ಜಿಲ್ಲಾ ಸುದ್ದಿ

‘ಹಿಂದೂ ನಾಯಕರ ಹತ್ಯೆ’ ಗೆ ಸಂಚು ಎಂಬ ಸುಳ್ಳು ಸುದ್ದಿ ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿ ನಡೆಸಿರುವ ಪೂರ್ವ ತಯಾರಿ : ಎಸ್ಡಿಪಿಐ ಆರೋಪ

ವರದಿಗಾರ  (ಜ 11) : ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಂಘಪರಿವಾರದ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಕೆಲವೊಂದು ಮಾಧ್ಯಮಗಳ ಮೂಲಕ ಪ್ರಚಾರ ಪಡಿಸಿ ಮತ್ತೊಮ್ಮೆ ಹಿಂದೂ ಮತಗಳನ್ನು ಕ್ರೋಢೀಕರಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯನ್ನು ಸುಲಭವಾಗಿ ಗೆಲ್ಲುವ ಒಂದು ಪ್ರಯತ್ನವಾಗಿರುತ್ತದೆ.
ಈ ರೀತಿಯ ಹತ್ಯೆಯ ಸಂಚು ಎಂಬ ಪ್ರಹಸನವನ್ನು ಸೃಷ್ಟಿಸುವುದರಲ್ಲಿ ಸಂಘಪರಿವಾರ ಮತ್ತು ಬಿಜೆಪಿ ನಿಸ್ಸೀಮವಾಗಿದೆ. ಇಂತಹ ಸತ್ಯಕ್ಕೆ ನಿಲುಕದ ಸುಳ್ಳು ಸುದ್ದಿಗಳನ್ನು ಬಿಜೆಪಿ ಪಕ್ಷವು ಪ್ರತಿಯೊಂದು ಚುನಾವಣೆಯ ಸಂದರ್ಭದಲ್ಲೂ ಛೂ ಬಿಡುತ್ತದೆ.  ಆದರೆ ಈ ಸುದ್ದಿ ಎಲ್ಲಿಂದ ಬಂತು ಯಾರು ಇದರ ಹಿಂದೆ ಇರುವವರು ಎಂಬುದರ ಬಗ್ಗೆ ತನಿಖೆ ನಡೆಸಿದಾಗ ನಿಖರವಾದ ಮಾಹಿತಿಗಳು ಪೊಲೀಸ್ ಇಲಾಖೆಗೆ ಸಿಕ್ಕಿರುವುದಿಲ್ಲ.
ಈ ಸುದ್ದಿಯು ಕೂಡ ಅದೇ ರೀತಿಯಾಗಿದೆ. ಏಕೆಂದರೆ ಈ ಸುದ್ದಿಯನ್ನು ಮೊದಲು ಪ್ರಕಟಿಸಿದ್ದು ಸಂಘಪರಿವಾರದ ಮುಖವಾಣಿ ಯಾಗಿರುವ ಕಹಳೆ ನ್ಯೂಸ್, ಸುವರ್ಣ ನ್ಯೂಸ್ ಎಂಬ ಚಾನೆಲ್ ಗಳು. ಅವರು ಹೇಳುವ ಪ್ರಕಾರ ಹತ್ಯೆ ಸಂಚು ಸುದ್ದಿ ಗುಪ್ತಚರ ಇಲಾಖೆ ಬಹಿರಂಗ ಪಡಿಸಿದ ಬಗ್ಗೆ  ಪ್ರಕಟಿಸಿರುತ್ತಾರೆ. ಆದರೆ ಗುಪ್ತಚರ ಇಲಾಖೆಯು ಇಂತಹ ಸೂಕ್ಷ್ಮ ಮತ್ತು ಗಂಭೀರ ಸ್ವರೂಪದ ಸುದ್ದಿಯನ್ನು ಗುಪ್ತವಾಗಿ ಕೇವಲ ಎರಡು ಮಾಧ್ಯಮಗಳಿಗೆ ಮಾತ್ರ ನೀಡಿರುವ ಔಚಿತ್ಯವಾದರೂ ಏನು? ಎಂಬ ಸಂಶಯವು ಸಾಮಾನ್ಯವಾಗಿ ಉದ್ಭವಿಸುತ್ತದೆ. ಸಂಘ ಪರಿವಾರವು ಕರಾವಳಿಯ ಪೋಲೀಸ್ ಇಲಾಖೆಯಲ್ಲಿ ಶೇಕಡಾ 60% ಪೋಲೀಸರು ಸಂಘಪರಿವಾರದವರು ಎಂಬ ಹೇಳಿಕೆ ಈ ಮೊದಲು ನೀಡಿರುವುದರಿಂದ ಈ ಪ್ರಹಸನದಲ್ಲಿ ಪೋಲೀಸರ ಕೂಡ ಶಾಮೀಲಾಗಿದೆಯೇ ಎಂಬ ಪ್ರಶ್ನೆ ಗಳು ಉದ್ಭವವಾಗುತ್ತದೆ. ಏಕೆಂದರೆ ಮುಸ್ಲಿಂ ನಾಯಕರಿಗೆ ನೇರವಾಗಿ ಬೆದರಿಕೆ ಬಂದ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದವರು ಸಂಘಪರಿವಾರದ ಕ್ರಿಮಿನಲ್ ನಾಯಕರಿಗೆ ಸರಕಾರಿ ವೆಚ್ಚದಲ್ಲಿ ರಕ್ಷಣೆಯನ್ನು ನೀಡುತ್ತಿರುವುದು ದುರಂತವಾಗಿದೆ ಹಾಗೂ ಈ ಸುಳ್ಳು ಸುದ್ದಿಯನ್ನು ಆಧರಿಸಿ ಮುಸ್ಲಿಂ ಯುವಕರನ್ನು ಬೇಟೆಯಾಡುತ್ತಿರುವುದನ್ನು ಎಸ್ಡಿಪಿಐ ಪಕ್ಷವು ಖಂಡಿಸುತ್ತದೆ.
ಹಾಗೂ ಪೊಲೀಸ್ ಇಲಾಖೆ ಈ ಸುದ್ದಿಯ ನೈಜತೆಯ ಬಗ್ಗೆ ವಿಶೇಷ ತನಿಖೆ ನಡೆಸಿ ಇದರ ಹಿಂದಿರುವ ಷಡ್ಯಂತ್ರವನ್ನು ಬಹಿರಂಗ ಪಡಿಸುವುದರ ಮೂಲಕ ಸತ್ಯವನ್ನು ಜನರ ಮುಂದೆ ಬಯಲುಗೊಳಿಸಿ ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯವನ್ನು ಕಾಣಲು ಪೋಲೀಸ್ ಇಲಾಖೆಯು ಶ್ರಮಿಸಬೇಕು. ಅದೇ ರೀತಿ ಜನಸಾಮಾನ್ಯರು ಈ ಸುಳ್ಳು ಸುದ್ದಿಯ ಬಗ್ಗೆ ತಲೆ ಕೆಡಿಸಿಕೊಳ್ಳದೆ ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡಬೇಕೆಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಯವರು ಪತ್ರಿಕಾ ಪ್ರಕಟಣೆಯಲ್ಲಿ  ತಿಳಿಸಿರುತ್ತಾರೆ.

To Top
error: Content is protected !!
WhatsApp chat Join our WhatsApp group