ಅನಿವಾಸಿ ಕನ್ನಡಿಗರ ವಿಶೇಷ

ಪ್ರಸ್ತುತ ಓದುಗರ ವೇದಿಕೆ ಪೂರ್ವ ಪ್ರಾಂತ್ಯ ಸೌದಿ ಅರೇಬಿಯಾದಿಂದ ಪ್ರಸ್ತುತ ಕ್ಯಾಲೆಂಡರ್-2019 ಬಿಡುಗಡೆ ಕಾರ್ಯಕ್ರಮ

ದಮ್ಮಾಮ್ : ಪ್ರಸ್ತುತ ಓದುಗರ ವೇದಿಕೆ ಪೂರ್ವ ಪ್ರಾಂತ್ಯ ಇದರ ವತಿಯಿಂದ ಪ್ರಸ್ತುತ ಕ್ಯಾಲೆಂಡರ್ 2019 ಬಿಡುಗಡೆ ಕಾರ್ಯಕ್ರಮವು ವಿಭಿನ್ನವಾಗಿ ಸಾಸ್ರೆಫ್ ಬೀಚ್‌ ಕ್ಯಾಂಪ್ ಜುಬೈಲ್ ನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಓದುಗರ ವೇದಿಕೆಯ ಸದಸ್ಯರಾದ ಅನ್ವರ್ ಮಠ ಅತಿಥಿಗಳನ್ನು ಸ್ವಾಗತಿಸುವ ಮೂಲಕ ಉದ್ಘಾಟಿಸಿದರು. ಇಂಡಿಯನ್ ಸೋಶಿಯಲ್ ಫೋರಂ(ISF)ನ ಆಶೀಕ್ ಮಾಚಾರ್ ಮಾದ್ಯಮ ಮತ್ತು ಮನಸ್ಸು ಎಂಬ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಪ್ರಸ್ತುತ ಓದುಗರಾದ ನೌಫಲ್ ಬಂದರ್ ಮತ್ತು‌ ಝುಲ್ಕರ್ ತಮ್ಮ ಅನುಭವವನ್ನು ಹಂಚಿಕೊಂಡರೆ ಸಿರಾಜ್ ಬೊಲ್ಲೂರ್ ಮತ್ತು ಅನ್ವರ್ ಮಠ ವಾಚಿಸಿದ ಕವನಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

 ಇಂಡಿಯಾ ಫ್ರೆಟಾರ್ನಿಟಿ ಫೋರಂ ಕರ್ನಾಟಕ ಪೂರ್ವ ಪ್ರಾಂತ್ಯದ ಅಧ್ಯಕ್ಷ ಅತವುಲ್ಲಾ ಉಚ್ಚಿಲ, ಪ್ರಸ್ತುತ ಓದುಗರ ವೇದಿಕೆ ಅಧ್ಯಕ್ಷ ಇರ್ಷಾದ್ ಜೋಕಟ್ಟೆ ಹಾಗು ಮ್ಯಾಟಿಕ್ ಕಂಪನಿಯ ‌ಹಬೀಬ್ ಪ್ರಸ್ತುತ ಕ್ಯಾಲೆಂಡರ್ 2019 ಬಿಡುಗಡೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.‌

ಕೊನೆಯಲ್ಲಿ ಪ್ರಸ್ತುತ ಓದುಗರ ವೇದಿಕೆ ಅಧ್ಯಕ್ಷರಾದ ಇರ್ಷಾದ್ ಜೋಕಟ್ಟೆ ಪ್ರಸ್ತುತ ಪಾಕ್ಷಿಕದ ಬಗ್ಗೆ ವಿವರಣೆ ನೀಡಿದರೆ, ಕಾರ್ಯಕ್ರಮವನ್ನು ಫಾಝಿಲ್ ಜುಬೈಲ್ ನಿರೂಪಿಸಿ ನಂತರ ವಂದಿಸಿದರು.

To Top
error: Content is protected !!
WhatsApp chat Join our WhatsApp group