ರಾಷ್ಟ್ರೀಯ ಸುದ್ದಿ

ಮೋದಿಯನ್ನು ಸ್ವತಃ ಬಿಜೆಪಿಯೇ ಸೋಲಿಸುತ್ತದೆ, ಅವರನ್ನು ಸೋಲಿಸಲು ನಾವೇನು ಮಾಡಬೇಕಾಗಿಲ್ಲ: ಪುದುಚೇರಿ ಸಿಎಂ ನಾರಾಯಣಸ್ವಾಮಿ

‘ಪ್ರಧಾನಿ ಮೋದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಮಯವಿಲ್ಲ’

ವರದಿಗಾರ (ಡಿ.21): ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಕಾಂಗ್ರೆಸ್ ವಿಶೇಷ ಪ್ರಯತ್ನಗಳನ್ನೇನನ್ನು ಮಾಡಬೇಕಾಗಿಲ್ಲ. 2019 ಲೋಕಸಭಾ ಚುನಾವಣೆ ನಂತರ ಅವರೇ ಹೋಗುತ್ತಾರೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಹೇಳಿದ್ದಾರೆ.

ಅವರು ಇಂದು ವಿಶಾಖಪಟ್ಟಣನದಲ್ಲಿರುವ ಇಂಡಿಯಾ ಟುಡೆ ಕಾನ್ಕ್ಲೇವ್ ಸೌತ್ ನ ಮೂರನೇ ಆವೃತ್ತಿಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾರಾಯಣಸ್ವಾಮಿ ಮಾತನಾಡುತ್ತಾ, “ನಾವು [ಕಾಂಗ್ರೆಸ್] ಮೋದಿಯನ್ನು ಸೋಲಿಸುವ ಅಗತ್ಯವಿಲ್ಲ.ಅವರು ದೇಶಕ್ಕೆ ಮಾಡಿದ್ದೇನು ಎಂಬುವುದನ್ನು ತಿಳಿದಿರುವ ಅವರ ಜನರು ಮತ್ತು ಅವರ ಪಕ್ಷದವರೇ ಅವರನ್ನು ಸೋಲಿಸುತ್ತಾರೆ.  ಯಾರೊಬ್ಬರೂ ಅವರೊಂದಿಗೆ ಸಂತುಷ್ಟರಾಗಿಲ್ಲ, ಅವರ ಪಕ್ಷದವರೂ ಕೂಡ. ” ಎಂದು ಹೇಳಿದ್ದಾರೆ.

ವಿವಿಧ ಬಿಜೆಪಿ ನಾಯಕರು ಪಕ್ಷದೊಳಗಿನ ಅವರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. “ಕೇವಲ ಎರಡೇ ಜನರು ತಮ್ಮ ಅಧಿಕಾರವನ್ನು ನಡೆಸುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.

ಪ್ರಧಾನಮಂತ್ರಿಯೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ ಅವರು, “ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟಪಟ್ಟಿದ್ದಾರೆ ಮತ್ತು ಅದಕ್ಕಾಗಿ ಅವರು ಕಿರಣ್ ಬೇಡಿಯನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕಳುಹಿಸಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು “ಸಮಯವಿಲ್ಲ”. ನನಗೆ ಅವರನ್ನು ಭೇಟಿಯಾಗಲು ಅವಕಾಶನೂ ಸಿಗುತ್ತಿಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು 12 ಸಲದ ಕೋರಿಕೆಯಲ್ಲಿ ಕೇವಲ 2 ಸಲ ಮಾತ್ರವೇ ಭೇಟಿಯಾಗಲು ಸಾಧ್ಯವಾಗಿದೆ. ನಾನು ಅದೃಷ್ಟವಂತ ಯಾಕೆಂದರೆ ನನಗೆ 6 ಸಲ ಕೋರಿಕೆಯಲ್ಲಿ 2 ಬಾರಿ ಭೇಟಿಯಾಗಲು ಅವಕಾಶ ಸಿಕ್ಕಿದೆ.  ಆದರೆ ಇಂದು ನನ್ನ ಪರಿಸ್ಥಿತಿ ಕೆಟ್ಟು ಹೋಗಿದೆ ಯಾಕೆಂದರೆ ಪ್ರಧಾನಿ ನನ್ನನ್ನು ಭೇಟಿಯಾಗುತ್ತಲೇ ಇಲ್ಲ” ಎಂದು ಅವರು ಹೇಳಿದ್ದಾರೆ.

ಮೋದಿ ಸರಕಾರವು ಎನ್ ಡಿಎ ಆಡಳಿತದ ರಾಜ್ಯಗಳಲ್ಲಿ ಪ್ರತಿಪಕ್ಷ ಆಡಳಿತ ನಡೆಸುವಲ್ಲಿ ತಾರತಮ್ಯವನ್ನು ತೋರುತ್ತಿದೆ ಎಂದು ಆರೋಪಿಸಿದರು. ” ಇದು ಸರ್ವಾಧಿಕಾರಿ ಸರ್ಕಾರ. ಅವರು ತಮ್ಮ ಕುಂದುಕೊರತೆಗಳನ್ನು ಕೇಳಲು ಸಿಎಂಗಳನ್ನು ಭೇಟಿಯಾಗಬೇಕು. “

“ನಾನು ಪ್ರಧಾನಮಂತ್ರಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾದಾಗ ಅವರು ನನ್ನನ್ನು ಅರವಿಂದ್ ಕೇಜ್ರಿವಾಲರಂತೆ ನೋಡುತ್ತಾರೆ. ಒಂದು ವೇಳೆ ಕೇಜ್ರಿವಾಲ್ ಮತ್ತು ಪ್ರಧಾನ ಮಂತ್ರಿಯವರು ಸ್ಪರ್ಧಿಸಲು ಬಯಸಿದರೆ ಅವರನ್ನು ಬಿಟ್ಟು ಬಿಡೋಣ. ಯಾಕೆ ನನ್ನನ್ನು ಅವರು ಗುರಿಯಾಗಿರಿಸಿಕೊಳ್ಳುತ್ತಿದ್ದಾರೆ? ನಾನು ಎಲ್ಲ ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರುತ್ತೇನೆ. ನನ್ನ ರಾಜ್ಯವನ್ನು ಒಂದು ಕಲ್ಯಾಣ ರಾಜ್ಯ ಮಾಡಬೇಕೆಂದು ನಾನು ಬಯಸುತ್ತೇನೆ “ಎಂದು ಅವರು ಹೇಳಿದ್ದಾರೆ.

To Top
error: Content is protected !!
WhatsApp chat Join our WhatsApp group