ರಾಷ್ಟ್ರೀಯ ಸುದ್ದಿ

ಮೋದಿ ಚಹಾ ಮಾರಲೇ ಇಲ್ಲ, ಜನರ ಅನುಕಂಪ ಗಿಟ್ಟಿಸಲು ಮಾಡಿದ ಗಿಮಿಕ್: ತೊಗಾಡಿಯಾ

‘2019ರಲ್ಲಿ ಪರಾಭವಗೊಂಡು ಮೋದಿ ಗುಜರಾತಿಗೆ,  ಭಯ್ಯಾಜೀ ಜೋಷಿ ನಾಗ್ಪುರಕ್ಕೆ ಮರಳರುತ್ತಾರೆ’

‘ಬಿಜೆಪಿ, ಆರೆಸ್ಸೆಸ್ 125 ಕೋಟಿ ಭಾರತೀಯರನ್ನು ಕತ್ತಲಿಗೆ ದೂಡಿದೆ’

ವರದಿಗಾರ (ಜ.22): ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನನಗೆ ಸುಮಾರು 43 ವರ್ಷಗಳ ಗೆಳೆತನವಿತ್ತು. ಆದರೆ ನಾನು ಯಾವತ್ತೂ ಅವರು ಚಹಾ ಮಾರುವುದನ್ನು ನೋಡಿಯೇ ಇಲ್ಲ. ಅದು ಕೇವಲ ಜನರ ಅನುಕಂಪವನ್ನು ಗಿಟ್ಟಿಸುವುದಕ್ಕಾಗಿ ಅವರು ಗಿಮಿಕ್ ಮಾಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮಾಜಿ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರು ಪ್ರವೀಣ್ ತೊಗಾಡಿಯಾ, ಬಿಜೆಪಿ ಮತ್ತು ಆರೆಸ್ಸೆಸ್ ಗೆ ರಾಮ ಮಂದಿರ ನಿರ್ಮಿಸುವ ಯಾವ ಉದ್ದೇಶವೂ ಇಲ್ಲವೆಂದು ಹೇಳಿದ್ದಾರೆ. ಮೋದಿಯವರ ಹೇಳಿಕೆಯು ಆರೆಸ್ಸೆಸ್ ನಾಯಕ ಭಯ್ಯಾಜೀ  ಜೋಷಿ ಅವರು ಕೂಡಾ ಮುಂದಿನ ಐದು ವರ್ಷಗಳಲ್ಲಿ ರಾಮ ಮಂದಿರ ನಿರ್ಮಿಸುವುದಿಲ್ಲ ಎಂದು ಹೇಳಿದ್ದಾರೆ, ಬಿಜೆಪಿ ಮತ್ತು ಆರೆಸ್ಸೆಸ್   125 ಕೋಟಿ ಭಾರತೀಯರನ್ನು ಕತ್ತಲಿಗೆ ದೂಡಿದೆ ಎಂದು ಹೇಳಿದ್ದಾರೆ.
ತ್ರಿವಳಿ ತಲಾಖ್ ಬಗ್ಗೆ ಕಾನೂನು ತರಲು ಮೋದಿ ಹಗಲು ರಾತ್ರಿ ಪ್ರಯತ್ನಿಸಿದ್ದರು, ಆದರೆ ರಾಮ ಮಂದಿರದ ವಿಷಯದಲ್ಲಿ ಇಂಥ ಯಾವುದೇ ಪ್ರಯತ್ನಗಳು ಕಾಣುತ್ತಿಲ್ಲ.

ಎರಡನೇ ಬಾರಿ ಮೋದಿ ಆಯ್ಕೆಯಾದರೂ ಅವರು ರಾಮ ಮಂದಿರ ನಿರ್ಮಿಸುವುದಿಲ್ಲ. ಯಾಕೆಂದರೆ ಮಂದಿರ ನಿರ್ಮಾಣ ಸಮಸ್ಯೆ ಬಿಜೆಪಿ ಮತ್ತು ಆರೆಸ್ಸೆಸ್ ಅಗತ್ಯವಿರುವ ವಿಚಾರವಾಗಿದೆ. ಈ ವಿವಾದಕ್ಕೆ ಪರಿಹಾರ ಸಿಕ್ಕಿದರೆ ಈ ಎರಡು ಸಂಘಟನೆಗಳಿಗೆ ಹೇಳಲು ಯಾವುದೇ ವಿಷಯಗಳು ಉಳಿಯುವುದಿಲ್ಲ. ಹಾಗಾಗಿ ರಾಮ ಮಂದಿರ ನಿರ್ಮಾಣ ಸಂಗತಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ತೊಗಾಡಿಯಾ ಹೇಳಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 35ಎ ಕೊನೆಗೊಳಿಸಲಾಗುವುದು. ಹೀಗೆ ಮಾಡಿದರೆ ದೇಶದಲ್ಲಿರುವ ಯಾರು ಬೇಕಾದರೂ ಅಲ್ಲಿ ಜಮೀನು ಖರೀದಿಸಬಹುದು. ಹಿಂದೂಗಳು ಅಲ್ಲಿ ಬಹು ಸಂಖ್ಯಾತರಾಗಿ ಸರ್ಕಾರ ರಚಿಸಬಹುದು. ಕಲ್ಲು ತೂರಾಟಗಾರರರಿಗೆ ಇದೊಂದು ಪಾಠವಾಗುತ್ತದೆ. 2019ರಲ್ಲಿ ಮೋದಿ ಪರಾಭವಗೊಂಡನಂತರ ಅವರು ಗುಜರಾತಿಗೆ ಮರಳಬೇಕಾಗುತ್ತದೆ ಮತ್ತು  ಭಯ್ಯಾಜೀ ಜೋಷಿ ನಾಗ್ಪುರಕ್ಕೆ ಮರಳಬೇಕಾಗುತ್ತದೆ ಎಂದಿದ್ದಾರೆ ತೊಗಾಡಿಯಾ.

 

To Top
error: Content is protected !!
WhatsApp chat Join our WhatsApp group