ರಾಜ್ಯ ಸುದ್ದಿ

ಆಪರೇಷನ್ ಕಮಲ ಕೇವಲ ಒಂದು ದೊಂಬರಾಟವಾಗಿದೆ: ಪ್ರಕಾಶ್ ರೈ

‘ಗೋ ಮಾತೆ ಎಂದು ಬೊಬ್ಬಿರಿಯುವ ಬಿಜೆಪಿಯವರು ಸಂಕ್ರಾಂತಿ ದಿನ ಗೋ ಪೂಜೆ ಮಾಡುವುದನ್ನು ಬಿಟ್ಟು ಪಂಚತಾರಾ ರೆಸಾರ್ಟ್ ನಲ್ಲಿದ್ದರು’

‘ಇವರಿಗೂ ಬುದ್ದಿ ಇಲ್ಲ, ಅವರಿಗೂ ಬುದ್ದಿ ಇಲ್ಲ. ಜನರ ಕೆಲಸ ಮಾಡುವುದನ್ನು ಬಿಟ್ಟು ದೊಂಬರಾಟದಲ್ಲಿ ತೊಡಗಿದ್ದಾರೆ’

ವರದಿಗಾರ (ಜ.18): ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಬಹುಭಾಷಾ ನಟ, ಚಿಂತಕ, ಜನರ ಧ್ವನಿಯಾಗಲು ರಾಜಕೀಯ ಪ್ರವೇಶ ಘೋಷಿಸಿರುವ ಪ್ರಕಾಶ್ ರೈ ‘ಆಪರೇಷನ್ ಕಮಲ ಒಂದು ದೊಂಬರಾಟವಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಅವರು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ತನ್ನ ರಾಜಕೀಯ ಪ್ರವೇಶ, ಮತ್ತು ಮುಂದಿನ ದಿನಗಳ ಕಾರ್ಯ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ ವರದಿಗಾರರ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗೆಗಿನ  ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

‘ಆಪರೇಷನ್ ಕಮಲ ಒಂದು ದೊಂಬರಾಟವಾಗಿದೆ. ಇವರಿಗೆಲ್ಲಾ ನಾಚಿಕೆ ಅಗಬೇಕು. ಮಾನ ಮರ್ಯಾದೆ ಬೇಡವಾ?’ ಎಂದು ಪ್ರಶ್ನಿಸಿದ್ದಾರೆ. ‘ಇವರಿಗೂ ಬುದ್ದಿ ಇಲ್ಲ, ಅವರಿಗೂ ಬುದ್ದಿ ಇಲ್ಲ. ಜನರ ಕೆಲಸ ಮಾಡುವುದನ್ನು ಬಿಟ್ಟು ಇಂತಹ ದೊಂಬರಾಟದಲ್ಲಿ ತೊಡಗಿದ್ದಾರೆ. ಎಲ್ಲಿಯವರೆಗೆ ನಡೆಯುತ್ತೊ ನೋಡೋಣ’ ಎಂದು ಪರೋಕ್ಷವಾಗಿ ದೊಂಬರಾಟದಲ್ಲಿ ತೊಡಗಿಸಿಕೊಂಡಿರುವ ಪಕ್ಷಗಳಿಗೆ ಅವರು ಚಾಟಿ ಬೀಸಿದ್ದಾರೆ.

‘ಗೋ ಮಾತೆ, ಗೋ ಮಾತೆ ಎಂದು ಬೊಬ್ಬಿರಿಯುವ ಬಿಜೆಪಿಯವರು, ಸಂಕ್ರಾಂತಿ ದಿನ ಗೋ ಪೂಜೆ ಮಾಡುವುದನ್ನು ಬಿಟ್ಟು ಪಂಚತಾರಾ ರೆಸಾರ್ಟ್‌ನಲ್ಲಿ ಬಿಡಾರ ಹೂಡಿದ್ದರು. ಇದೇನಾ ಇವರ ಗೋ ಕಾಳಜಿ?’ ಎಂದು  ಸಂದರ್ಭೋಚಿತವಾಗಿ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.

 

To Top
error: Content is protected !!
WhatsApp chat Join our WhatsApp group