ಅನಿವಾಸಿ ಕನ್ನಡಿಗರ ವಿಶೇಷ

IFF ಬೈಶ್,ಜಿಝಾನ್ ಘಟಕದ ವತಿಯಿಂದ ” ಬೈಶ್ ಕ್ರೀಡೋತ್ಸವ”

ಇಂಡಿಯಾ ಫ್ರೆಟರ್ನಿಟಿ ಫೋರಂ (IFF) ಸೌದಿ ಅರೇಬಿಯಾ ಬೈಶ್ ಘಟಕ ಆಯೋಜಿಸಿದ್ದ ‌” ಫ್ರೆಟರ್ನಿಟಿ ಫೆಸ್ಟ್ 2019″ ರ ಪ್ರಯುಕ್ತ ಬೈಶ್ ಕ್ರೀಡೋತ್ಸವ(Baish sports Fest) ವು ಬೈಶ್ ನ ಫೆನ್ಸ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸ್ನೇಹಕ್ಕಾಗಿ ಕ್ರೀಡೆ ಎಂಬ ಧ್ಯೇಯ ವಾಕ್ಯದೊಂದಿಗೆ ಅನಿವಾಸಿ ಭಾರತೀಯರಿಗಾಗಿ ನಡೆದ ಬೈಶ್ ಕ್ರೀಡೋತ್ಸವದಲ್ಲಿ ಕ್ರಿಕೆಟ್, ವಾಲಿಬಾಲ್, ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳು ನಡೆಯಿತು. ಕ್ರೀಡೋತ್ಸವದಲ್ಲಿ ನೂರಾರು ಕ್ರೀಡಾಪಟುಗಳನ್ನೊಳಗೊಂಡ ಒಟ್ಟು 10 ತಂಡಗಳು ಭಾಗವಹಿಸಿದ್ದವು.
ಕ್ರೀಡೋತ್ಸವದ ಚಾಂಪಿಯನ್ ಪಟ್ಟವನ್ನು ಫತೇ ಅಲ್ ಜುನೂಬ್ ತಂಡವು ತನ್ನದಾಗಿಸಿಕೊಂಡಿತು. ಕ್ರೀಡೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯುನೈಟೆಡ್ ಟೆಕ್ ಸಂಸ್ಥೆಯ ರಿಯಾಝ್, ಅಬ್ದುಲ್ ಬಶೀರ್ ಕೈಕಂಬ,IFF ಜಿಲ್ಲಾಸಮಿತಿ ಸದಸ್ಯರಾದ ಸಲೀಮ್ ಗುರುವಾಯನಕೆರೆ, ಹಾಗೂ IFF ಬೈಶ್ ಘಟಕದ ಅದ್ಯಕ್ಶರಾದ ರಹಿಮಾನ್ ಪೋರ್ಕೋಡಿ ಉಪಸ್ಥಿತರಿದ್ದರು..

ಕ್ರೀಡೋತ್ಸವು IFF ಅಭಾ/ಜಿಝಾನ್ ವಲಯಾದ್ಯಕ್ಷರಾದ ಇಕ್ಬಾಲ್ ಕೂಳೂರು ಅವರ ಸಮಾರೋಪ ಭಾಷಣದೊಂದಿಗೆ ಕೊನೆಗೊಂಡಿತು.. ಕ್ರೀಡೋತ್ಸವದ ಸಂಚಾಲಕರಾದ ತಂಶೀರ್ ಬಜ್ಪೆಯವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group