ರಾಷ್ಟ್ರೀಯ ಸುದ್ದಿ

ಕೇರಳ ಬಂದ್ ವೇಳೆ ಪೊಲೀಸ್ ಠಾಣೆಗೆ ಬಾಂಬೆಸೆದ ಆರೆಸ್ಸೆಸ್ ಪ್ರಚಾರಕ ಸಿಸಿಟಿವಿಯಲ್ಲಿ ಸೆರೆ !

ವರದಿಗಾರ  (ಜ 5) : ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಬಿಜೆಪಿ ಮತ್ತು ಸಂಘಪರಿವಾರಗಳು ಜನವರಿ ಮೂರರಂದು ಕೇರಳ ಬಂದ್ ಗೆ ಕರೆ ನೀಡಿದ್ದವು. ಅದೇ ದಿನ ಕೇರಳದ ರಾಜಧಾನಿ ತಿರುವನಂತಪುರದ ನೆಡುಮಾಂಗಾಡ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ನಾಲ್ಕು ಬಾಂಬ್ ಗಳನ್ನು ಹಾಕಲಾಗಿತ್ತು. ಈ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಇದೀಗ ಸ್ಥಳದಲ್ಲಿ ಲಭ್ಯವಿದ್ದ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಬಾಂಬ್ ಹಾಕಿದ ದುಷ್ಕರ್ಮಿ ಆರೆಸ್ಸೆಸ್ಸಿನ ನೆಡುಂಬಾಂಗಾಡ್ ಜಿಲ್ಲಾ ಪ್ರಚಾರಕ  ಪ್ರವೀಣ್ ಎಂದು ಪೊಲೀಸರು ಗುರುತಿಸಿದ್ದಾರೆ.

ವೀಡಿಯೋ ಕೃಪೆ : ನ್ಯೂಸ್ 18

ಕೇರಳ ಬಂದ್ ದಿನ ನೆಡುಂಬಾಂಗಾಡ್ ಪೊಲೀಸ್ ಠಾಣೆಯ ಮುಂದೆ ಬಿಜೆಪಿ ಹಾಗೂ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸ್ ಠಾಣೆಯ ನೇರಕ್ಕೆ ನಾಲ್ಕು ಬಾಂಗ್ ಗಳನ್ನು ಎಸೆಯಲಾಗಿತ್ತು. ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ. ಆದರೆ ಠಾಣೆಯ ಮುಂಬಾಗ ಜಖಂಗೊಂಡಿತ್ತು ಎನ್ನಲಾಗಿದೆ. ನಂತರ ಕಮ್ಯುನಿಸ್ಟ್ ಪಕ್ಷದ ಮೆರವಣಿಗೆಯ ಮೇಲೂ ಎರಡು ಬಾಂಬ್ ಗಳನ್ನು ಎಸೆಯಲಾಗಿತ್ತು.

ವೀಡಿಯೋ ಕೃಪೆ : ಏಶಿಯಾನೆಟ್

ಇದೀಗ ಪೊಲೀಸರು ಬಾಂಬ್ ಎಸೆದ ಆರೋಪಿಯನ್ನು ಸಿಸಿಟಿವಿಯ ದೃಶ್ಯದ ಆಧಾರದ ಮೇಲೆ ಗುರುತಿಸಿದ್ದು, ದುಷ್ಕರ್ಮಿಯನ್ನು ಜಿಲ್ಲಾ ಆರೆಸ್ಸೆಸ್ ಪ್ರಚಾರಕ ಪ್ರವೀಣ್ ಎಂದು ಗುರುತಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕೇರಳದಲ್ಲಿ ಈ ಹಿಂದೆಯೂ ಬಿಜೆಪಿ ಕಛೇರಿಯಲ್ಲಿ ಬಾಂಬ್ ಗಳೂ ಸೇರಿದಂತೆ ಮಾರಕಾಯುಧಗಳನ್ನು ವಶಪಡಿಸಿಕೊಂಡದ್ದು ವರದಿಯಾಗಿತ್ತು.

To Top
error: Content is protected !!
WhatsApp chat Join our WhatsApp group