ಸುತ್ತ-ಮುತ್ತ

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಡಗು : ನೂತನ ಜಿಲ್ಲಾಧ್ಯಕ್ಷರಾಗಿ ಅಬ್ದುಲ್ ಸಲಾಂ, ಕಾರ್ಯದರ್ಶಿಯಾಗಿ ಇಬ್ರಾಹಿಂ ಆಯ್ಕೆ

ವರದಿಗಾರ ಮಡಿಕೇರಿ  ಡಿ.25 : ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೊಡಗು ಜಿಲ್ಲಾ  ಸಮಿತಿಗೆ  ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇಂದು  ನಡೆಯಿತು.ಚುನಾವಣಾ ಪ್ರಕ್ರಿಯೆಯನ್ನು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಕಿರ್ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಸುಫಿಯಾನ್ ಮಡಿಕೇರಿ ನೆರವೇರಿಸಿ ಕೊಟ್ಟರು.

ಕ್ಯಾಂಪಸ್ ಫ್ರಂಟ್ ಕೊಡಗು ಜಿಲ್ಲಾ ನೂತನ  ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಕುಶಾಲನಗರ, ಕಾರ್ಯದರ್ಶಿಯಾಗಿ ಇಬ್ರಾಹಿಂ ಮಡಿಕೇರಿ, ಉಪಾಧ್ಯಕ್ಷರಾಗಿ ರಾಹಿಲ್ ಮಡಿಕೇರಿ, ಜೊತೆ ಕಾರ್ಯದರ್ಶಿಯಾಗಿ ಜುನೈದ್ ಮಡಿಕೇರಿ , ಕೋಶಾದಿಕಾರಿಯಾಗಿ ವಾಹಿದ್ ಮಡಿಕೇರಿ, ಸಮಿತಿ ಸದಸ್ಯರುಗಳಾಗಿ ಮನ್ಸೂರ್ ಕುಶಾಲನಗರ ,  ಅನ್ಸಾರ್ ಕುಶಾಲನಗರ, ಯೂನುಸ್ ಸೋಮವಾರಪೇಟೆ ಹಾಗೂ ಅರ್ಷಾದ್ ಸೋಮವಾರಪೇಟೆ ಆಯ್ಕೆಯಾದರು

To Top
error: Content is protected !!
WhatsApp chat Join our WhatsApp group