ರಾಜ್ಯ ಸುದ್ದಿ

‘ಮೋದಿ ಓರ್ವ ವಿಫಲತೆಗಳ ನಾಯಕ, ಸುಳ್ಳುಗಳ ರಾಜ’ : ಕುಮಾರಸ್ವಾಮಿ ವಿರುದ್ಧದ ಟೀಕೆಗೆ ಕಾಂಗ್ರೆಸ್ ಗರಂ

ವರದಿಗಾರ ಜ 13 : ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ರಾಷ್ಟ್ರೀಯ ಸಮಾವೇಶವನ್ನುದ್ದೇಶಿಸಿ ಮಾತನಾಡುವಾಗ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ‘ಗುಮಾಸ್ತ’ನೆಂದು ಉಲ್ಲೇಖಿಸಿ ಮಾತನಾಡಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್, ‘ಗೌರವಯುತ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ, ತಾವು ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಮುಖ್ಯಮಂತ್ರಿಯೋರ್ವನನ್ನು ಗುಮಾಸ್ತನೆಂದು ಕರೆದಿದ್ದೀರಿ. ತಾವು ಓರ್ವ ‘ವಿಫಲತೆಗಳ ನಾಯಕ, ಸುಳ್ಳುಗಳ ರಾಜ’. ಪ್ರಧಾನಿ ಸ್ಥಾನಕ್ಕೆ ಇರುವ ಗೌರವಕ್ಕೆ ಅವಮಾನಿಸಿದ್ದೀರಿ’ ಎಂದು ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದೆ.

ತನ್ನ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಉತ್ತರಿಸಲು ಸಂಸತ್ತಿಗೆ ಬರದೆ ಇರುವ ಮೋದಿಯ ನಿಲುವನ್ನು ಕೂಡಾ ಕಾಂಗ್ರೆಸ್ ಟೀಕಿಸಿದೆ.

ರಾಜ್ಯ ಬಿಜೆಪಿ ನಾಯಕರು ಮೋದಿಯ ಹೇಳಿಕೆಯನ್ನು ಸಮರ್ಥಿಸುತ್ತಿರುವರಾದರೂ, ಓರ್ವ ಪ್ರಧಾನಿಯಂತಹಾ ಗೌರವಾನ್ವಿತ ಹುದ್ದೆಯಲ್ಲಿರುವ ವ್ಯಕ್ತಿಯ ಹೇಳಿಕೆ ಸಾರ್ವತ್ರಿಕ ವಲಯದಲ್ಲಿ ತೀವ್ರ ಟೀಕೆಯನ್ನೆದುರಿಸುತ್ತಿದೆ. ದೋಸ್ತಿ ಸರಕಾರದ ಪ್ರತಿಯೊಬ್ಬ ನಾಯಕರು ಮೋದಿಯ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿಯೇ ಇರದ ಹೇಳಿಕೆಯನ್ನು ಕೆಲ ಮಾಧ್ಯಮಗಳ ಸುಳ್ಳು ವರದಿಯನ್ನುದ್ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ‘ಗುಮಾಸ್ತ’ ಎಂದು ಹೇಳಿರುವುದು ಉಲ್ಲೇಖನೀಯ

Click to comment

You must be logged in to post a comment Login

Leave a Reply

To Top
error: Content is protected !!
WhatsApp chat Join our WhatsApp group