ನಿಮ್ಮ ಬರಹ

ಇದು ಲವ್ ಜಿಹಾದ್ ಅಲ್ಲವಂತೆ…!

-ಇಸ್ಮತ್ ಪಜೀರ್

ವರದಿಗಾರ(ಫೆ.26): ಮೊನ್ನೆ ಪುಲ್ವಾಮಾ ಭಯೋತ್ಪಾದಕ ದಾಳಿ ನಡೆದು ದೇಶಕ್ಕೆ ದೇಶವೇ ಸೂತಕದ ಛಾಯೆಯಲ್ಲಿದ್ದಾಗ ಉತ್ತರ ಪ್ರದೇಶದಲ್ಲೊಂದು ಹೈ ಪ್ರೊಫೈಲ್ ಮದುವೆ ನಡೆಯಿತು.
ಮದುವೆ ಯಾರದ್ದು ಗೊತ್ತೇ…?
ಉತ್ತರ ಪ್ರದೇಶದ ಮಂತ್ರಿ ರಾಮಲಾಲ್ ರ ಸೊಸೆ ಶ್ರೇಯಾ ಗುಪ್ತಾಳದ್ದು.. ವರನ್ಯಾರು ಗೊತ್ತೇ…? ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿಯ ತವರು ಕ್ಷೇತ್ರದ ಶ್ರೀಮಂತ ಯುವಕ ಫೈಝಾನ್ ಕರೀಂ..!
ಈ ಮದುವೆಯೇನು ಕದ್ದು ಮುಚ್ಚಿಯೋ.. ಗಂಡು ಹೆಣ್ಣು ಪರಾರಿಯಾಗಿಯೋ ನಡೆದದ್ದಲ್ಲ. ಇದು ಲವ್ ಕಂ ಅರೇಂಜ್ಡ್ ಮ್ಯಾರೇಜ್. ಅಂದರೆ ಶ್ರೇಯಾ ಗುಪ್ತಾ ಮತ್ತು ಫೈಝಾನ್ ಕರೀಂ ಮಧ್ಯೆ ಪ್ರೇಮಾಂಕುರವಾಯಿತು.
ಅವರು ಬಾಳ ಸಂಗಾತಿಗಳಾಗಲು ನಿರ್ಧರಿಸಿದರು. ಹಿರಿಯರು ಒಪ್ಪಿ ಮದುವೆ ಮಾಡಿ ಕೊಟ್ಟರು. ಒಂದು ವೇಳೆ ಹಿರಿಯರ ವಿರೋಧ ಈ ಮದುವೆಗೆ ಇದ್ದಿದ್ದರೆ ಅಷ್ಟೊಂದು ಅದ್ದೂರಿ ಮದುವೆ ನಡೆಯುತ್ತಿರಲಿಲ್ಲ ಎಂಬುವುದು ಕಾಮನ್‌ ಸೆನ್ಸ್ ಗೆ ನಿಲುಕುವ ವಿಚಾರ. ಆ ಮದುವೆಯಲ್ಲಿ ಬಿಜೆಪಿಯ ಅತಿರಥ ಮಹಾರಥ ನಾಯಕರೆಲ್ಲಾ ಭಾಗವಹಿಸಿದ್ದರು. ಬಿಜೆಪಿ ಪಕ್ಷದ ಮಾತ್ರವಲ್ಲದೇ ವಿವಿಧ ರಾಜ್ಯಗಳ ಬಿಜೆಪಿ ಸರಕಾರಗಳ ಅಧಿಕಾರಸ್ಥರೂ ಭಾಗವಹಿಸಿದ್ದರು. ವಧೂ ವರರನ್ನು ಆಶೀರ್ವದಿಸುವುದರಲ್ಲಿ ಆರೆಸ್ಸೆಸ್ ಮುಖಂಡರೂ ಹಿಂದೆ ಬೀಳಲಿಲ್ಲ. ಯಾಕೆಂದರೆ ಅವರೀರ್ವರೂ ಮದುವೆ ಪ್ರಾಯವಾದವರೇ…
ಅವರ ಬದುಕು ಅವರ ವೈಯಕ್ತಿಕ ನಿರ್ಧಾರ. ಅವರ ಕುಟಂಬಕ್ಕೂ ಸಮ್ಮತಿಯಿದೆ. ಅದರಲ್ಲೇನು ತಪ್ಪು… ಅಲ್ವಾ…?

ಹೌದು, ತಪ್ಪೇನಿಲ್ಲ. ಹೇಳಿ ಕೇಳಿ ಲವ್ ಅಂದರೆ ಮೊದಲು ಒಂದು‌ ಆಕರ್ಷಣೆ… ಆ ಬಳಿಕ ಸ್ನೇಹ…‌ಆ ಬಳಿಕ ಆತ್ಮೀಯತೆ…..ಆ ಬಳಿಕ ಸುಖ ದುಃಖ ಹಂಚಿಕೊಳ್ಳುವಿಕೆ… ಮತ್ತೆ ಒಂದು ಗಟ್ಟಿ ನಿರ್ಧಾರಕ್ಕೆ ಬಂದರೆ ಮದುವೆ.
ಇದು ಭಾರತದಲ್ಲಿ ಉಳ್ಳವರಿಗೆ, ಅಧಿಕಾರಸ್ಥರಿಗೆ ಅನ್ವಯವಾಗುವ ಅಲಖಿತ ಕಾನೂನು.
ಆದರೆ… ಬಡ, ಮಧ್ಯಮ ವರ್ಗದವರಾದರೆ, ಅಧಿಕಾರಸ್ಥರಾದರೆ ಅಲ್ಲಿ ಜಾತಿ ಧರ್ಮಗಳ ಹಸ್ತಕ್ಷೇಪ ಇರಲೇಬೇಕು. ಯಾಕೆಂದರೆ ಅದೊಂದು ಮತ ಕೊಯ್ಲು ಮಾಡಲು ಸಾಧ್ಯವಾಗಬಲ್ಲ ರಾಜಕೀಯ ಇಶ್ಯೂ….
ಉಳ್ಳವರಾದರೆ, ಅಧಿಕಾರಸ್ಥರಾದರೆ ಲವ್ ಮ್ಯಾರೇಜ್….
ಬಡವರು, ಮಧ್ಯಮ ವರ್ಗಿಗಳಾದರೆ ಲವ್ ಜಿಹಾದ್…
ಈ ಪ್ರಕ್ರಿಯೆ ಇದು ಮೊದಲೂ ಅಲ್ಲ, ಕೊನೆಯೂ ಅಲ್ಲ…
ಅಡ್ವಾಣಿ, ಮುರಳೀ ಮನೋಹರ ಜೋಶಿ, ಅಶೋಕ್ ಸಿಂಘಾಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಉಮರ್ ಅಬ್ದುಲ್ಲಾ, ಶಾನವಾಝ್ ಹುಸೇನ್, ಬಾಳಾ ಠಾಕ್ರೆ, ಸುಬ್ರಹ್ಮಣ್ಯ ಸ್ವಾಮಿ… ಹೀಗೆ ಇದಕ್ಕೊಂದು ದೊಡ್ಡ ಪರಂಪರೆಯೇ ಇದೆ. ಇದು ಮುಂದುವರಿಯುತ್ತದೆ ಸಹೋದರರೇ…ನಾವು ಮಾತ್ರ ಜಾತಿ, ಧರ್ಮ ಎಂದು ಕಚ್ಚಾಡುತ್ತಿರೋಣ…

ಮದುವೆ ಕಾರ್ಯಕ್ರಮದ ವರದಿ ಮಾಡಿರುವ ಸುದ್ದಿಯನ್ನು ವೀಕ್ಷಿಸಿ:

(ಕೃಪೆ : ರಿಯಲ್ ಫ್ಲೇವರ್ ನ್ಯೂಸ್)

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group