ಸುತ್ತ-ಮುತ್ತ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ, ಎಫ್.ಸಿ.ಸಿ.ಎ ಶೈನ್ ಗೈಸ್ ವತಿಯಿಂದ ಮಂಚಿ ಕುಕ್ಕಾಜೆಯಲ್ಲಿ ಬೃಹತ್ ರಕ್ತದಾನ ಶಿಬಿರ

ವರದಿಗಾರ (ಡಿ.24): ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಹಾಗು ಎಫ್.ಸಿ.ಸಿ.ಎ(ರಿ)ಶೈನ್ ಗೈಸ್ ಮಂಚಿ ಕುಕ್ಕಾಜೆ ಜಂಟಿ ಆಶ್ರಯದಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಇವರ ಸಹಬಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಭಾನುವಾರದಂದು ಭಾರತ್ ನಿರ್ಮಾಣ್ ರಾಜೀವಗಾಂಧಿ ಸೇವಾ ಕೇಂದ್ರ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಹುಸೈನ್ ಬಾಅಲವಿ ತಂಙಳ್ ಉದ್ಘಾಟಿಸಿ, ಮೋಹನ್ ದಾಸ್ (ಉಪಾಧ್ಯಕ್ಷರು.ಮಂಚಿ ಗ್ರಾಮ ಪಂಚಾಯತ್)ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆ.ಇಸ್ಮಾಯಿಲ್, ರಫೀಕ್, ನಿಸಾರ್ ಉಳ್ಳಾಲ, ಹಸೈನಾರ್ ಪಿ.ಕೆ, ಶಿವಕುಮಾರ್, ಮೊಹಿದಿನಬ್ಬ, ಝೈನುದ್ದಿನ್ ಕುಕ್ಕಾಜೆ, ಗಫ್ಫಾರ್ ಸಾಗರ್, ಇಬ್ರಾಹಿಂ ಎ.ಕೆ, ಆಶಿಕ್ ಕುಕ್ಕಾಜೆ, ಫೈಝಲ್ ಮಂಚಿ, ಅಬ್ದುಲ್ ರಹಿಮಾನ್ ತಲಪಾಡಿ, ಎಂ.ಡಿ ಮಂಚಿ, ಇಮ್ರಾನ್ ಮದಕ, ನಝೀರ್, ರವಿ, ರಾಜೇಶ್, ಫೈಝಲ್, ಡಾ!ಶುಭ  ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಆಶಿಕ್ ಕುಕ್ಕಾಜೆ, ಅಬ್ದುಲ್ ರಹಿಮಾನ್ ತಲಪಾಡಿ, ಫೈಝಲ್ ಮಂಚಿಯವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು 58 ಯುನಿಟ್ ರಕ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಗಿದೆ ಎಂದು ಪ್ರಕರಣೆ ತಿಳಿಸಿದೆ.

To Top
error: Content is protected !!
WhatsApp chat Join our WhatsApp group