ರಾಷ್ಟ್ರೀಯ ಸುದ್ದಿ

ಹೌದು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲು ನನ್ನನ್ನು ಬಳಸಿತ್ತು: ಬಿಜೆಪಿ ಗೆಲುವಿನ ಅಸಲಿಯತ್ತು ಬಹಿರಂಗಪಡಿಸಿದ ಅಣ್ಣಾ ಹಜಾರೆ

‘ಮೋದಿ ಸರಕಾರ ಜನರ ದಾರಿ ತಪ್ಪಿಸುತ್ತಿದೆ’

ವರದಿಗಾರ(ಫೆ. 05): 2014ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಜಯ ಗಳಿಸಲು ನನ್ನನ್ನು ಬಳಸಿತ್ತು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿಕೆ ನೀಡಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಪಡೆಯಲು ನಡೆಸಿದ ಅಸಲಿಯತ್ತನ್ನು ಬಹಿರಂಗಪಡಿಸಿದ್ದಾರೆ.

“ಹೌದು,2014ರಲ್ಲಿ ಬಿಜೆಪಿ ನನ್ನನ್ನು ಜಯ ಗಳಿಸುವುದಕ್ಕಾಗಿ ಬಳಸಿಕೊಂಡಿತು. ಲೋಕಪಾಲ್​ಗಾಗಿ ನಾನು ನಡೆಸಿದ ಪ್ರತಿಭಟನೆಯು ಬಿಜೆಪಿ ಹಾಗೂ ಆಮ್ ಆದ್ಮಿ ಪಕ್ಷವನ್ನು ಅಧಿಕಾರದ ಗದ್ದುಗೆಗೆ ಏರಿಸಿತು. ನನಗೀಗ ಅವರ ಮೇಲಿದ್ದ ಎಲ್ಲಾ ಭರವಸೆಗಳು ಬತ್ತಿಹೋಗಿವೆ” ಎಂದು ಅಣ್ಣಾ ಹಜಾರೆ ವಿಷಾಧಿಸುತ್ತಾ ಹೇಳಿಕೆ ನೀಡಿರುವುದನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಲೋಕಪಾಲ್ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ನಡೆಸುತ್ತಿರುವ ಧರಣಿ, ಸತ್ಯಾಗ್ರಹ 7ನೇ ದಿನಕ್ಕೆ ಕಾಲಿಟ್ಟಿದೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಆಂದೋಲನ ಮಾಡಿ ದೇಶದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದ ಅಣ್ಣಾ ಹಜಾರೆ ಇದೀಗ ಮೋದಿ ನೇತೃತ್ವದ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ, ಲೋಕಪಾಲ್ ಹಾಗೂ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಪಕ್ಷ ಈಗ ಲೋಕಪಾಲ್​ಗೆ ದಿಕ್ಕು ಕೊಡುವ ಗೋಜಿಗೆ ಹೋಗಿಲ್ಲ ಎಂದು ಹಜಾರೆ ಹೇಳಿದ್ದಾರೆ.

“ಮೋದಿ ನೇತೃತ್ವದ ಸರಕಾರವು ಜನರ ದಾರಿ ತಪ್ಪಿಸುತ್ತಿದ್ದು, ದೇಶವನ್ನು ನಿರಂಕುಶಪ್ರಭುತ್ವಕ್ಕೆ ಎಡೆ ಮಾಡಿಕೊಡುತ್ತಿದೆ” ಎಂದು ಟೀಕಿಸಿದರು.
ಮಹಾರಾಷ್ಟ್ರದ ಬಿಜೆಪಿ ಸರಕಾರದ ಬಗ್ಗೆ ಟೀಕಿಸುತ್ತಾ, “ಮಹಾರಾಷ್ಟ್ರ ಸರಕಾರ ಕಳೆದ 4 ವರ್ಷದಿಂದ ಬರೀ ಸುಳ್ಳುಗಳನ್ನೇ ಹೇಳುತ್ತಾ ಬಂದಿದೆ. ಎಷ್ಟು ದಿನ ಈ ಸುಳ್ಳು ನಡೆಯುತ್ತದೆ? ನನ್ನ ಶೇ. 90ರಷ್ಟು ಬೇಡಿಕೆಗಳನ್ನ ಈಡೇರಿಸಿದ್ದೇವೆಂದು ಸರಕಾರ ಸುಳ್ಳು ಹೇಳುತ್ತಿದೆ,” ಎಂದು ವಿಷಾದಿಸಿದರು.

“ನನ್ನೊಂದಿಗೆ ಚರ್ಚೆ ನಡೆಸಲು ಮತ್ತು ಮಾತುಕತೆ ನಡೆಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವರುಗಳು ಬರುತ್ತಾರೆ ಎಂದು ಇವರು ಹೇಳುತ್ತಲೇ ಇದ್ದಾರೆ. ಆದರೆ, ಜನರು ಗೊಂದಲವಾಗಬಾರದೆಂದು ನಾನು ಸಚಿವರನ್ನು ಭೇಟಿಯಾಗದಿರಲು ನಿರ್ಧರಿಸಿದ್ದೇನೆ. ಮೊದಲು ಅವರು ಸ್ಪಷ್ಟ ನಿರ್ಧಾರದೊಂದಿಗೆ, ಲಿಖಿತ ರೂಪದಲ್ಲಿ ಎಲ್ಲವನ್ನೂ ತಿಳಿಸಲಿ. ನನಗೆ ಅವರ ಮೇಲೆ ನಂಬಿಗೆನೇ ಇಲ್ಲ” ಎಂದು ಹೇಳಿದ್ದಾರೆ.

ಅಣ್ಣಾ ಹಜಾರೆ ಅವರು ತಮ್ಮ ಸ್ವಂತ ಊರಾದ ರಾಲೆಗಣ್-ಸಿದ್ಧಿಯಲ್ಲಿ ಏಳು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. 2011 ಮತ್ತು 2014ರಲ್ಲಿ ಅವರು ನಡೆಸಿದ ಹೋರಾಟವು ಆಂದೋಲನ ಸ್ವರೂಪ ಪಡೆದಿತ್ತು. ಮೋದಿ ಸರಕಾರ ಬಂದ ನಂತರ ಒಂದೆರಡು ಬಾರಿ ಅವರು ಪ್ರತಿಭಟನೆ ನಡೆಸಿದರಾದರೂ ಅಷ್ಟು ದೊಡ್ಡ ಮಟ್ಟಕ್ಕೆ ಅದು ತೀವ್ರತೆ ಪಡೆದಿಲ್ಲ. ಈ ಬಾರಿಯ ಪ್ರತಿಭಟನೆ ಕೂಡ ತೀವ್ರತೆ ಪಡೆದುಕೊಳ್ಳದೇ ಇರಲು ಕಾರಣ ಕಳೆದ ವರ್ಷ ಹೋರಾಟದ ತೆರೆಮರೆಯ ಹಿಂದೆ ರಾಜಕೀಯ, ಅಧಿಕಾರದ ಪರಿಣಾಮವಿತ್ತು. ಅಧಿಕಾರ ಸಿಕ್ಕದ ಮೇಲೆ ಯಾರು ಏನು ಮಾಡಿದರೆ ನಮಗೇನು?? ಎಂಬ ಪ್ರಶ್ನೆ ಉದ್ಭವಿಸಿಕೊಂಡಿದೆ ಅಷ್ಟೇ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group