Uncategorized

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸ್ವಾಗತಿಸಿದ ಬಿಜೆಪಿ ಸಂಸದ

ವರದಿಗಾರ (ಜ.02): ಮಹಿಳೆಯರಿಗೆ ಪ್ರಾರ್ಥಿಸುವ ಹಕ್ಕು ಇದೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದು ನನಗೆ ಸಂತೋಷವಾಗಿದೆ. ಸತಿ ಮತ್ತು ವರದಕ್ಷಿಣಿ ಪಿಡುಗುಗಳೂ ನಾಶವಾಗಬೇಕು ಎಂದು ಬಿಜೆಪಿ ಸಂಸದ ಉದಿತ್ ರಾಜ್ ಹೇಳಿದ್ದಾರೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದನ್ನು ಖಂಡಿಸಿ ಕೇರಳದಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವಾಗ ದೆಹಲಿಯ ಸಂಸದ ಮಹಿಳೆಯರ ಶಬರಿಮಲೆ ಪ್ರವೇಶವನ್ನು ಸ್ವಾಗತಿಸಿ ಟ್ವೀಟ್ ಮಾಡಿದ್ದಾರೆ. 

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ. ದೇವರು ದೇವಾಲಯದ ಹೊರಗೂ ಇದ್ದಾರೆ. ಸಂವಿಧಾನದಲ್ಲಿ ಗಂಡು ಮತ್ತು ಹೆಣ್ಣು ಇಬ್ಬರೂ ಸಮಾನರು ಎಂದಿದ್ದಾರೆ.

To Top
error: Content is protected !!
WhatsApp chat Join our WhatsApp group