ಜಿಲ್ಲಾ ಸುದ್ದಿ

ಜನಪರ ಹೋರಾಟಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಪೊಲೀಸ್ ಇಲಾಖೆ : ಎಸ್ ಡಿ ಪಿ ಐ ಖಂಡನೆ

ಮಂಗಳೂರು: ಕರ್ನಾಟಕ ರಾಜ್ಯದ ಮೈತ್ರಿ ಸರಕಾರವು ಪೊಲೀಸ್ ಇಲಾಖೆಯ ಮೂಲಕ ಹೋರಾಟ ನಡೆಸುವಾಗ ಶುಲ್ಕ ಕಡ್ಡಾಯಗೊಳಿಸುವಂತೆ ಹೊಸ ನಿಯಮವನ್ನು ಜಾರಿಗೆ ತರಲು ಸುತ್ತೋಲೆಯನ್ನು ಹೊರಡಿಸಿದ್ದು ಇದು ಪ್ರಜಾಪ್ರಭುತ್ವ ದೇಶದಲ್ಲಿ ಜನತೆಗೆ ಸಂವಿಧಾನ ಕೊಟ್ಟಂತಹ ಹಕ್ಕನ್ನು ದಮನಿಸುವ ಭಾಗವಾಗಿದೆ ಇದನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ತೀವ್ರವಾಗಿ ಖಂಡಿಸುತ್ತದೆ.

ರಾಜ್ಯದಲ್ಲಿ ಯಾವುದೇ ಹೋರಾಟಗಳು,ಪ್ರತಿಭಟನೆ, ಧರಣಿ, ಸಾರ್ವಜನಿಕ ಸಭೆ, ರಾಲಿ ಮತ್ತು ಇನ್ನಿತರ ಯಾವುದೇ ಕಾರ್ಯಕ್ರಮಗಳು ನಡೆಸಬೇಕಾದರೆ ಶುಲ್ಕ ಪಾವತಿಯ ಹಲವು ಹೊಸ ಷರತ್ತುಗಳನ್ನು ಪಾಲಿಸಬೇಕೆಂದು ಪೊಲೀಸ್ ಇಲಾಖೆಯ ಮೂಲಕ ಪ್ರಜಾಪ್ರಭುತ್ವ ಕೊಟ್ಟ ಹಕ್ಕನ್ನು ಕಸಿಯಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ ಇದು ಸಂವಿಧಾನದ ವಿರುದ್ಧವಾಗಿದೆ.

ರಾಜ್ಯದಲ್ಲಿ ನಡೆಯತ್ತಿರುವ ಜನವಿರೋಧಿ ನೀತಿ, ಅಕ್ರಮ,ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧವಾಗಿ ಯಾರು ಕೂಡ ಮಾತನಾಡದೇ ಮೌನಕ್ಕೆ ಶರಣಾಗುವಂತಿದೆ ಈ ನಿಯಮಗಳು. ಆದುದರಿಂದ ಇದನ್ನು ಒಪ್ಪಲು ಹೋರಾಟ ರಾಜಕೀಯ ನಡೆಸುತ್ತಿರುವ SDPI ಪಕ್ಷಕ್ಕೆ ಖಂಡಿತ ಸಾಧ್ಯವಿಲ್ಲ ಈ ನಿಯಮವನ್ನು ಜಾರಿಗೆ ತಂದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದೆಂದು ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group