿ  ನಾಗರಿಕ ಸೇವಾ  ಹುದ್ದೆಗಳ ಆಕಾಂಕ್ಷಿಗಳು ತಮ್ಮ ಒ.ಬಿ.ಸಿ ಪ್ರಮಾಣ ಪತ್ರಗಳಿಗೆ ಅರ್ಜಿಸಲ್ಲಿದ್ದರೂ,  ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಮೊದಲು, ಈ  ಪ್ರಮಾಣ ಪತ್ರಗಳು ಅವರ ಕೈ ಸೇರುವ ಸಾಧ್ಯ ಇಲ್ಲದಿರುವುದರಿಂದ ಭರವಸೆ  ಕಳೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಗಳು ಕೂಡಲೇ OBC/ EWS ಪ್ರಮಾಣ ಪತ್ರಗಳನ್ನು, ಅಭ್ಯರ್ಥಿಗಳಿಗೆ  ಒಂದು ವಾರದೊಳಗೆ ದೊರೆಯುವಂತೆ ಮಾಡಲು ಎಲ್ಲಾ ತಾಲೂಕು ಕಚೇರಿಗಳಿಗೆ ಸೂಚಿಸಬೇಕಾಗಿ ವಿನಂತಿಸುತ್ತಿದ್ದೇವೆ ಎಂದು ದಕ್ಷಿಣ ಕನ್ನಡ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group