ಸುತ್ತ-ಮುತ್ತ

ಪಾಪ್ಯುಲರ್ ಫ್ರಂಟ್ ವತಿಯಿಂದ ರಾಜ್ಯಾದ್ಯಂತ ಸ್ಕಾಲರ್‌ಶಿಪ್ ವಿತರಣೆ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ‘ರಾಷ್ಟ್ರೀಯ ಸ್ಕಾಲರ್‌ಶಿಪ್ ಯೋಜನೆ 2018-19’ ಇದರ ಅಂಗವಾಗಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಸ್ಕಾಲರ್‌ಶಿಪ್ ವಿತರಣಾ ಕಾರ್ಯಕ್ರಮವು ರಾಜ್ಯದ ವಿವಿಧೆಡೆಗಳಲ್ಲಿ ಆಯೋಜಿಸಲಾಗಿತ್ತು.

ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಬೆಂಗಳೂರಿನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು.

ರಾಜ್ಯದ 8 ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗಿದೆ. ಕಾನೂನು, ಪತ್ರಿಕೋದ್ಯಮ, ವೈದ್ಯಕೀಯ, ತಾಂತ್ರಿಕ, ಸಮಾಜ ಸೇವೆ, ಡಿಪ್ಲೋಮಾ, ಆಡಳಿತಾತ್ಮಕ ಸೇವೆ, ಚಾರ್ಟರ್ಡ್ ಎಕೌಂಟೆಂಟ್ ಮೊದಲಾದ ಕ್ಷೇತ್ರಗಳಲ್ಲಿ ಪದವಿ ಮತ್ತು ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ, 30 ಲಕ್ಷ ರೂಪಾಯಿ ಹಣವನ್ನು ಒಟ್ಟು 451 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

To Top
error: Content is protected !!
WhatsApp chat Join our WhatsApp group