ರಾಷ್ಟ್ರೀಯ ಸುದ್ದಿ

ಪ್ರಧಾನಿ ಮೋದಿ ಅಧಿವೇಶನಕ್ಕೆ ಬರದೆ ಅಡಗಿಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

ಧೈರ್ಯವಿದ್ದರೆ ಮೋದಿ ಸಂಸತ್ತಿಗೆ ಬಂದು ಮಾತನಾಡಲಿ; ಪ್ರಧಾನಿಗೆ ರಾಹುಲ್​ ಸವಾಲು

ವರದಿಗಾರ (ಜ.02): ಇಂದು ನಡೆದ ಸಂಸತ್​ ಅಧಿವೇಶನದಲ್ಲಿ ರಫೇಲ್ ಹಗರಣದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಅಧಿವೇಶನಕ್ಕೆ ಬರದೆ ತಮ್ಮ ಬೆಡ್​ರೂಮ್​ನಲ್ಲಿ ಅಡಗಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಸಂಸತ್​ ಅಧಿವೇಶನದಲ್ಲಿ ರಫೇಲ್ ಹಗರಣದ ಬಗ್ಗೆ ಮಾತನಾಡುತ್ತಾ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಜೇಟ್ಲಿ ಕಾಂಗ್ರೆಸ್​ ಸುಳ್ಳನ್ನೇ ಹೇಳುತ್ತದೆ ಎಂದು ಹೇಳಿದ್ದಾರೆ.

ಅಧಿವೇಶನದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, “ನಮ್ಮ ಸರ್ಕಾರ 126 ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈ ಒಪ್ಪಂದವನ್ನು ರದ್ದು ಮಾಡಿದ್ದೇಕೆ? ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಕೆ ಮಾಡಿದ್ದೇಕೆ? ರಾಷ್ಟ್ರದ ಭದ್ರತೆಯಲ್ಲಿ ಮೋದಿ ಬದಲಾವಣೆ ಮಾಡಿದರೇ? ಈ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.

.“ರಫೇಲ್​ ಒ​ಪ್ಪಂದ ನಡೆಯುವ 10 ದಿನಕ್ಕೂ ಮೊದಲು ಅನಿಲ್​ ಅಂಬಾನಿ ಈ ಸಂಸ್ಥೆ ಆರಂಭಿಸಿದ್ದರು. ಡಸ್ಸಾಲ್ಟ್​​​ ಸಂಸ್ಥೆ ಜೊತೆ ಮಾಡಿಕೊಂಡ ಒಪ್ಪಂದ ರದ್ದು ಮಾಡಿದ ಅದನ್ನು ನಿಮ್ಮ ಆಪ್ತ ಮಿತ್ರನಿಗೆ ನೀಡಿದ್ದೇಕೆ”  ಎಂಬುವುದಾಗಿ ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ. ಧೈರ್ಯವಿದ್ದರೆ ಮೋದಿ ಸಂಸತ್ತಿಗೆ ಆಗಮಿಸಲಿ ಎಂದು ಪ್ರಧಾನಿಗೆ ರಾಹುಲ್​ ಸವಾಲು ಹಾಕಿದರು. “ಮೋದಿ ಸುದ್ದಿ ವಾಹಿನಿಗಳಲ್ಲಿ ಗಂಟೆಗಟ್ಟಲೆ ಸಂದರ್ಶನ ನೀಡುತ್ತಾರೆ. ಆದರೆ, ಸಂಸತ್ತಿಗೆ ಬರುವುದಿಲ್ಲ. ಬೆಡ್​ರೂಂನಲ್ಲಿ ಅಡಗಿಕೂರುವ ಬದಲು ಧೈರ್ಯವಿದ್ದರೆ ಮೋದಿ ಅಧಿವೇಶನಕ್ಕೆ ಬಂದು ಮಾತನಾಡಲಿ” ಎಂದರು. ಇನ್ನು, ರಫೇಲ್​ ಒಪ್ಪಂದದ ಬಗ್ಗೆ ಕಾಂಗ್ರೆಸ್​ ಬಿಡುಗಡೆ ಮಾಡಿದ ಆಡಿಯೋ ಕ್ಲಿಪ್​ ವಿಚಾರವೂ ಸದನದಲ್ಲಿ ಪ್ರಸ್ತಾಪವಾಯಿತು.

To Top
error: Content is protected !!
WhatsApp chat Join our WhatsApp group