ಸುತ್ತ-ಮುತ್ತ

ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ರವರ ಅಗಲಿಕೆ ಇಸ್ಲಾಮಿನ ಪಾಂಡಿತ್ಯ ಲೋಕಕ್ಕೆ ತುಂಬಲಾರದ ನಷ್ಟ: ರಿಯಾಝ್ ಫರಂಗಿಪೇಟೆ

ವರದಿಗಾರ (ಜ.8): ದ.ಕ. ಜಿಲ್ಲೆಯ ಪ್ರಖ್ಯಾತ ಹಿರಿಯ ಮುಸ್ಲಿಂ ವಿದ್ವಾಂಸರಾದ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ (ಮಿತ್ತಬೈಲು ಉಸ್ತಾದ್) ರವರು ಇಸ್ಲಾಮಿನ ಪ್ರಖ್ಯಾತ ಕರ್ಮ ಶಾಸ್ತ್ರ ಪಂಡಿತರಾಗಿದ್ದುಕೊಂಡು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಖಗೋಳ ಶಾಸ್ತ್ರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ಅಪಾರ ಸಂಖ್ಯೆಯ ಶಿಷ್ಯಂದಿರು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಕರಾವಳಿ ಜಿಲ್ಲೆಯ ಬಹುತೇಕ ಧಾರ್ಮಿಕ ಕೇಂದ್ರಗಳಿಗೆ ಅವರು ಮಾರ್ಗದರ್ಶಕರಾಗಿದ್ದರು. ಯಾವುದೇ ಐಷಾರಾಮಿ ಅಥವಾ ಆಡಂಬರದ ಜೀವನವನ್ನು ಬಯಸದೆ ಅತ್ಯಂತ ಸರಳವಾದ ಜೀವನ ಶೈಲಿಯ ಮೂಲಕ ಸರ್ವರಿಗೂ ಮಾದರಿಯಾಗಿದ್ದರು. ಯಾವುದೇ ಸ್ಥಾನಮಾನಗಳನ್ನು ಬಯಸದೆ ತನ್ನ ಧಾರ್ಮಿಕ ಪಾಂಡಿತ್ಯವನ್ನು ಇಸ್ಲಾಂ ಧರ್ಮಕ್ಕೆ ಧಾರೆ ಎರೆದ ಮಹಾನ್ ಚೇತನ ಮಾತ್ರವಲ್ಲದೆ ಸರ್ವ ಧರ್ಮೀಯರೊಂದಿಗೂ ಸಹಬಾಳ್ವೆ ಮತ್ತು ಐಕ್ಯತೆಯೊಂದಿಗೆ ಬಾಳುವಂತೆ ಪ್ರವಚನವನ್ನು ನೀಡುವ ಮೂಲಕ ಪರ ಧರ್ಮ ಸಹಿಷ್ಣುತೆಯನ್ನು ಜಿಲ್ಲೆಗೆ ಸಾರಿದ ಮಹಾನ್ ಮಾದರಿ ನಾಯಕ ಬಹುಮಾನ್ಯರಾದ ಮಿತ್ತಬೈಲ್ ಅಬ್ದುಲ್ ಜಬ್ಬಾರ್ ಉಸ್ತಾದ್ ರ ಅಗಲಿಕೆಯು ಇಸ್ಲಾಮಿನ ಪಾಂಡಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿರುತ್ತದೆ’ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಯವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲಾಹನು ಉಸ್ತಾದರ ಜೀವಿತ ಕಾಲದ ಎಲ್ಲಾ ಸತ್ಕಾರ್ಯವನ್ನು ಸ್ವೀಕರಿಸಲಿ ಮತ್ತು ಪರಲೋಕ ಜೀವನದಲ್ಲಿ ಯಶಸ್ಸನ್ನು ನೀಡಿ ಅನುಗ್ರಹಿಸಲಿ ಹಾಗೂ ಅವರಂತೆಯೇ ಜೀವನದುದ್ದಕ್ಕೂ ಮುಸ್ಲಿಂ ಸಮುದಾಯದ ಸೇವೆಯನ್ನು ನಡೆಸಲು ನಮಗೂ ಶಕ್ತಿ ನೀಡಲಿ ಎಂದು ರಿಯಾಝ್ ಫರಂಗಿಪೇಟೆ ಅವರು ಸಂತಾಪ ಸೂಚನೆಯಲ್ಲಿ ಪ್ರಾರ್ಥಿಸಿದ್ದಾರೆ.

To Top
error: Content is protected !!
WhatsApp chat Join our WhatsApp group