ರಾಜ್ಯ ಸುದ್ದಿ

ಬಿಜೆಪಿಯ ಹತ್ಯೆ ರಾಜಕೀಯ ಸಂಚು ನಿಗ್ರಹಿಸಲು ಪಾಪ್ಯುಲರ್ ಫ್ರಂಟ್ ಆಗ್ರಹ

ಬೆಂಗಳೂರು: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಕೋಮುಉದ್ವಿಗ್ನತೆಗೆ ಕಾರಣವಾಗಿದ್ದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಎಂಬ ವದಂತಿಯ ಹಿಂದಿನ ಭಯಾನಕ ರಹಸ್ಯವು ಬಹಿರಂಗವಾಗಿದ್ದು, ಬಿಜೆಪಿಯ ಹತ್ಯೆ ರಾಜಕೀಯದ ಸಂಚನ್ನು ನಿಗ್ರಹಿಸಲು ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಆಗ್ರಹಿಸಿದ್ದಾರೆ.

ಆರೆಸ್ಸೆಸ್ ಸಕ್ರಿಯ ಕಾರ್ಯಕರ್ತ ಹಿಮ್ಮತ್ ಪಾಟೀದಾರ್ ಎಂಬಾತ ಮದನ್ ಮಾಳವಿಯ ಎಂಬ ವ್ಯಕ್ತಿಯನ್ನು ಹತ್ಯೆಗೈದು ಮೃತದೇಹದ ಗುರುತು ಸಿಗದಂತೆ ವಿರೂಪಗೊಳಿಸಿ ತನ್ನ ಉಡುಪುಗಳನ್ನು ಮೃತವ್ಯಕ್ತಿಗೆ ತೊಡಿಸಿ ತಲೆಮರೆಸಿಕೊಂಡಿರುವುದು ಮತ್ತು ಅನಂತರ ಬಿಜೆಪಿಯು ಆರೆಸ್ಸೆಸ್ ಕಾರ್ಯಕರ್ತನನ್ನು ಹತ್ಯೆಗೈಯ್ಯಲಾಗಿದೆ ಎಂದು ಪ್ರಚಾರಪಡಿಸಿ ಉದ್ವಿಗ್ನತೆ ಸೃಷ್ಟಿಸಿರುವುದು ಪೂರ್ವಯೋಜಿತ ಸಂಚಿನ ಭಾಗವಾಗಿದೆ.

ಈ ಪ್ರಕರಣವು ಕೇವಲ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವಾದ ಘಟನೆಯಲ್ಲ. ನಮ್ಮ ರಾಜ್ಯದಲ್ಲೂ ಚುನಾವಣೆ ಸಮೀಪಿಸುವಾಗ ಬಿಜೆಪಿಯ ಹತ್ಯೆ ರಾಜಕೀಯದ ಸಂಚು ಪದೇ ಪದೇ ಮರುಕಳಿಸುತ್ತದೆ. ಕೋಮುಉದ್ವಿಗ್ನತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿಯು ನಡೆಸುತ್ತಿರುವ ಕೃತ್ಯಗಳಲ್ಲಿ ಇದೂ ಒಂದು. ಉತ್ತರಕನ್ನಡದಲ್ಲಿ ಪರೇಶ್ ಮೇಸ್ತ ಆತ್ಯಹತ್ಯೆ ಪ್ರಕರಣವನ್ನು ಮುಂದಿಟ್ಟು ಬಿಜೆಪಿಯು ಕೋಮುದಳ್ಳುರಿಯನ್ನು ನಡೆಸಿ ಅಪಾರ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವನ್ನುಂಟು ಮಾಡಿತ್ತು. ಸ್ವತಃ ತಂಗಿಯಿಂದಲೇ ಕೊಲೆಗೀಡಾದ ಕಾರ್ತಿಕ್ ರಾಜ್ ಕೊಲೆಗೆ ಮತೀಯ ಬಣ್ಣ ಹಚ್ಚಿ, ಬಿಜೆಪಿ ಸಂಸದರು ಜಿಲ್ಲೆಗೆ ಬೆಂಕಿ ಹಚ್ಚುವ ಉದ್ರೇಕಕಾರಿ ಹೇಳಿಕೆ ನೀಡಿದ್ದರು. ಮಡಿಕೇರಿಯಲ್ಲಿ ನಡೆದ ಕುಟ್ಟಪ್ಪ ಎಂಬ ಆರೆಸ್ಸೆಸ್ ಕಾರ್ಯಕರ್ತನ ಆಕಸ್ಮಿಕ ಸಾವನ್ನು ಕೋಮುಗಲಭೆಗೆ ಬಿಜೆಪಿ ಬಳಸಿಕೊಂಡಿತ್ತು. ಇದೀಗ ಮಹಾಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಹಿಂದುತ್ವ ನಾಯಕರ ಹತ್ಯೆಗೆ ಸಂಚು ಎಂಬ ವದಂತಿಯನ್ನು ಪ್ರಾಯೋಜಿತ ಮಾಧ್ಯಮಗಳ ಮೂಲಕ ಹರಡುತ್ತಿರುವುದು ಇದರ ಮುಂದುವರಿದ ಭಾಗವಾಗಿದೆ.

ರಾಜ್ಯದ ಶಾಂತಿಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಪೂರ್ವಯೋಜಿತ ಸಂಚನ್ನು ಆರಂಭದಿಂದಲೇ ನಿಗ್ರಹಿಸಿದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ತಡೆಗಟ್ಟಬಹುದು.ರಾಜ್ಯ ಸರಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಫ್ಯಾಷಿಸಮ್ ನ ಎಲ್ಲ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕೆಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group