ರಾಷ್ಟ್ರೀಯ ಸುದ್ದಿ

‘ಇವಿಎಂ ಯಂತ್ರದ ತಿರುಚುವಿಕೆಯ ಮಾಹಿತಿ ಬಹಿರಂಗಪಡಿಸಲಿದ್ದ ಬಿಜೆಪಿ ನಾಯಕ ಗೋಪಿನಾಥ್ ಮುಂಡೆಯನ್ನು ಕೊಲೆಗೈಯ್ಯಲಾಗಿತ್ತು’ !!

ವರದಿಗಾರ  (ಜ 21) : 2014 ರ ಲೋಕಸಭಾ ಚುನಾವಣೆಯನ್ನು ಬಿಜೆಪಿಗೆ ಅರಿವಿದ್ದೇ ಎಲ್ಲಾ ಮತಯಂತ್ರಗಳನ್ನು ಹ್ಯಾಕ್ ಮಾಡಲಾಗಿತ್ತು ಎಂಬ ಗಂಭೀರವಾದ ಆರೋಪವನ್ನು ಅಮೆರಿಕಾ ಮೂಲದ ಸೈಬರ್ ತಂತ್ರಜ್ಞನಾಗಿರುವ ಸಯ್ಯೆದ್ ಶುಜಾತ್ ಲಂಡನ್ ಪತ್ರಿಕಾಗೋಷ್ಟಿಯಲ್ಲಿ ಬಹಿರಂಗಗೊಳಿಸಿದ್ದಾರೆ. ಮತಯಂತ್ರಗಳ ತಿರುಚುವಿಕೆ ಹಾಗೂ ಫಲಿತಾಂಶಗಳು ತಮಗೆ ಬೇಕಾದ ಹಾಗೆ ಬದಲಾಯಿಸಿದ ಬಿಜೆಪಿಯ ಷಡ್ಯಂತ್ರಗಳ ಬಗ್ಗೆ ತಿಳಿದಿದ್ದ ಅಂದಿನ ಕೇಂದ್ರ ನಗರಾಭಿವೃದ್ಧಿ ಮಂತ್ರಿಯಾಗಿದ್ದ ಗೋಪಿನಾಥ್ ಮುಂಡೆಯವರನ್ನು ಹತ್ಯೆಗೈಯ್ಯಲಾಗಿತ್ತು ಎಂಬ ಆಘಾತಕಾರಿ ಮಾಹಿತಿಯನ್ನೂ ಶುಜಾತ್ ರವರು ಹೊರಹಾಕಿದ್ದಾರೆ. ಗೋಪಿನಾಥ್ ಮುಂಡೆಯವರು 2014 ರ ಜೂನ್ 3 ರಂದು  ಅಪಘಾತದಲ್ಲಿ ಮರಣ ಹೊಂದಿದ್ದರು. 2014 ರ ಮೇ ತಿಂಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು.

ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಯ್ಯೆದ್ ಶುಜಾತ್, “2014ರ ಲೋಕಸಭಾ ಚುನಾವಣೆಯ ಫಲಿತಾಂಶ ಜಗತ್ತಿಗೆ ತೋರಿಸಿದ್ದಕಿಂತಲೂ ಬೇರೆಯದೇ ಆಗಿತ್ತು. ಆದರೆ ಫಲಿತಾಂಶವನ್ನು ಸಂಪೂರ್ಣವಾಗಿ ತಿರುಚಲಾಗಿತ್ತು. ಇವಿಎಂ ಚಿಪ್ ನಲ್ಲಿ ಒಂದು ಟ್ರಾನ್ಸ್ಮೀಟರನ್ನು ಅಳವಡಿಸಲಾಗುತ್ತದೆ. ಬಿಜೆಪಿಯ ನಾಯಕ ಗೋಪಿನಾಥ್ ಮುಂಡೆಗೆ ಈ ಕುರಿತು ಮಾಹಿತಿ ಇತ್ತು ಮತ್ತು ಅವರು ಅದನ್ನು ಬಹಿರಂಗಗೊಳಿಸಲು ಇಚ್ಚಿಸಿದ್ದರು. ಆ ಕಾರಣಕ್ಕಾಗಿ ಅವರನ್ನು ಕೊಲೆಗೈಯ್ಯಲಾಯಿತು” ಎಂದವರು ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿಗೆ ನೆರವಾಗಲೆಂದೇ ರಿಲಾಯನ್ಸ್ ಕಮ್ಯುನಿಕೇಶನ್ ಕಡಿಮೆ ಫ್ರೀಕ್ವೆನ್ಸಿಯ ನೆಟ್ವರ್ಕನ್ನು ಮತಯಂತ್ರಗಳನ್ನು ತಿರುಚಲು ಬಳಸಲಾಗುತ್ತಿದೆ. ಭಾರತದಲ್ಲಿ ಇದನ್ನು 9 ಸ್ಥಳಗಳಲ್ಲಿ ಮಾಡಲಾಗುತ್ತಿದೆ. ಅಲ್ಲಿರುವ ಉದ್ಯೋಗಿಗಳಿಗೆ ತಾವು ಇವಿಎಂನ್ನು ತಿರುಚುತ್ತಿದ್ದೇವೆ ಎಂಬ ಮಾಹಿತಿಯಿರುವುದಿಲ್ಲ, ತಾವು ದತ್ತಾಂಶ ನಮೂದು ಮಾಡುತ್ತಿದ್ದೇವೆ ಎಂದವರು ತಿಳಿದಿರುತ್ತಾರೆ.

ಗೌರಿ ಲಂಕೇಶ್ ಹತ್ಯೆಗೂ ಇವಿಎಂ ನಂಟು !

ಗೌರಿ ಲಂಕೇಶ್ ಹತ್ಯೆಗೂ ಮತಯಂತ್ರದ ತಿರುಚುವಿಕೆಗೂ ನಂಟಿದೆ ಎಂಬ ಆಘತಕಾಕಾರಿ ವಿಷಯವನ್ನೂ ಶುಜಾತ್ ಬಹಿರಂಗಪಡಿಸಿದ್ದಾರೆ. ಗೌರಿ ಲಂಕೇಶ್ ಅವರು ಮತಯಂತ್ರದ ದುರುಪಯೋಗದ ಬಗ್ಗೆ ಒಂದು ವರದಿ ತಯಾರಿಸುತ್ತಿದ್ದರು. ಅವರ ಹತ್ಯೆಯ ಕೆಲವೇ ತಿಂಗಳುಗಳ ಮೊದಲು ಮುಖ್ಯ ಮಾಹಿತಿ ಕಮಿಷನರ್ ಅವರಿಗೆ ಆರ್ ಟಿ ಐ ಮುಖಾಂತರ, ಇವಿಎಂ ಯಂತ್ರಗಳಲ್ಲಿ ಬಳಸುವ ಕೇಬಲ್ ಗಳನ್ನು ಯಾರು ತಯಾರಿಸುತ್ತಾರೆ ಎಂಬ ಮಾಹಿತಿ ಕೇಳಲಾಗಿರುವ ಕುರಿತು ಶುಜಾತ್ ಅವರು ಗಮನ ಸೆಳೆಯುತ್ತಾರೆ. ಆದರೆ ಆಗಲೇ ಗೌರಿಯವರ ಹತ್ಯೆ ನಡೆಯಿತು ಎನ್ನುತ್ತಾರೆ ಸಯ್ಯೆದ್ ಶುಜಾತ್.

ಪತ್ರಿಕಾಗೋಷ್ಟಿಯ ವೀಡಿಯೋ

To Top
error: Content is protected !!
WhatsApp chat Join our WhatsApp group