ಜಿಲ್ಲಾ ಸುದ್ದಿ

ಬಾಬರಿ ಮಸ್ಜಿದ್ ಪುನರ್ ನಿರ್ಮಾಣ ಸಂವಿಧಾನತ್ಮಕ ಹಕ್ಕು: ಇಲ್ಯಾಸ್ ಮುಹಮ್ಮದ್

‘ಪುನರ್ ನಿರ್ಮಾಣಕ್ಕಾಗಿ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ’

ವರದಿಗಾರ (ಫೆ.28): ಬಾಬರಿ ಮಸೀದಿಯ ಧ್ವಂಸವು ಮುಸ್ಲಿಮರನ್ನು ಸಂವಿಧಾನದಿಂದ ದೂರವಿಡುವ ಬಹುದೊಡ್ಡ ಹುನ್ನಾರವಾಗಿದೆ. ಬಾಬರಿ ಮಸೀದಿ ಪುನರ್ ನಿರ್ಮಿಸಬೇಕು ಎಂಬುದು ಸಂವಿಧಾನತ್ಮಕ ಹಕ್ಕಾಗಿದ್ದು, ಈ ಸಂಬಂಧದ ಹೋರಾಟದ ಕಿಚ್ಚನ್ನು ಮತ್ತಷ್ಟ ಹೆಚ್ಚಿಸಬೇಕಾಗಿದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.

ಅವರು ಎಸ್‍ಡಿಪಿಐ ಹಮ್ಮಿಕೊಂಡಿರುವ ” ಬಾಬರಿ ಮಸ್ಜಿದ್ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ” ಅಭಿಯಾನದ ಅಂಗವಾಗಿ ಬೆಂಗಳೂರಿನ ಎಸ್.ಸಿ.ಎಂ.ಐ ಸಭಾಂಗಣದಲ್ಲಿ ಎಸ್‍ಡಿಪಿಐ ಕರಾವಳಿ ವಿಭಾಗ ಏರ್ಪಡಿಸಿದ್ದ ಸಾಂಸ್ಕøತಿಕ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಸ್ಜಿದ್ ಧ್ವಂಸ ದುರಂತದ ಬಳಿಕ ಸಮಾಜದಲ್ಲಿದ್ದ ಸೌಹಾರ್ದತೆ, ಸ್ನೇಹ ಬಾಂಧವ್ಯ ದೂರವಾಗಿ ಸಮುದಾಯಗಳ ನಡುವೆ ಬೃಹತ್ ಗೋಡೆ ನಿರ್ಮಾಣವಾಗಿದೆ. ಪ್ರೀತಿ, ಮಾನವೀಯತೆಯ ಬದಲಾಗಿ ದ್ವೇಷ ಇಂದು ಎಲ್ಲೆಲ್ಲೂ ರಾರಾಜಿಸುತ್ತಿದೆ. ಐತಿಹಾಸಿಕ ಮಸೀದಿ ಧ್ವಂಸಕ್ಕೆ ಬಿಜೆಪಿಯಷ್ಟೇ ಕಾಂಗ್ರೆಸ್ ಕೂಡ ನೇರ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ಬಾಬರಿ ಮಸೀದಿ ವಿಷಯದಲ್ಲಿ ನ್ಯಾಯ ನಿರಾಕರಿಸುತ್ತಿರುವುದು ಮುಸ್ಲಿಮರಿಗೆ ಮಾತ್ರವಲ್ಲ ಇಡೀ ಭಾರತದ ಪ್ರಜೆಗಳಿಗೆ ಮತ್ತು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಈ ಅನ್ಯಾಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಲು ಮತ್ತು ಬಾಬರಿ ಮಸೀದಿಯ ನೈಜ ಇತಿಹಾಸವನ್ನು ತಿಳಿಸಿಕೊಡಲು ಎಸ್‍ಡಿಪಿಐ ದೇಶಾದ್ಯಂತ ಈ ಅಭಿಯಾನವನ್ನು ಹಮ್ಮಿಕೊಂಡಿದ್ದು, ರಾಜ್ಯದಲ್ಲಿ 1000ಕ್ಕೂ ಅಧಿಕ ಕಾರ್ಯಕ್ರಮ, 150ಕ್ಕೂ ಅಧಿಕ ವಸ್ತು ಪ್ರದರ್ಶನ, 180 ಸಾಂಸ್ಕøತಿಕ ಕಾರ್ಯಕ್ರಮ, 200ಕ್ಕೂ ಅಧಿಕ ನಾಟಕ, 500ಕ್ಕೂ ಅಧಿಕ ವೀಡಿಯೋ ಪ್ರದರ್ಶನಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಸೀದಿ ಧ್ವಂಸದ ವಿಷಯದಲ್ಲಿ ಸುದೀರ್ಘ ನ್ಯಾಯ ವಿಳಂಬದ ಮೂಲಕ ಘನಘೋರ ನ್ಯಾಯ ನಿರಾಕರಣೆ ಮಾಡಲಾಗಿದೆ. ಈ ದುರಂತದ ಬಗ್ಗೆ ತನಿಖೆಗೆ ನೇಮಿಸಿದ್ದ ನ್ಯಾ.ಲಿಬರ್ಹಾನ್ ಆಯೋಗ ವರದಿ ಸಲ್ಲಿಸಲು ಸುದೀರ್ಘ 17 ವರ್ಷಗಳನ್ನು ತೆಗೆದುಕೊಂಡಿತು. 68 ಆರೋಪಿಗಳ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಲಾಯಿತಾದರೂ ಆರೋಪಿಗಳಿಗೆ ಇದುವರೆಗೆ ಯಾವುದೇ ಶಿಕ್ಷೆಯಾಗಿಲ್ಲ. ಈ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ ಅಲಹಾಬಾದ್ ಹೈಕೋರ್ಟ್, ವಿವಾದಿತ ಜಾಗವನ್ನು ಮೂರು ಭಾಗವಾಗಿ ಹಂಚಿಕೆ ಮಾಡಿತು. ಇವೆಲ್ಲವೂ ನಿರಂತರ ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿದರು.

ಡಯೆಟ್ ಸಂಸ್ಥೆಯ ಅಧ್ಯಕ್ಷ ಉಮರ್ ಶರೀಫ್ ಮಾತನಾಡಿ, ರಾಜಕೀಯ ಉದ್ದೇಶ ಸಾಧನೆಗಾಗಿ ಐತಿಹಾಸಿಕ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಅವಮಾನವಾಗುವಂತೆ ವರ್ತಿಸುತ್ತಿದ್ದಾರೆ. ಅವರು ನೀಡಿದ್ದ ಯಾವೊಂದು ಭರವಸೆಯೂ ಈಡೇರಿಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹುನ್ನಾರ ನಡೆಸುತ್ತಿದ್ದಾರೆ. ಈ ಬಗ್ಗೆ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಎಸ್‍ಡಿಪಿಐ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ, ಅಯೋಧ್ಯೆಯಲ್ಲಿ ಮಂದಿರ ಒಡೆದು ಮಸೀದಿ ನಿರ್ಮಿಸಿರಲಿಲ್ಲ. ಆದರೆ ವ್ಯವಸ್ಥಿತ ಷಡ್ಯಂತ್ರದ ಭಾಗವಾಗಿ ಮಸೀದಿಯನ್ನು ವ್ಯವಸ್ಥಿತವಾಗಿ ಧ್ವಂಸಗೊಳಿಸಲಾಯಿತು. ಅಲ್ಲಿ ಮತ್ತೆ ಮಸೀದಿ ನಿರ್ಮಿಸಬೇಕು ಎಂಬುದು ನ್ಯಾಯದ ಪರವಾದ ಬೇಡಿಕೆಯಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಎಸ್‍ಡಿಪಿಐ ಕರಾವಳಿ ವಿಭಾಗದ ಅಧ್ಯಕ್ಷ ಮುಹಮ್ಮದ್ ಇಸ್ಮಾಯೀಲ್, ಪಾಪ್ಯುಲರ್ ಫ್ರಂಟ್ ಕರಾವಳಿ ವಿಭಾಗದ ಅಧ್ಯಕ್ಷ ಸಯ್ಯದ್ ಸುಲ್ತಾನ್, ಬ್ಯಾರಿ ಜಮಾಅತ್ ಮುಖ್ಯಸ್ಥ ಹಾಜಿ ಹುಸೈನ್ ಸಿರಾಜ್ ಉಪಸ್ಥಿತರಿದ್ದರು.

ರಿಲ್ವಾನ್ ಹುಸೈನ್ ವಳಾಲ್ ಕಾರ್ಯಕ್ರಮ ನಿರೂಪಿಸಿ, ಹಾರಿಸ್ ಸುನ್ನತ್‍ಕೆರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿ, ರಸಪ್ರಶ್ನೆ, ವೀಡಿಯೋ ಪ್ರದರ್ಶನ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group