ರಾಷ್ಟ್ರೀಯ ಸುದ್ದಿ

ಅಯೋಧ್ಯೆಯಲ್ಲಿರುವ ದೇವಸ್ಥಾನದ ಮುಖ್ಯ ಅರ್ಚಕರಿಂದ ಮಹಿಳೆಯ ನಿರಂತರ ಅತ್ಯಾಚಾರ

ವರದಿಗಾರ (ಜ.02): ಉತ್ತರ ಪ್ರದೇಶದ ಅಯೋಧ್ಯೆಯ ದೇವಸ್ಥಾನವೊಂದರ ಮುಖ್ಯ ಅರ್ಚಕರೊಬ್ಬರು ಮಹಿಳೆಯೊಬ್ಬರನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ದೇವಾಲಯದ ಮುಖ್ಯ ಅರ್ಚಕರನ್ನು ಕೃಷ್ಣಕಾಂತಾಚಾರ್ಯ ಎಂದು ಗುರುತಿಸಲಾಗಿದ್ದು, ಇವರು ಧಾರ್ಮಿಕ ಪ್ರವಚನದ ಹೆಸರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ವರದಿಯಾಗಿದೆ.

ಡಿ.24ರಂದು ಧಾರ್ಮಿಕ ಪ್ರವಚನ ಕೇಳಲು ಬಂದಿದ್ದ ವಾರಣಾಸಿಯ 30 ವರ್ಷದ ಮಹಿಳೆಯನ್ನು ದೇವಾಲಯದ ಆವರಣದಲ್ಲೇ ಉಳಿಯುವಂತೆ ಸೂಚಿಸಿದ ಅರ್ಚಕರು ಆಕೆಯನ್ನು ಅಕ್ರಮ ಬಂಧನದಲ್ಲಿರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಈ ಸಂದರ್ಭ ಅರ್ಚಕರಿಂದ ತಪ್ಪಿಸಿಕೊಂಡು ಪೊಲೀಸರಿಗೆ ಕರೆ ಮಾಡುವುದರಲ್ಲಿ ಮಹಿಳೆ ಯಶಸ್ವಿಯಾಗಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿ ಅರ್ಚಕರನ್ನು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಕೃಷ್ಣಕಾಂತಾಚಾರ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

To Top
error: Content is protected !!
WhatsApp chat Join our WhatsApp group