ಅನಿವಾಸಿ ಕನ್ನಡಿಗರ ವಿಶೇಷ

ಜನವರಿ 1 ರಿಂದ ‘ಫ್ರಾಟರ್ನಿಟಿ ಫೆಸ್ಟ್’

ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿಮಿತ್ತ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಉಲ್ಲಾಸ ನೀಡಲು “ ಸೆಲಬ್ರೆಟ್ ಫ್ರೆಂಡ್ಶಿಪ್” ಎಂಬ ಹೆಸರಿನಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ಮೂರು ತಿಂಗಳುಗಳ ಕಾಲ ಅನಿವಾಸಿ ಭಾರತೀಯರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಸೌದಿ ಅರೇಬಿಯಾದ್ಯಂತ ಹಮ್ಮಿಕೊಂಡಿದೆ.೨೦೧೯ ರ ಜನವರಿ ಒಂದಕ್ಕೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಜನವರಿ ಒಂದರಿಂದ ಮಾರ್ಚ್ ೩೧ ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಫ್ರೆಟರ್ನಿಟಿ ಫೆಸ್ಟ್ ನ ಭಾಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಜಿದ್ದಾ ಕರ್ನಾಟಕ ಚಾಪ್ಟರ್, ಹಲವು ಕಡೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಕ್ರೀಡೆಗಳನ್ನು ಆಯೋಜಿಸಿದೆ. ಫುಟ್ಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಶಟಲ್ ಬ್ಯಾಡ್ಮಿಟನ್, ಅಥ್ಲೆಟಿಕ್ ಮೀಟ್ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳಾದ ಗಝಲ್,ಕವನ ವಾಚನ ಮುಂತಾದ ಕಾರ್ಯಕ್ರಮಗಳು ಜಿದ್ದಾ, ಯಾಂಬು, ತಬೂಕ್ ಹಾಗು ಮಕ್ಕಾದಲ್ಲಿ ನಡೆಯಲಿದೆ. ಕುಟುಂಬ ಸಮ್ಮಿಲನ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಫ್ರೆಟರ್ನಿಟಿ ಫೆಸ್ಟ್ ನ ಲೋಗೋ ಹಾಗು ಜೆರ್ಸಿ ಬಿಡುಗಡೆ ಕಾರ್ಯಕ್ರಮ ಈಗಾಗಲೇ
ನಡೆದಿದೆ. ಜೆರ್ಸಿ ಹಾಗು ಲೋಗೋ ಬಿಡುಗಡೆಯನ್ನು ಅಲುಂಗಲ್ ಮುಹಮ್ಮದ್ ಅಲ್ ಅಬೀರ್ ಮೆಡಿಕಲ್ ಗ್ರೂಪ್,ಸೌದಿ ಇಂಡಿಯನ್ ಬ್ಯುಸಿನೆಸ್ ನೆಟ್ವರ್ಕ್ ಜೆನರಲ್ ಮ್ಯಾನೇಜರ್ ಮಿರ್ ಗಜಂಫರ್ ಅಲ್ ಝಕೀ ಜಂಟಿಯಾಗಿ ಬಿಡುಗಡೆ ಗೊಳಿಸಿದರು.ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಜನಲ್ ಅಧ್ಯಕ್ಷ ಫಯಾಝುದ್ದೀನ್,ಕಾರ್ಯದರ್ಶಿ ಇಕ್ಬಾಲ್,ಹಾಗು ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಹಾರಿಸ್ ಗೂಡಿನಬಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

To Top
error: Content is protected !!
WhatsApp chat Join our WhatsApp group