ಸಾಮಾಜಿಕ ತಾಣ

ಲಜ್ಜೆಗೇಡಿ ಪತ್ರಿಕೋದ್ಯಮ : ಕ್ರಿಕೆಟಿನಲ್ಲಿ ಮೋದಿ ಆಸ್ಟ್ರೇಲಿಯಾವನ್ನು ಸೋಲಿಸಿದರೆಂದ ‘ಟೈಮ್ಸ್ ನೌ’!

ವರದಿಗಾರ ಮಾ 03 : ಪ್ರಜಾಪ್ರಭುತ್ವದ ನಾಲ್ಕನೆಯ ಸ್ಥಂಭವೆಂದು ಕರೆಯಲ್ಪಡುವ ಮಾಧ್ಯಮಗಳು ತಮ್ಮನ್ನು ರಾಜಕೀಯ ಪಕ್ಷಗಳಿಗೆ ಮಾರಿಕೊಂಡರೆ ಪರಿಸ್ಥಿತಿ ಹೇಗಿರುತ್ತದೆ ಎಂಬುವುದಕ್ಕೆ ‘ಟೈಮ್ಸ್ ನೌ’ ಎಂಬ ರಾಷ್ಟ್ರೀಯ ಚಾನೆಲ್ ಸ್ಪಷ್ಟ ಉದಾಹರಣೆಯಾಗಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳನ್ನು ಬಿಜೆಪಿಗೆ ಯಾವೆಲ್ಲಾ ಮಟ್ಟದಲ್ಲಿ ರಾಜಕೀಯ ಲಾಭ ತಂದುಕೊಡುತ್ತದೋ ಆ ರೀತಿಯಲ್ಲೇ ವರದಿಗಳನ್ನು ತಿರುಚಿ ಪ್ರಸಾರಿಸುವ ಹಲವು ರಾಷ್ಟ್ರೀಯ ಮಾಧ್ಯಮಗಳ ಪೈಕಿ ‘ಟೈಮ್ಸ್ ನೌ’ ಕೂಡಾ ಒಂದು. ಲಜ್ಜೆಗೇಡಿ ಪತ್ರಿಕೋದ್ಯಮದ ಅತಿ ಕೆಟ್ಟ ಉದಾಹರಣೆಯೆಂಬಂತೆ ನಿನ್ನೆ ಹೈದರಾಬಾದಿನಲ್ಲಿ ನಡೆದಿದ್ದ ಭಾರತ ಮತ್ತು ಅಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತ 6 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಇದರ ಸುದ್ದಿ ‘ಟೈಮ್ಸ್ ನೌ’ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ” ಭಾರತದ ಪ್ರಧಾನಿಗಳು (ಪ್ಮೊಇದ್ನಿಅ) ಆಸ್ಟ್ರೇಲಿಯಾವನ್ನು 6 ವಿಕೆಟ್ ಗಳಿಂದ ಸೋಲಿಸಿದೆ” ಎಂದು ಪ್ರಕಟಿಸಿತ್ತು. ಕೂಡಲೇ ಟ್ವಿಟ್ಟರಿನಲ್ಲಿ “ಟೈಮ್ಸ್ ನೌ” ನ್ನು ಕಾಲೆಳೆಯಲು ಪ್ರಾರಂಭಿಸಿದ ನೇಟಿಜನ್ ಗಳ ಪ್ರಭಾವಕ್ಕೆ ಒಳಗಾಗಿ ‘ಟೈಮ್ಸ್ ನೌ’ ತನ್ನ ಟ್ವೀಟನ್ನು ಹಿಂದೆಗೆದು ಕೊಂಡಿತಾದರೂ, ಅದಾಗಲೇ ಅದರ ಅಸಲಿ ಮುಖ ಜನರೆದುರು ಬಯಲಾಗಿತ್ತು.

‘ಟೈಮ್ಸ್ ನೌ’ ತನ್ನತನವನ್ನು ಕಳೆದುಕೊಂಡ ರೀತಿಯ ಪತ್ರಿಕೋದ್ಯಮವನ್ನು ನಡೆಸಿ ನಗೆಪಾಟಲಿಗೀಡಾಗುತ್ತಿರುವುದು ಇದೇ ಮೊದಲೇನಲ್ಲ. ತನ್ನ ಪಕ್ಷಪಾತೀ ಧೋರಣೆಯ ವರದಿಗಳಿಗಾಗಿ ಪ್ರತಿ ದಿನ ಟ್ವಿಟ್ಟರಾಟಿಗಳಿಂದ ವಿಮರ್ಶೆಗೊಳಪಡುತ್ತಲೇ ಇದೆ. ನಿನ್ನೆಯ ಭಾರತ – ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯಾವಳಿಯ ಶ್ರೇಯಸ್ಸನ್ನು ಕೂಡಾ ಮೋದಿಗೆ ಅರ್ಪಿಸಿರುವ ಟೈಮ್ಸ್ ನೌ ಕೃತ್ಯಕ್ಕೆ ಟ್ವಿಟ್ಟರಿಗರು ಹಲವು ರೀತಿಗಳಲ್ಲಿ ವ್ಯಂಗ್ಯವಾಡಿದ್ದಾರೆ.

https://twitter.com/Justavoice001/status/1101873893072093185

https://twitter.com/PuneBjp4/status/1101875284377288705

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group