ಸುತ್ತ-ಮುತ್ತ

ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಶನ್ (ರಿ) ವತಿಯಿಂದ ಬಜ್ಪೆಯಲ್ಲಿ ರಕ್ತದಾನ ಶಿಬಿರ

ವರದಿಗಾರ (ಡಿ 23) :   ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಷನ್ (ರಿ) ಪ್ರಾಯೋಜಕತ್ವದಲ್ಲಿ  ಎ.ಜೆ ಹಾಸ್ಪಿಟಲ್ ಮಂಗಳೂರು ಸಹಕಾರದೊಂದಿಗೆ  ದಿನಾಂಕ 23-12-2018 ರಂದು ಬೃಹತ್ ರಕ್ತದಾನ ಶಿಬರವು  ಬಜ್ಪೆ ಪಂಚಾಯತ್ ಸಭಾಂಗಣ ದಲ್ಲಿ ಯಶಸ್ವಿಯಾಗಿ ನಡೆಯಿತು.ರಕ್ತದಾನ ಶಿಬರವು ಬೆಳಗ್ಗೆ 9:30 ಗಂಟೆಗೆ ಪ್ರಾರಂಭಗೊಂಡು ಅಪರಾಹ್ನ 1 ಗಂಟೆಯವರೆಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಾಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯರಾದ ಏ.ಕೆ ಅಶ್ರಫ್ ಜೋಕಟ್ಟೆ ಅವರು ಮಾತನಾಡುತ್ತಾ,  ರಕ್ತವನ್ನು ಯಾರಿಂದಲೂ ಉತ್ಪಾದಿಸಲು ಆಗೋದಿಲ್ಲ ರಕ್ತದಾನ ಮಾಡುವ ಮೂಲಕವೇ ಒಂದು ಜೀವವನ್ನು ಉಳಿಸಲು ಸಾಧ್ಯ ಹಾಗೂ ರಕ್ತದಾನ ಮಾಡಿದ ಮೇಲೆ ಆಗುವಂತಹ ಲಾಭದಾಯಕ ಅಂಶಗಳನ್ನು ಅವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ರಕ್ತದಾನದ ಮಹತ್ವದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಸುರೇಂದ್ರ, ಸದಸ್ಯರು ಬಜ್ಪೆ ಗ್ರಾಮ ಪಂಚಾಯತ್, ನಜೀರ್, ಸದಸ್ಯರು ಬಜ್ಪೆ ಗ್ರಾಮ ಪಂಚಾಯತ್, ಆಯಿಷಾ , ಸದಸ್ಯೆ ಬಜ್ಪೆ ಗ್ರಾಮ ಪಂಚಾಯತ್, ತಾಜುದ್ದಿನ್, ಉಪಾಧ್ಯಕ್ಷರು ಆಲ್ ಕಾಲೇಜು ಸ್ಟೂಡೆಂಟ್ ಯೂನಿಯನ್ ದ.ಕ,  ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಷನ್ ನಿರ್ವಾಹಕರಾದ

ಝಹಿಮ್, ರಫೀಕ್, ರಿಜ್ವಾನ್, ಶಾಫಿ, ರಾಹಿಲ್ ಸಲ್ಮಾನ್ ಕಲಂದರ್ ಮತ್ತಿತರು ಉಪಸ್ಥಿತರಿದ್ದರು.ಶಿಬಿರದಲ್ಲಿ ಸುಮಾರು 86 ರಕ್ತದಾನಿಗಳು ರಕ್ತದಾನ ಮಾಡಿದರು. ಝಹಿಮ್  ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಕೊಂಚಾರ್ ಯೂತ್ ಕೌನ್ಸಿಲ್ ಅಸೋಸಿಯೇಶನ್ ಧನ್ಯವಾದ ಸಮರ್ಪಿಸಿದೆ

To Top
error: Content is protected !!
WhatsApp chat Join our WhatsApp group