ರಾಷ್ಟ್ರೀಯ ಸುದ್ದಿ

ಅರ್ಥ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದ ಪ್ರಧಾನಿ ಮೋದಿ: ಯಶವಂತ್ ಸಿನ್ಹಾ

‘ಮೋದಿ ವಾಸ್ತವ ಸ್ಥಿತಿಯನ್ನು ಮರೆಮಾಚಿ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ’

ವರದಿಗಾರ (ಡಿ.22)ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥ ವವ್ಯಸ್ಥೆಯ ಬೆನ್ನೆಲುಬನ್ನೇ ಮುರಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ, ಮಾಜಿ ಕೆಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ.

‘ಇಂಡಿಯಾ ಅನ್‌ಮೇಡ್‌: ಹೌ ದಿ ಮೋದಿ ಗೌರ‍್ನಮೆಂಟ್‌ ಬ್ರೋಕ್‌ ದಿ ಎಕಾನಮಿ’ ಪುಸ್ತಕದಲ್ಲಿ ಮೋದಿ ಅವರ ತಪ್ಪು ಆರ್ಥಿಕ ನೀತಿಗಳನ್ನು ಬಗ್ಗೆ ಅವರು ಹೇಳಿಕೊಂಡಿದ್ದಾರೆ.

‘ಪ್ರಧಾನಿಯು ದೇಶದ ಆರ್ಥಿಕ ಪರಿಸ್ಥಿತಿ ಮತ್ತು ನಿರ್ವಹಣೆಯ ಬಗ್ಗೆ ಬರೀ ಸುಳ್ಳು ಹೇಳುತ್ತಿದ್ದಾರೆ. ವಾಸ್ತವ ಸ್ಥಿತಿಯನ್ನು ಮರೆಮಾಚಿ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ದೇಶದ ಜನರಿಗೆ ಸತ್ಯವನ್ನು ಹೇಳುವ ಕೆಲಸವನ್ನು ಈ ಪುಸ್ತಕದ ಮೂಲಕ ಮಾಡುತ್ತಿದ್ದೇನೆ’ ಎಂದು ಸಿನ್ಹಾ ಹೇಳಿದ್ದಾರೆ. ‘ಜಿಡಿಪಿ ಅಂಕಿ, ಅಂಶಗಳು ದಾರಿ ತಪ್ಪಿಸುವಂತಿವೆ. ಆರ್‌ಬಿಐ ಸ್ವಾಯತ್ತತೆ ಅಪಾಯದಲ್ಲಿದೆ. ನೋಟು ರದ್ದು ಅತಿ ದೊಡ್ಡ ಬ್ಯಾಂಕಿಂಗ್‌ ಹಗರಣ ಇದರಿಂದ ದೇಶದ ಅರ್ಥ ವ್ಯವಸ್ಥೆ ಅವನತಿಯಾಗಿದೆ. ದೇಶಕ್ಕೆ ಇದರ ಕೊಡುಗೆ ಶೂನ್ಯ’ ಎಂದು ಮೋದಿ ನೇತೃತ್ವದ ಬಿಜೆಪಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶವನ್ನು ಕಾಡುತ್ತಿರುವ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿ ‘ಸ್ವಯಂ ಉದ್ಯೋಗ’ ಎಂಬ ಮಂತ್ರ ಜಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ಯುಪಿಎ ಅವಧಿಯಲ್ಲಿ ಹಳಿ ತಪ್ಪಿದ್ದ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುವರ್ಣ ಅವಕಾಶ ದೊರೆತಿತ್ತು. ಆದರೆ, ಈ ಅವಕಾಶವನ್ನು ತಾವಾಗಿಯೇ ಹಾಳು ಮಾಡಿಕೊಂಡರು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೊದಲಿನಿಂದಲೂ ಮೋದಿ ಅವರ ಜನವಿರೋಧಿ ನೀತಿಗಳನ್ನು ಟೀಕರಿಸುತ್ತಿದ್ದ ಯಶವಂತ್‌ ಸಿನ್ಹಾ ಬಿಜೆಪಿಯ ಆಡಳಿತ ವೈಖರಿಯಿಂದ ಬೇಸತ್ತು ಏಪ್ರಿಲ್‌ನಲ್ಲಿ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group