Uncategorized

ಬೆಂಗಳೂರು ಏರ್ ಶೋ ಬೆಂಕಿ ಅವಘಡ : ಸುಳ್ಳು ಮಾಹಿತಿಯ ವೀಡಿಯೋ ಹಾಕಿ ಮತ್ತೊಮ್ಮೆ ಬೆತ್ತಲಾದ ‘ಪಬ್ಲಿಕ್ ಟಿವಿ’ !

ವರದಿಗಾರ ಫೆ 25 : ಸೂಕ್ಷ್ಮ ವಿಷಯಗಲ್ಲಿ ಮಾಧ್ಯಮಗಳು ಜವಾಬ್ದಾರಿ ಮರೆತರೆ ಹೇಗಿರುತ್ತೆ ಎನ್ನುವುದಕ್ಕೆ ತೀರಾ ಇತ್ತೀಚೆಗಿನ ‘ಪಬ್ಲಿಕ್ ಟಿವಿ’ ಚಾನೆಲ್ ಟೆಲಿಕಾಸ್ಟ್ ಮಾಡಿದ ಸುದ್ದಿ ವೀಡಿಯೋ ಒಂದು ಸಾಕ್ಷಿ.  ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಅಲ್ಲಿನ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿದ್ದವು. ಅದರ ವರದಿ ಮಾಡುತ್ತಿದ್ದ ‘ಪಬ್ಲಿಕ್ ಟಿವಿ’ ಯಾವುದೋ ಹಳೆಯ ಪೆಟ್ರೋಲ್ ಬಂಕ್ ಬೆಂಕಿ ಅವಘಡದ ವೀಡಿಯೋ ಒಂದನ್ನು ಹಾಕಿ ಅದು ಯಲಹಂಕದ ಏರ್ ಶೋ ನಡೆಯುತ್ತಿದ್ದ  ಸ್ಥಳದಲ್ಲಿ ಕಾರುಗಳು ಬೆಂಕಿಗಾಹುತಿಯಾಗುತ್ತಿರುವ ದೃಶ್ಯವೆಂಬಂತೆ ತನ್ನ ಚಾನೆಲಿನಲ್ಲಿ ತೋರಿಸಿತ್ತು.

ಪಬ್ಲಿಕ್ ಟಿವಿ ಪ್ರಸಾರಿಸಿದ ವೀಡಿಯೋ

ವಾಸ್ತವದಲ್ಲಿ ‘ಪಬ್ಲಿಕ್ ಟಿವಿ’ ತನ್ನ ಸುದ್ದಿ ಬಿತ್ತರಿಸುವಾಗ ತೋರಿಸಿದ  ವೀಡಿಯೋದ ಬೆನ್ನು ಹತ್ತಿ ಹೋದಾಗ ಅದು ಯಲಹಂಕದ ಏರ್ ಶೋ ಸ್ಥಳದ ಬೆಂಕಿ ಆಕಸ್ಮಿಕದ್ದಲ್ಲ. ಬದಲಾಗಿ ಕಳೆದ ವರ್ಷ ಹೈದರಾಬಾದಿನಲ್ಲಿ ಪೆಟ್ರೋಲ್ ಬಂಕ್ ಒಂದು ಬೆಂಕಿ ಅವಘಡಕ್ಕೀಡಾಗಿ ಭಸ್ಮವಾಗಿತ್ತು. ಆ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಸೆರೆ ಹಿಡಿದ ವೀಡಿಯೋ ಅದಾಗಿದೆ. ಪೆಟ್ರೋಲ್ ಬಂಕ್ ಅವಘಡದ ವೀಡಿಯೋ ಯೂಟ್ಯೂಬಿನಲ್ಲೂ ಲಭ್ಯವಿದ್ದು, ‘ಟೆಕ್ ನಿಧಿ’ ಎನ್ನುವ ಬಳಕೆದಾರರು 2018, ಜನವರಿ 14 ರಂದು ಅದನ್ನು ಯೂಟ್ಯೂಬಿಗೆ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿಗಳ ಮೂಲಕವೇ ಜನರ ನಡುವೆ ಚರ್ಚೆಗೀಡಾಗುತ್ತಿರುವ ‘ಪಬ್ಲಿಕ್ ಟಿವಿ’ ರಾಜ್ಯದ ಜನತೆಯ ಮುಂದೆ ಮಗದೊಮ್ಮೆ ಬೆತ್ತಲಾಗಿದೆ.

ಯೂಟ್ಯೂಬಿನಲ್ಲಿ ಲಭ್ಯವಿರುವ ವೀಡೀಯೋ

2017 ರ ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಪ್ರೇಕ್ಷಕರ ವೀಕ್ಷಣೆಯಲ್ಲಿ ( TRP) ನಾವೇ ಮುಂದೆ ಎಂಬ ‘ಪಬ್ಲಿಕ್ ಟಿವಿ’ಯ ಮಹಾ ಸುಳ್ಳನ್ನು ಖುದ್ದು “ಟಿವಿ9’,  BARC ನ ಸೂಕ್ತ ಅಂಕಿ ಅಂಶಗಳ ಸಾಕ್ಷ್ಯಾಧಾರಗಳೊಡನೆ ಬಯಲಿಗೆಳೆದಿತ್ತು. TRP ಯ ಅಂಕಿ ಅಂಶಗಳನ್ನು ನೀಡುವ ಅಧಿಕೃತ ಸಂಸ್ಥೆಯಾಗಿದೆ BARC.

ಮಾಧ್ಯಮವೆಂದ ಮೇಲೆ ಯಾವುದೇ ಆಮಿಷಗಳಿಗೆ ಒಳಗಾಗದೆ ಸತ್ಯ ಸುದ್ದಿಗಳನ್ನು  ಮುಲಾಜಿಲ್ಲದೆ ಪ್ರಕಟಿಸಬೇಕಾಗಿದೆ. ಆದರೆ ಸದ್ಯಕೆ ‘ಪಬ್ಲಿಕ್ ಟಿವಿ’ ರಾಜಕೀಯ ಪಕ್ಷವೊಂದರ ಪರವಾಗಿ ನೇರವಾಗಿ ಬ್ಯಾಟ್ ಮಾಡುವ ತನ್ನ ‘ ಪಕ್ಷಪಾತೀ ಪತ್ರಿಕೋಧ್ಯಮ’ ಕ್ಕಾಗಿ ಸಾಮಾಜಿಕ ತಾಣಗಳಲ್ಲಿ ಪ್ರತಿ ದಿನ ಟ್ರಾಲ್ ಗೊಳಗಾಗುತ್ತಿದೆ. ಆದರೆ ವಿಪರ್ಯಾಸ, ಇದು ಪತ್ರಿಕೋಧ್ಯಮದ ಆರೋಗ್ಯಕರ ಬೆಳವಣಿಗೆಯೂ ಅಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group