ರಾಜ್ಯ ಸುದ್ದಿ

ಪ್ರಧಾನಿ ಮೋದಿ, ಅಮಿತ್ ಷಾ ಗೆ ಪ್ರಜಾಪ್ರಭುತ್ವದಲ್ಲಿ‌ ನಂಬಿಕೆಯೇ‌ ಇಲ್ಲ: ವಿ.ಎಸ್‌. ಉಗ್ರಪ್ಪ 

‘ಬಿಜೆಪಿ ವಚನ ಭ್ರಷ್ಟವಾಗಿದೆ. ಜನಾದೇಶದ ವಿರೋಧಿಯಾಗಿದ್ದು ನಿರಾಶಗೊಂಡಿದೆ’

‘ಮೋದಿ ವಿರುದ್ಧದ ಅಲೆಯನ್ನು ತಡೆಯಲು ಆಪರೇಷನ್ ಕಮಲ ನಡೆಯುತ್ತಿದೆ’

ವರದಿಗಾರ (ಜ.16): ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಪ್ರಜಾಪ್ರಭುತ್ವ‌ ಮತ್ತು ಸಂಸದೀಯ ವ್ಯವಸ್ಥೆಯಲ್ಲಿ‌ ನಂಬಿಕೆ‌ಯೇ ಇಲ್ಲವೆಂದು ಎಂದು ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದ್ದಾರೆ.

ಅವರು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಸಂಸದರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ವರದಿಗಾರರನ್ನುದ್ದೇಶಿಸಿ ಮಾತನಾಡುತ್ತಾ, ಸರ್ಕಾರ ಮತ್ತು ಜನತೆಯ ನಡುವೆ ಸೇತುವೆಯಾಗಿ ಸಂಸದರ ಕಚೇರಿಯು ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಪ್ರಧಾನಿಯು ಒಂದು ತಿಂಗಳ ಸಂಸತ್ ಅಧಿವೇಶನದಲ್ಲಿ ಒಂದು ಗಂಟೆ ಕಾಲವೂ ಹಾಜರಾಗಲಿಲ್ಲ.ರಫೇಲ್ ಯುದ್ಧ ವಿಮಾನ ಹಗರಣ ಪ್ರಕರಣದಲ್ಲಿ ಅಕ್ರಮ ‌ನಡೆಸಿ‌ ಪಡೆದ 35 ಸಾವಿರ ಕೋಟಿ ಕಿಕ್‌ಬ್ಯಾಂಕ್ ಹಣವನ್ನೇ ಆಪರೇಷನ್ ಕಮಲಕ್ಕೆ ಬಳಸಲಾಗುತ್ತಿದೆ ಎಂದು ಗಂಭೀರ ಆರೋಪಿಸಿದ್ದಾರೆ.

ಬಿಜೆಪಿ ವಚನ ಭ್ರಷ್ಟವಾಗಿದೆ. ಜನಾದೇಶದ ವಿರೋಧಿಯಾಗಿದ್ದು ನಿರಾಶಗೊಂಡಿದೆ. ಮೋದಿ ವಿರುದ್ಧದ ಅಲೆಯನ್ನು ದೇಶದಲ್ಲಿ ತಡೆಯುವ ಪ್ರಯತ್ನದ ಭಾಗವಾಗಿಯೇ ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ. ಅದನ್ನು ನಿಲ್ಲಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮೋದಿ‌, ಅಮಿತ್ ಷಾ ಮತ್ತು ಯಡಿಯೂರಪ್ಪ ಮುಕ್ತ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ ಎಂದು ಹೇಳಿದ್ದಾರೆ.

ಆಪರೇಷನ್ ನಡೆಸಲು ಬಿಜೆಪಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡು ಕರ್ನಾಟಕದ ಮಾನ ಕಳೆದಿದೆ ಎಂದಿದ್ದಾರೆ. ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದ ಇಬ್ಬರು ಪಕ್ಷೇತರರಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದೂ ಅವರು ಈ ಸಂದರ್ಭ ಹೇಳಿದ್ದಾರೆ.

 

To Top
error: Content is protected !!
WhatsApp chat Join our WhatsApp group