ನಿಮ್ಮ ಬರಹ

ಮಲಗಿದವರನ್ನು ಎಬ್ಬಿಸಬಹುದು ಆದರೆ, ಮಲಗಿದಂತೆ ನಟಿಸುವವರನ್ನು ಎಬ್ಬಿಸಲು ಅಸಾಧ್ಯ

ಹಾರಿಸ್ ಅಡ್ಕ (ಸ್ನೇಹಜೀವಿ)

ಸುವರ್ಣ ಚಾನೆಲ್ ನಲ್ಲಿ ನಡೆದ ಚರ್ಚೆಯೊಂದರಲ್ಲಿ ಚರ್ಚೆಯ ನಡುವೆ ಸದಾ ಏನಾದರೊಂದು ವಿಷಯದಲ್ಲಿ ಇಸ್ಲಾಂ ಧರ್ಮವನ್ನು ವಿಮರ್ಷಿಸುತ್ತಾ, ನಿಂದಿಸುತ್ತಾ ಬರುತ್ತಿರುವ ಅಜಿತ್ ಹನುಮಕ್ಕನ್ ಅನ್ನುವ ಕೋಮು ಮನೋಸ್ಥಿತಿಯನ್ನು ಹೊಂದಿದ ನಿರೂಪಕನೊಬ್ಬ ಪ್ರವಾದಿಯವರನ್ನು ನಿಂದಿಸಿದ ಪರಿಣಾಮವಾಗಿ ಪ್ರವಾದಿ ಅನುಯಾಯಿಗಳ ಪ್ರತಿಭಟನೆ, ಅಕ್ಷರ ಸಮರ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಕೇಸು ದಾಖಲಾದಾಗ “ಕ್ಷಮೆ” ಅನ್ನುವ ಪ್ರಹಸನದೊಂದಿಗೆ ಚಾನೆಲ್ ಮುಂದೆ ಪ್ರತ್ಯಕ್ಷಗೊಂಡಿದ್ದಾನೆ.

ಪ್ರಮಾದವಶಾತ್ ನಡೆದ ತಪ್ಪಾಗಿದ್ದರೆ ಒಂದು ವೇಳೆ ಕ್ಷಮಿಸಬಹುದಿತ್ತೇನೋ, ಆದರೆ ಅಜಿತನಿಗೆ ಇಸ್ಲಾಮಿನ ಕುರಿತಾಗಿಯೂ, ಪ್ರವಾದಿಯವರ ಕುರಿತಾಗಿಯೂ ಕೆಲವೊಂದು ವಿಷಯಗಳು ಚೆನ್ನಾಗಿ ಗೊತ್ತಿದೆ, ಅದನ್ನಾತ ಕಲಿತುಕೊಂಡೂ ಇದ್ದಾನೆ. ಪ್ರೊ ಭಗವಾನ್ ಹಿಂದೂ ದೇವರ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದಾಗ ಭಗವಾನ್ ರ ಹೇಳಿಕೆಯನ್ನು ಖಂಡಿಸುವುದಕ್ಕಿಂತಲೂ ಅಧಿಕವಾಗಿ ಅಜಿತ್ ನಿಗೆ ಇಲ್ಲಿನ ಕೋಮಸಾಮರಸ್ಯವನ್ನು ಇಲ್ಲವಾಗಿಸಬೇಕಿತ್ತು. ಅದಕ್ಕೋಸ್ಕರನೇ ಆತ ಕೊಡಗಿನಲ್ಲಿ ಪ್ರವಾದಿಯವರನ್ನು ನಿಂದಿಸಿ ಹೇಳಿಕೆ ನೀಡಿದ ತಮ್ಮಯ್ಯನನ್ನು ಸಮರ್ಥಿಸತೊಡಗಿದ್ದು. ತಮ್ಮಯ್ಯನನ್ನು ಸಮರ್ಥಿಸುವ ಅಜಿತ್ ನಿಗೆ ಭಗವಾನ್ ರ ಹೇಳಿಕೆಯನ್ನು ಖಂಡಿಸುವ ಅರ್ಹತೆಯೂ ಖಂಡಿತವಾಗಿಯೂ ಇಲ್ಲ. ಜಗತ್ತಿನಲ್ಲಿ ಒಂದೇ ಒಂದು ಭಾವಚಿತ್ರ ಇಲ್ಲದೆಯೂ ಜಗತ್ತಿನಾದ್ಯಂತ ಕೋಟ್ಯಾನುಕೋಟಿ ಅನುಯಾಯಿಗಳು ಆ ಪ್ರವಾದಿಗಿದ್ದರೆ, ಆ ಪ್ರವಾದಿಯ ನೈಜ ಅನುಯಾಯಿಗೆ ಯಾವತ್ತೂ ಇನ್ನೊಂದು ಧರ್ಮೀಯರ ಆರಾಧನಾ ಕ್ರಮಗಳು, ಆರಾಧನಾ ದೇವರನ್ನು ನಿಂದಿಸಲೋ ಸಾಧ್ಯವಿಲ್ಲ.

ಪ್ರೊ ಭಗವಾನ್ ರ ಹೇಳಿಕೆಗೆ ಯಾವ ಮುಸ್ಲಿಮನೂ ಸಹಮತ ವ್ಯಕ್ತಪಡಿಸಿಯೂ ಇರಲಿಲ್ಲ.ಆದರೆ ಆ ಚರ್ಚೆಯ ನಡುವೆ ಅಜಿತ್ ಪ್ರವಾದಿಯರನ್ನು ನಿಂದಿಸಿದ್ಧು ಉದ್ಧೇಶ ಪೂರ್ವಕವಾಗಿಯೇ ಆಗಿತ್ತು. ಸಮಾಜದ ಸೌಹಾರ್ದ ಬಯಸುವ ಜನತೆ ಸುವರ್ಣ ಚಾನೆಲ್ ವಿರುದ್ಧವಾಗಿ ಪ್ರತಿಭಟನೆಗಿಳಿದಾಗ ಚಾನೆಲನ್ನು ಉಳಿಸುವ ಪ್ರಯತ್ನದ ಫಲವಾಗಿರುತ್ತದೆ ಅಜಿತ್ ನ “ಕ್ಷಮೆ” ಎನ್ನುವ ಪ್ರಹಸನ. ಟಿವಿ ಚರ್ಚೆಯ ನಡುವೆ ಧಾರ್ಮಿಕ ಭಾವನೆಗಳನ್ನು‌ ಕೆರಳಿಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಅಜಿತ್ ನ ಮೊಸಳೆ ಕಣ್ಣೀರಿಗೆ ಮರುಗಿಕೊಂಡು ಮೌನವಾಗುವ ಕಾಲ ಇದಲ್ಲ. ಅಜಿತ್ ನಂತೆ ಸಮಾಜದ ಸೌಹಾರ್ದತೆಗೆ ಮಾರಕವಾಗಿ ಪರಿಣಮಿಸುವ ಕೋಮುಕ್ರಿಮಿಗಳ ರೋಗವನ್ನು ಗುಣಪಡಿಸುವ ಚಿಕಿತ್ಸೆ ನೀಡುವವರೆಗೂ ಕಾನೂನಾತ್ಮಕವಾಗಿ ಪ್ರತಿಭಟಿಸುತ್ತಾ, ಧರ್ಮ ನಿಂದಕರಿಗೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸೋಣ.

To Top
error: Content is protected !!
WhatsApp chat Join our WhatsApp group