ಸುತ್ತ-ಮುತ್ತ

ಜೋಕಟ್ಟೆ ಮಾಡಿಲ ಸೇತುವೆ ರಸ್ತೆ ಕಾಮಗಾರಿ ಪ್ರಾರಂಭ : ಎಸ್ಡಿಪಿಐ ಹೋರಾಟಕ್ಕೆ ಸಂದ ಫಲ

ವರದಿಗಾರ  (ಜ 7) : ಜೋಕಟ್ಟೆಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕಿಸುವ ಏಕ ಮಾತ್ರ ರಸ್ತೆಯಾಗಿದ್ದ ಜೋಕಟ್ಟೆ ಮಾಡಿಲಕ್ಕೆ ಲಕ್ಷಾಂತರ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದರೂ ಅದನ್ನು ಸಂಪರ್ಕಿಸುವ ಎರಡೂ ಕಡೆಗಳಲ್ಲಿ ಸಮರ್ಪಕ ರಸ್ತೆಗಳನ್ನು ನಿರ್ಮಿಸದೆ ಅವ್ಯವಸ್ಥಿತವಾಗಿ ಸೇತುವೆ ಕಾಮಗಾರಿಯನ್ನು ಪೂರ್ತಿಗೊಳಿಸಿದ್ದರು. ಇದರ ವಿರುದ್ಧ ಎಸ್ಡಿಪಿಐ ಜೋಕಟ್ಟೆ ಗ್ರಾಮಸಮಿತಿಯು ಕಳೆದ ನವಂಬರ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಅತಿ ಶೀಘ್ರದಲ್ಲೇ ಸಮರ್ಪಕ ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು.ಅದರಂತೆಯೇ ಎಸ್ಡಿಪಿಐಯ ಹೋರಾಟದ ಫಲಶ್ರುತಿಯೆಂಬಂತೆ ಇದೀಗ ರಸ್ತೆ ಕಾಮಗಾರಿ ಪ್ರಾರಂಭಗೊಂಡಿದ್ದು, ಎಸ್ಡಿಪಿಐಯ ಹೋರಾಟಕ್ಕೆ ಸೂಕ್ತ ಫಲ ದೊರಕಿದಂತಾಗಿದ್ದು ಊರ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಕೆಲವೊಂದು ಇಲಾಖಾ ಮಟ್ಟದ ಅಡೆ ತಡೆಗಳಿಂದಾಗಿ ಕಾಮಗಾರಿ ಆರಂಭಿಸಲು ತಡವಾಗಬಹುದೆಂಬ ಸೂಚನೆಯ ಹಿನ್ನೆಲೆಯಲ್ಲಿ ಸ್ಥಳೀಯ ಎಸ್ಡಿಪಿಐ ಮುಖಂಡರು ಇಂಜಿನಿಯರ್ ರವರನ್ನು ಭೇಟಿ ಮಾಡಿ, ಕಾಮಗಾರಿ ತಡವಾದಲ್ಲಿ ಮುಂಬರುವ ಮಳೆಗಾಲದಲ್ಲಿ ಜೋಕಟ್ಟೆಯ ನಾಗರಿಕರು ಬಹಳಷ್ಟು ಕಷ್ಟಪಡಬೇಕಾದೀತು ಎಂಬುವುದನ್ನು ಮನದಟ್ಟು ಮಾಡಿಸಿ, ಮುಂಗಡ ಟೆಂಡರ್ ಮೂಲಕ ಕಾಮಗಾರಿ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಹೋರಾಟವೊಂದರ ಫಲವಾಗಿ ಊರ ನಾಗರಿಕರು ಅವ್ಯವಸ್ಥೆಗಳಿಂದ ಕೂಡಿದ್ದ ರಸ್ತೆಯಲ್ಲಿ ಸಂಚರಿಸುವ ಸಂಕಷ್ಟವೊಂದು ತಪ್ಪಿದಂತಾಗಿದೆ. ಇದಕ್ಕಾಗಿ ಊರ ನಾಗರಿಕರು ಎಸ್ಡಿಪಿಐಗೆ ಅಭಿನಂದನೆ ಸಲ್ಲಿಸಿದ್ದಾರೆ

 

 

 

 

To Top
error: Content is protected !!
WhatsApp chat Join our WhatsApp group