ಸುತ್ತ-ಮುತ್ತ

ಉಳ್ಳಾಲದಲ್ಲಿ  ಜನವರಿ 18ರಂದು ಪೈಗಂಬರ್ (ಸ.ಅ) ರನ್ನು ನಿಂದಿಸಿದ ಹನುಮಕ್ಕನವರ ಮತ್ತು ಸುವರ್ಣ ನ್ಯೂಸ್ ಚಾನಲ್ ವಿರುದ್ಧ  ಖಂಡನಾ ಸಭೆ

ವರದಿಗಾರ  (ಜ 16) :  ಮಾನವ ಜಗತ್ತಿಗೆ ನಾಗರಿಕತೆಯನ್ನು ಪರಿಚಯಿಸಿದ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ ಸ.ಅ.ರವರನ್ನು ಪೂರ್ವಾಗ್ರಹ ಪೀಡಿತ ಉದ್ದೇಶದೊಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಜಿತ್ ‌ಹನುಮಕ್ಕನವರ್ ರ ನಿಲುವನ್ನು ಖಂಡಿಸಿ,  ಮಾಧ್ಯಮ ಧರ್ಮಕ್ಕೆ ಮಸಿ ಬಳಿದ ಅಜಿತ್ ರ ಮೇಲೆ ಕ್ರಮ ಜರುಗಿಸದ ಸುವರ್ಣ ಚಾನೆಲ್ ನ್ನು ಪ್ರತಿಭಟಿಸಿ, ಉಳ್ಳಾಲದ ಸರ್ವ ಮುಸ್ಲಿಂ ಬಾಂಧವರಿಂದ ಬೃಹತ್ ಖಂಡನಾ ಸಭೆ ದಿನಾಂಕ 18.01.019ರಂದು ಸಂಜೆ 3-30ಕ್ಕೆ ಉಳ್ಳಾಲದ ಹಝ್ರತ್ ಮೈದಾನದಲ್ಲಿ ನಡೆಯಲಿದೆ. ಈ ಸಭೆಯನ್ನುದ್ದೇಶಿಸಿ ಮುಸ್ಲಿಂ ಧಾರ್ಮಿಕ ನೇತಾರರು  ಮಾತನಾಡಲಿರುವವರು.  ಉಳ್ಳಾಲ ಮತ್ತು ಜಿಲ್ಲೆಯಾದ್ಯಂತದ ಮುಸ್ಲಿಮರೆಲ್ಲರೂ ‘ಕರ್ತವ್ಯ’ ಎಂದು ಭಾವಿಸಿ ಈ ‘ಖಂಡನಾ ಸಭೆಯಲ್ಲಿ’ಪಾಲ್ಗೊಳ್ಳ ಬೇಕೆಂದು ಈ ಮೂಲಕ ವಿನಯಪೂರ್ವಕವಾಗಿ ಉಳ್ಳಾಲ ಮುಸ್ಲಿಂ ಜಮಾಅತಿನ ಸಂಚಾಲಕ ಸಮಿತಿ ವಿನಂತಿಸುತ್ತದೆ ಎಂದು ಸಂಚಾಲಕ ಸಮಿತಿ ಯ ಸದಸ್ಯ ಫಾರೂಕ್ ಉಳ್ಳಾಲ್  ಹೇಳಿಕೆಯಲ್ಲಿ ತಿಳಿಸಿದ್ದಾರೆ.

To Top
error: Content is protected !!
WhatsApp chat Join our WhatsApp group