ಸುತ್ತ-ಮುತ್ತ

ನಿರೂಪಕನಿಂದ ಪ್ರವಾದಿ ನಿಂದನೆ: ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ ‘ಸುವರ್ಣ ಚಾನೆಲ್’ ರದ್ದುಗೊಳಿಸಿ ಅಭಿಯಾನ

ವರದಿಗಾರ (ಜ.7): ಜಗತ್ತಿಗೆ ನಾಗರಿಕ ಬದುಕನ್ನು ಪರಿಚಯಿಸಿದ ಮಾದರಿ  ನಾಯಕ, ಮುಸ್ಲಿಮರ ಪಾಲಿಗೆ ಜೀವಕ್ಕಿಂತ ಮಿಗಿಲಾಗಿರುವ ಪ್ರವಾದಿ ಶ್ರೇಷ್ಠ  ಪೈಗಂಬರ್ ( ಸ.ಅ)ರ ಕುರಿತು ಪೂರ್ವಾಗ್ರಹ ಪೀಡಿತ ಹೇಳಿಕೆ ನೀಡಿದ ಸುವರ್ಣ ನ್ಯೂಸ್ ಚಾನಲ್ ನ ನಿರೂಪಕ ಅಜಿತ್ ಹನುಮಕ್ಕನವರ್  ರನ್ನು ಸುವರ್ಣ ಚಾನೆಲ್ ನಿಂದ ವಜಾ ಮಾಡಬೇಕೆಂಬ ಕರ್ನಾಟಕದ ಮುಸ್ಲಿಮರ ವಿನಂತಿಗೆ ಸ್ಪಂದಿಸದ ಸುವರ್ಣ ಚಾನೆಲನ್ನು ಮನೆ-ಮನದಿಂದ ದೂರ ಇಡಲು ಉಳ್ಳಾಲದ ನಲ್ವತ್ತು ಸಾವಿರ ಮುಸ್ಲಿಮರ ಒಕ್ಕೂಟವಾದ ಉಳ್ಳಾಲ ಜಮಾಅತ್  ಹಾಗೂ ಉಳ್ಳಾಲ ದರ್ಗಾ ಆಡಳಿತ ಸಮಿತಿಯು ‘ಸುವರ್ಣ ಚಾನೆಲ್’ ರದ್ದುಗೊಳಿಸಿ’ ಅಭಿಯಾನಯನ್ನು ಕೈಗೊಂಡಿದ್ದು, ಉಳ್ಳಾಲ ಜಮಾಅತ್ ವ್ಯಾಪ್ತಿಯ ಮುಸ್ಲಿಂ ಬಾಂಧವರು ಸಹಕರಿಸುವಂತೆ ಉಳ್ಳಾಲ ದರ್ಗಾ ಅಧ್ಯಕ್ಷ   ಹಾಜಿ ಅಬ್ದುಲ್ ರಶೀದ್ ಅಧಿಕೃತ ಪ್ರಕಟಣೆ ನೀಡಿದ್ದಾರೆಂದು ಉಳ್ಳಾಲ ದರ್ಗಾ ಸಮಿತಿ ಯ ಫಾರೂಕ್ ಉಳ್ಳಾಲ್ ತಿಳಿಸಿದ್ದಾರೆ.

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿಯವರ ಅಧ್ಯಕ್ಷ ತೆಯಲ್ಲಿ ಸೇರಿದ ಜಮಾಅತ್ ವ್ಯಾಪ್ತಿಯ ಸಂಘ – ಸಂಸ್ಥೆಗಳ ಮತ್ತು ಮೊಹಲ್ಲಾ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ವನ್ನು ಕೈಗೊಳ್ಳಲಾಗಿದ್ದು, ಪೋಲಿಸ್ ಇಲಾಖೆ ಅಜಿತ್ ಹನುಮಕ್ಕನವರನ್ನು ಇನ್ನೆರಡು ದಿನಗಳಲ್ಲಿ ಬಂಧಿಸದೇ ಹೋದಲ್ಲಿ  ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿ ಅಜಿತ್ ಮತ್ತು ಸುವರ್ಣ ಚಾನೆಲ್ ವಿರುದ್ಧ ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುವುದೆಂದೂ ಫಾರೂಕ್ ಉಳ್ಳಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸುವರ್ಣ ಚಾನೆಲ್ ಧಿಕ್ಕರಿಸುವಂತೆ ಉಳ್ಳಾಲ ಮುಸ್ಲಿಂ ಜಮಾಅತ್ ಹಾಗೂ ಉಳ್ಳಾಲ ದರ್ಗಾ ಆಡಳಿತ ಸಮಿತಿಯಿಂದ ಉಳ್ಳಾಲ ಜಮಾಅತ್ ವ್ಯಾಪ್ತಿ ಯ ಮುಸ್ಲಿಂ ಮನೆಗಳಿಗೆ ಕರೆ (ಬಿಳಿ) ಕೊಡಲು ನಿರ್ಧಾರ.

ಮಾದರಿ ಜೀವನ ಕ್ರಮವನ್ನು ಜಗತ್ತಿಗೆ ಸಮರ್ಪಿಸಿದ ಲೋಕ ನಾಯಕ, ಸವ್ಯಸಾಚಿ ವ್ಯಕ್ತಿತ್ವದ ಅದ್ವಿತೀಯ ನೇತಾರ ಹಝ್ರತ್ ಮುಹಮ್ಮದ್ ಮುಸ್ತಫಾ ಸ.ಅ.ರವರನ್ನು ಅವಹೇಳನ ಮಾಡಿದ ಸುವರ್ಣ ನ್ಯೂಸ್ ಚಾನಲನ್ನು ಧಿಕ್ಕರಿಸುವಂತೆ ಉಳ್ಳಾಲ ಜಮಾಆತಿನ ನಲ್ವತ್ತು ಸಾವಿರ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರುವ ಮುಸ್ಲಿಮರಲ್ಲಿ ವಿನಂತಿಸುವ ಕರೆಯನ್ನು ನೀಡುವ ನಿರ್ಧಾರವನ್ನು ಇಂದು ಸಂಜೆ ಉಳ್ಳಾಲ ದರ್ಗಾ ಅಧ್ಯಕ್ಷ ರಾದ ಹಾಜೀ ಅಬ್ದುಲ್ ರಶೀದ್ ರವರ ಅಧ್ಯಕ್ಷತೆಯಲ್ಲಿ ನಡೆದ ಉಳ್ಳಾಲದ ಮುಸ್ಲಿಂ ಸಂಘ- ಸಂಸ್ಥೆಗಳು , ಕ್ರೀಡಾ ತಂಡಗಳ ಪ್ರತಿನಿಧಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಅಜಿತ್ ಹನುಮಕ್ಕನ್ವರ್ , ಪ್ರವಾದಿ ಶ್ರೇಷ್ಠ ರ ವ್ಯಕ್ತಿತ್ವ ಕ್ಕೆ 29.12.019ರಂದು ಕಳಂಕ ತರುವಂತೆ ಹರಟಿದ ಮರುದಿನವೇ ಉಳ್ಳಾಲ ದರ್ಗಾ ಸಮಿತಿ ಸಾರ್ವಜನಿಕ ವಾಗಿ,ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿ ಯಲ್ಲಿ ಖಂಡನಾ ಸಭೆ ನಡೆಸಿ, ಸೂಕ್ತ ಕ್ರಮಕ್ಕಾಗಿ ಸಂಬಂಧ ಪಟ್ಟವರನ್ನು ಆಗ್ರಹಿಸಿದ್ದರೂ ಇನ್ನೂ ಹನುಮಕ್ಕನವರ ಬಂಧನವಾಗದೇ ಇರುವ ಬಗ್ಗೆ ಸಭೆ ತೀವ್ರ ಅಸಮಾಧಾನ ವನ್ನು ವ್ಯಕ್ತಪಡಿಸಲಾಯಿತು. ಉಳ್ಳಾಲದ ವಿವಿಧ ಸಂಘ-ಸಂಸ್ಥೆಗಳು , ರಾಜಕೀಯ ಪಕ್ಷಗಳೂ ಸೇರಿ ಮೂವತ್ತಕ್ಕೂ ಹೆಚ್ಚು ದೂರು ನೀಡಲ್ಪಟ್ಟಿದ್ದರೂ ಮುಂದಿನ ಕ್ರಮ ನಡೆಯದೇ ಇರುವುದರಿಂದ ಆ ಕುರಿತೂ ವಿಚಾರಿಸಿ, ಪೂರಕ ಕ್ರಮಕ್ಕಾಗಿ ಒತ್ತಾಯಿಸಲು ನಿಯೋಗ ತೆರಳುವ ನಿರ್ಧಾರ ವನ್ನೂ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ಪ್ರ.ಕಾರ್ಯದರ್ಶಿ ತ್ವಾಹ ಹಾಜೀ, ದರ್ಗಾ ಸಮಿತಿಯ ಫಾರೂಕ್ ಉಳ್ಳಾಲ್, ದರ್ಗಾ ಚಾರಿಟೇಬಲ್ ಟ್ರಸ್ಟ್ ಸದಸ್ಯ ಅಯ್ಯೂಬ್ ಮಂಚಿಲ, ದರ್ಗಾ ಆಡಳಿತ ಸಮಿತಿ ಸದಸ್ಯ ಯು.ಕೆ. ಮುಸ್ತಫ ಬಾವ,ಅರೇಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶಿಫ್ಅಬ್ದುಲ್ಲ, ದರ್ಗಾ ಸಮಿತಿ ಸದಸ್ಯರಾದ ಹಮ್ಮಬ್ಬ ಕೋಟೇಪುರ, ಅಲಿಮೋನು, ಹಮೀದ್ ಕೋಡಿ, ಕೆ.ಎನ್.ಮೊಹಮ್ಮದ್, ಹಮೀದ್ ಪಾಂಡೇಲ್ ಪಕ್ಕ, ಖಲೀಲ್ ಕಡಪರ, ಕೋಟೇಪುರ ಖರಿಯಾ ಅಧ್ಯಕ್ಷ ಯು.ಕೆ.ಅಬ್ಬಾಸ್ ಉಪಸ್ಥಿತರಿದ್ದರು.

 

To Top
error: Content is protected !!
WhatsApp chat Join our WhatsApp group