ರಾಷ್ಟ್ರೀಯ ಸುದ್ದಿ

ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ವಿವಾದ: ಎಬಿವಿಪಿ ಮಾಜಿ ನಾಯಕರಿಂದ ಸ್ಪೋಟಕ ಮಾಹಿತಿ!

‘ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ಗಮನ ಬೇರೆಡೆ ಸೆಳೆಯಲೆಂದೇ ಸಭೆ ಆಯೋಜಿಸಲಾಗಿತ್ತು’

ವರದಿಗಾರ (ಜ.17): ‘ದೆಹಲಿಯ ಜೆಎನ್‌ಯು ಕ್ಯಾಂಪಸ್ಸಿನಲ್ಲಿ 2016ರ ಫೆಬ್ರವರಿ 9ರಂದು ಹಮ್ಮಿಕೊಳ್ಳಲಾಗಿದ್ದ ಸಭೆಯ ಸಂದರ್ಭ “ಪಾಕಿಸ್ತಾನ್ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿದ್ದ ಬಗ್ಗೆ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವಿಡಿಯೋವಿನಲ್ಲಿರುವವರು ಎಬಿವಿಪಿ (ಅಖಿಲ ಭಾರತ ವಿದ್ಯಾರ್ಥಿ ಪರಿಷದ್) ಸದಸ್ಯರು, ಬೆಂಬಲಿಗರಾಗಿದ್ದರು” ಎಂದು ಅ ಸಂದರ್ಭ ಎಬಿವಿಪಿ ಸಂಘಟನೆಯ ಪದಾಧಿಕಾರಿಗಳಾಗಿದ್ದ ಇಬ್ಬರು ಮಾಜಿ ಜೆಎನ್‌ಯು ವಿದ್ಯಾರ್ಥಿಗಳು ಬಹಿರಂಗಪಡಿಸಿದ್ದು, ಇದೊಂದು ಪೂರ್ವ ನಿಯೋಜಿತ ಘಟನೆಯಾಗಿದೆ’ ಎಂದು ಕಾಲೇಜು ಕ್ಯಾಂಪಸ್ಸಿನಲ್ಲಿ ದ್ವೇಷವನ್ನು ಹರಡುತ್ತಿರುವ ಸತ್ಯಾಂಶವನ್ನು ಹೇಳಿದ್ದಾರೆ.

”ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ಸಂಶೋಧಕ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದಿಂದ ಗಮನ ಬೇರೆಡೆ ಸೆಳೆಯಲೆಂದೇ ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಆಯೋಜಿಸಲಾಗಿದ್ದ ಈ ಸಭೆಯ ಸಂದರ್ಭ ವಿವಾದ ಸೃಷ್ಟಿಸಲು ‘ಯೋಜನೆ’ ಹೂಡಲಾಗಿತ್ತು” ಎಂದು ಜೆಎನ್‌ಯು ಎಬಿವಿಪಿ ಘಟಕದ ಮಾಜಿ ಉಪಾಧ್ಯಕ್ಷ ಜತಿನ್ ಗೊರಯ್ಯ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನರ್ವಾಲ್ ಮಾಧ್ಯಮಗಳೊಂದಿಗೆ ಘಟನೆಯ ಸತ್ಯಾಸತ್ಯತೆಯನ್ನು ಹಂಚಿಕೊಂಡಿದ್ದಾರೆ.

‘ನಾವಿಬ್ಬರೂ ದಲಿತರಾಗಿದ್ದರಿಂದ ಎಬಿವಿಪಿಯನ್ನು ಸಮರ್ಥಿಸಿಕೊಳ್ಳಲು ಟಿವಿ ಸಂದರ್ಶನಗಳಲ್ಲಿ ಹಾಜರಾಗುವಂತೆ ನಮಗೆ ಸತತವಾಗಿ ಹೇಳಲಾಗಿತ್ತು. ಆದರೆ ವೇಮುಲಾರನ್ನು ಅವರು ಉಗ್ರನೆಂದು ಹೇಳುತ್ತಿದ್ದುದರಿಂದ ನಾವು ಅವರು ಹೇಳಿದಂತೆ ಕೇಳಲು ನಿರಾಕರಿಸಿದ್ದೆವು’ ಎಂದಿದ್ದಾರೆ. ‘ಫೆಬ್ರವರಿ 9ರ ಘಟನೆಯಲ್ಲಿ ಅವರು ವಿದ್ಯಾರ್ಥಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಅವಕಾಶ ಪಡೆದರು’. ಎಂದು ಹೇಳಿದ್ದಾರೆ. ಇವರಿಬ್ಬರೂ ಮನನೊಂದು ಎಬಿವಿಪಿಗೆ 2016ರ ಫೆಬ್ರವರಿಯಲ್ಲಿ ರಾಜೀನಾಮೆ ನೀಡಿದ್ದರು.

ಫೆಬ್ರವರಿ 9, 2016ರ ಸಭೆಗಿಂತ ಮೊದಲು ಆ ಘಟನೆಯನ್ನು ಹೇಗೆ ಉತ್ಪ್ರೇಕ್ಷಿಸುವುದೆಂಬುದರ ಬಗ್ಗೆಯೇ ಜೆಎನ್‌ಯು ಎಬಿವಿಪಿ ವ್ಯಾಟ್ಸ್ಯಾಪ್ ಗ್ರೂಪಿನಲ್ಲಿ ಚರ್ಚೆಯ ವಿಷಯವಾಗಿತ್ತೆಂದು ಜತಿನ್ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group