ಜಿಲ್ಲಾ ಸುದ್ದಿ

ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರ ನಡೆ ಖಂಡನೀಯ : ಪ್ರಕರಣ ಹಿಂತೆಗೆಯದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟಕ್ಕೆ ಎಸ್ ಡಿ ಪಿ ಐ ಕರೆ

SDPI

ಮಂಗಳೂರು : ಬಾಬ್ರಿ ಮಸೀದಿ ಧ್ವಂಸ ವಿಷಯದ ವಿಚಾರವಾಗಿ ಎಸ್ ಡಿಪಿಐ ದೇಶದಾದ್ಯಂತ ಫೆಬ್ರವರಿ 1 ರಿಂದ 28 ರ ವರೆಗೆ ನಡೆಯಲಿರುವ “ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ” ಎಂಬ ರಾಷ್ಟ್ರೀಯ ಅಭಿಯಾನದ ರಾಜ್ಯ ಉದ್ಘಾಟನಾ ಕಾರ್ಯಕ್ರಮವು ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದ್ದು ಈ ಕಾರ್ಯಕ್ರಮವು ಸಂವಿಧಾನ ಬದ್ಧವಾಗಿ ಬಹಳ ಅಚ್ಚುಕಟ್ಟಾಗಿ ನಡೆದಿದೆ. ಮಾತ್ರವಲ್ಲದೆ ದೇಶಕ್ಕೆ ಆದಂತಹ ಅನ್ಯಾಯವನ್ನು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾದ ಅವಮಾನವನ್ನು ಜನತೆಗೆ ತಿಳಿಸಲು ಸಾಧ್ಯವಾಗಿದೆ.

ಆದರೆ ಪೊಲೀಸ್ ಇಲಾಖೆ ಇದರ ವಿರುದ್ಧವಾಗಿ ಸ್ವಯಂ ಪ್ರೇರಿತವಾಗಿ ಜಿಲ್ಲಾಧ್ಯಕ್ಷರ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಿಲ್ಲೆಯಲ್ಲಿ ದ್ವೇಷವನ್ನು ಹರಡಿಸುವಂತಹ ಶಾಂತಿ ಕೆಡಿಸುವಂತಹ ಕೆಲಸದಲ್ಲಿ ನಿರತವಾಗಿದೆ ಪೊಲೀಸ್ ಇಲಾಖೆಯ ಈ ರೀತಿಯ ಕ್ರಮವನ್ನು ಎಸ್ ಡಿ ಪಿ ಐ. ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ವಿರುದ್ಧವಾಗಿ ಕಾರ್ಯಕ್ರಮ ಅಯೋಜಿಸಲು ಮಂಗಳೂರಿನಾದ್ಯಂತ ಪ್ರಚಾರಪಡಿಸಿದಾಗ, ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲು ಸಾಧ್ಯವಾಗದೇ ಮೌನಕ್ಕೆ ಶರಣಾದ ಪೊಲೀಸರು ಸತ್ಯವನ್ನು ಜನತೆಗೆ ತಿಳಿಸಲು ಹೊರಟಾಗ ಈ ರೀತಿಯ ಕ್ರಮ ತೆಗೆಯುವುದರಿಂದ ಪೊಲೀಸರ ನಡೆಯ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ.ಮತ್ತು ತಾರತಮ್ಯ ನೀತಿಯು ಸ್ಪಷ್ಟವಾಗಿ ಗೋಚರಿಸುತ್ತದೆ.
ಆದುದರಿಂದ ಈ ಪ್ರಕರಣವನ್ನು ಹಿಂತೆಗೆಯದಿದ್ದಲ್ಲಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಸ್ ಡಿ ಪಿ ಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group