ರಾಜ್ಯ ಸುದ್ದಿ

ಪ್ರಶ್ನಿಸುವುದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪ್ರಕಾಶ್ ರೈ

ಅಬ್‌ ಕಿಬಾರ್ಜನತಾಕಿಸರಕಾರ್ ಎಂದು ಘೋಷಿಸಿದ ಪ್ರಕಾಶ್ ರೈ

ವರದಿಗಾರ (ಜ.01): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಸ್ಪರ್ಧಿಸುತ್ತೇನೆ ಎಂದು ಪ್ರಕಾಶ್ ರೈ ತನ್ನ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಜನವಿರೋಧಿ ಆಡಳಿತದ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದ ಮತ್ತು ಜನಪರ ಯೋಜನೆಗಳ ಬಗ್ಗೆ ‘ಜಸ್ಟ್ ಆಸ್ಕಿಂಗ್’ ಮೂಲಕ ಸರಕಾರವನ್ನು ಮತ್ತು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಲೇ ಇದ್ದ ಪ್ರಕಾಶ್ ರೈ ರಾಜಕಾರಣಿಯಾಗಿ ಪ್ರಶ್ನಿಸುವುದಕ್ಕಾಗಿ 2019ರ  ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.

ಅದಲ್ಲದೆ ಈ ಸಲ ಜನರ ಸರಕಾರವೆಂದು ಅವರು ಘೋಷಿಸಿದ್ದಾರೆ. ಹ್ಯಾಶ್ ಟ್ಯಾಗ್ ಮೂಲಕ ಜನತೆ ಧ್ವನಿಯೆಂದೂ, ಲೋಕಸಭೆಯಲ್ಲೂ ಪ್ರಶ್ನಿಸಲಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಕಾಶ್ ರೈ ಯವರ ಸಂದೇಶ, ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಒಂದು ಹೊಸ ಆರಂಭ. ಹೆಚ್ಚಿನ ಜವಾಬ್ದಾರಿ. ನಿಮ್ಮ ಬೆಂಬಲದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಸ್ಪರ್ಧಿಸಲಿರುವ ಕ್ಷೇತ್ರದ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಿದ್ದೇನೆ. ಆಬ್‌ ಕಿ ಬಾರ್ ಜನತಾ ಕಿ ಸರ್ಕಾರ್. #ಜನರಧ್ವನಿ, ಪರ್ಲಿಮೆಂಟ್ ನಲ್ಲೂ #ಪ್ರಶ್ನಿಸುತ್ತೇನೆ.’ ಎಂದಿದ್ದಾರೆ. https://twitter.com/prakashraaj/status/1079806981299261440

To Top
error: Content is protected !!
WhatsApp chat Join our WhatsApp group