ಅನಿವಾಸಿ ಕನ್ನಡಿಗರ ವಿಶೇಷ

ನರಸಿಂಹ ರಾವ್ ಸರಕಾರದ ನಿರ್ಲಕ್ಷ್ಯಕ್ಕೆ ಬಾಬರಿ ಮಸ್ಜಿದ್ ಬಲಿ : ಮುಹಮ್ಮದ್ ಕೋಯಾ

ವರದಿಗಾರ : 1992 ರಲ್ಲಿ ಬಾಬರಿ ಮಸ್ಜಿದನ್ನು ಸಂಘ ಪರಿವಾರದ ಕರಸೇವಕರು ಧ್ವಂಸ ಮಾಡಲು ಅಂದಿನ ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಎಸ್ಡಿಪಿಐ ಕೇರಳ ಸದಸ್ಯ ಮುಹಮ್ಮದ್ ಕೋಯಾ ,ಇಂಡಿಯನ್ ಸೋಶಿಯಲ್ ಫೋರಮ್ ಯಾಂಬು( ಪಶ್ಚಿಮ ಪ್ರಾಂತ್ಯ) ಘಟಕ ಆಯೋಜಿಸಿದ “ ಮರಳಿ ಗಳಿಸೋಣ ಬಾಬರಿ ಮಸ್ಜಿದ್ ಮರಳಿ ಪಡೆಯೋಣ ಭಾರತ” ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡುತ್ತಾ ಹೇಳಿದರು.ಕೇಂದ್ರ ಸರಕಾರದ ಸುಪರ್ಧಿಯಲ್ಲಿ ಎಲ್ಲಾ ಫೋರ್ಸ್ ಗಳಿದ್ದರೂ ಆಯೋಧ್ಯಲ್ಲಿ ಬಾಬರಿ ಮಸ್ಜಿದನ್ನು ಉಳಿಸಲು ,ಹಾಗು ದೇಶವ್ಯಾಪಿ ಸಂಘಪರಿವಾರದ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಅಂದಿನ ಕೇಂದ್ರ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.ಅದಲ್ಲದೆ ಅಂದಿನ ಪ್ರಧಾನಿ ನರಸಿಂಹ ರಾವ್ ರವರು ಅದೇ ಜಾಗದಲ್ಲಿ ಬಾಬರಿ ಮಸ್ಜಿದನ್ನು ಪುನರ್ ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದರೂ ಇಂದಿನ ವರೆಗೆ ಅದನ್ನು ನೆರವೇರಿಸಲಿಲ್ಲ ಹಾಗು ಬಾಬರಿ ಮಸೀದಿ ವಿಷಯದಲ್ಲಿ ಕಾಂಗ್ರೆಸ್ ದಿವ್ಯ ಮೌನ ತಾಳಿದೆ ಎಂದು ಕೋಯಾ ಆರೋಪಿಸಿದರು.

    ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ಪ್ರಾಂತ್ಯ ಅಧ್ಯಕ್ಷ ಮುಹಮ್ಮದ್ ಅಲಿ ಮೂಳೂರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಮ್ಮದ್ ಮುಸ್ತಫಾ ಬಜ್ಪೆ (ಅಧ್ಯಕ್ಷರು ಐ ಎಸ್ ಎಫ್ ಯಾಂಬು) ವಹಿಸಿದ್ದರು.ಜನಾಬ್ ಶೌಕತ್ ಅಲಿ (ಸದಸ್ಯರು ಐ ಎಸ್ ಎಫ್ ) ಪ್ರಾಸ್ತಾವಿಕವಾಗಿ ಮಾತನಾಡಿದರು,ಮುಖ್ಯ ಅತಿಥಿಗಳಾಗಿ ಜವೆದುರಹ್ಮಾನ್ ಅಧ್ಯಕ್ಷರು KMWA,ಇಹ್ತಿಷಾಮ್ ಉಲ್  ಹಕ್ ಉಪಾಧ್ಯಕ್ಷರು AMUOBA,ಹಾಗು ಆರಿಫ್ ಬಜ್ಪೆ ಸದಸ್ಯರು ಐ ಎಸ್ ಎಫ್ ರಾಜ್ಯಸಮಿತಿ ವೇಧಿಕೆಯಲ್ಲಿ ಉಪಸ್ಥಿತರಿದ್ದರು. ಜನಾಬ್ ಇರ್ಷಾದ್ ವಂಧಿಸಿದರು ಮತ್ತು ಶಾದಾಬ್ ಕಾರ್ಯಕ್ರಮ ನಿರೂಪಿಸಿದರು.

To Top
error: Content is protected !!
WhatsApp chat Join our WhatsApp group