ರಾಜ್ಯ ಸುದ್ದಿ

‘ಅಪರೇಶನ್ ಕಮಲ’ದ ಮಧ್ಯೆ ಪ್ರಿಯಾಂಕ್ ಖರ್ಗೆಯನ್ನೇ ಬಿಜೆಪಿಗೆ ಸೇರಿಸಲು ಪ್ರಯತ್ನಿಸಿದ ಅರ್ನಾಬ್ ಗೋಸ್ವಾಮಿಯ ‘ರಿಪಬ್ಲಿಕ್ ಟಿವಿ’ !!

ವರದಿಗಾರ  (ಜ 17) : ಕಳೆದ ಎರಡು ಮೂರು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ‘ಆಪರೇಶನ್ ಕಮಲ’ ಎಂಬ ಹೈಡ್ರಾಮಾದ ಮಧ್ಯೆ ಕೇಂದ್ರ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜಿನ ಖರ್ಗೆಯವರ ಪುತ್ರ ಹಾಗೂ ರಾಜ್ಯ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆಯನ್ನೇ ಬಿಜೆಪಿಗೆ ‘ಸೇರಿಸುವ’  ಪ್ರಯತ್ನವನ್ನು ರಾಷ್ಟ್ರೀಯ ಚಾನೆಲ್ ಆಗಿರುವ ‘ರಿಪಬ್ಲಿಕ್ ಟಿವಿ’ ಮಾಡಿತ್ತೆನ್ನುವುದನ್ನು ಖುದ್ದು ಪ್ರಿಯಾಂಕ್ ಖರ್ಗೆ ಟ್ವಿಟ್ಟರ್ ನಲ್ಲಿ ಬಿಚ್ಚಿಟ್ಟಿದ್ದಾರೆ. ಈ ಘಟನೆ ದೇಶದಲ್ಲಿ ಕೆಲ ಮಾಧ್ಯಮಗಳು ಯಾವ ರೀತಿಯಲ್ಲಿ ಜನರನ್ನು ಉದ್ದೇಶಪೂರ್ವಕವಾಗಿ ತಪ್ಪು ದಾರಿಗೆಳೆಯುತ್ತಿದೆ ಎನ್ನುವುದರ ಸ್ಪಷ್ಟ ನಿದರ್ಶನವಾಗಿದೆ.

ಈ ಕುರಿತು ಪ್ರಿಯಾಂ ಖರ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದು, “ಜನವರಿ 15ರಂದು ನನಗೆ ರಿಪಬ್ಲಿಕ್ ಚಾನೆಲಿನಿಂದ ಒಂದು ಕರೆ ಬಂದಿತ್ತು. ನಾನು ಮುಂಬೈನಲ್ಲಿದ್ದೇನೆಯೇ ಎಂದು ಅವರು ತಿಳಿಯಲು ಬಯಸಿದ್ದರು. ಆದರೆ ಅವರ “ಮೂಲ”ಗಳ ಪ್ರಕಾರ ನಾನು ಬಿಜೆಪಿಗೆ ಸೇರಲು ಮುಂಬೈಗೆ ಬಂದಿದ್ದೇನೆಂಬ ಮಾಹಿತಿ ಸಿಕ್ಕಿದೆಯಂತೆ! ಪೀತ ಪತ್ರಿಕೋಧ್ಯಮಕ್ಕೊಂದು ಸ್ಪಷ್ಟ ಉದಾಹರಣೆ ಇದು, ಹಾಸ್ಯಾಸ್ಪದ” ಎಂದವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಿಮಿಷದಿಂದಲೇ ಸರಕಾರವನ್ನು ಬೀಳಿಸಲು ಹಗಲಿರುಳೆನ್ನದೇ ಒದ್ದಾಡುತ್ತಿರುವ ಬಿಜೆಪಿಯ ಪ್ರಯತ್ನಗಳಿಗೆ ಪೂರಕವಾಗಿ ಇಲ್ಲಿನ ಕೆಲ ದೃಶ್ಯ ಮಾಧ್ಯಮಗಳೂ ಸಾಥ್ ನೀಡುತ್ತಿದೆ ಎನ್ನುವ ಆರೋಪಗಳ ಮಧ್ಯೆಯೇ ‘ರಿಪಬ್ಲಿಕ್ ಟಿವಿ’ ಯ ಈ ನಡೆ ಜನರ ಆರೋಪಗಳನ್ನು ಗಟ್ಟಿಗೊಳಿಸುತ್ತಿದೆ. ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಕೋಟ್ಯಾಂತರ ರೂಪಾಯಿ ಹಣದ ಆಮಿಷಗಳನ್ನು ಒಡ್ಡುತ್ತಾ ಮತದಾರರಿಂದ ಆಯ್ಕೆಗೊಂಡ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿ, ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಶತಾಯಗತಾಯ ಅಧಿಕಾರದ ಪಡೆಯಲೇಬೇಕೆಂಬ ಆಸೆಗೆ ಬಿದ್ದು ಕೈಸುಟ್ಟುಕೊಂಡಿದೆ. ಆದರೆ ಇಲ್ಲಿಗೇ ಕೊನೆಗೊಂಡಿದೆಯೆಂದೂ ಹೇಳುವಂತಿಲ್ಲ. ಯಾವ ವಾಮ ಮಾರ್ಗದ ಮೂಲಕವಾದರೂ ಸರಿ, ಅಧಿಕಾರದ ಪಡೆಯಬೇಕೆಂಬ ಬಿಜೆಪಿಯ ಅಧಿಕಾರದಾಹಕ್ಕೆ ಮತದಾರರೇ ಸರಿಯಾದ ನಿರ್ಣಯ ಕೈಗೊಳ್ಳಬೇಕಾಗಿದೆ.

To Top
error: Content is protected !!
WhatsApp chat Join our WhatsApp group