ರಾಷ್ಟ್ರೀಯ ಸುದ್ದಿ

ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ ಹಿಂಸಾಚಾರದ ಅಪರಾಧಿಗಳಿಗೂ ಶಿಕ್ಷೆಯಾಗಲಿ: ಅರವಿಂದ್ ಕೇಜ್ರಿವಾಲ್

ಸಿಖ್ ವಿರೋಧಿ ಗಲಭೆ ಆರೋಪಿಗೆ ಶಿಕ್ಷೆಯನ್ನು ಸ್ವಾಗತಿಸಿದ ಕೇಜ್ರಿವಾಲ್

ವರದಿಗಾರ(ಡಿ. 19): 1984 ರ ಸಿಖ್ ವಿರೋಧಿದಂಗೆಯಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ಅವರಿಗೆ ದೆಹಲಿ ಹೈಕೋರ್ಟ್ ವಿಧಿಸಿರುವಶಿಕ್ಷೆಯನ್ನು ಸ್ವಾಗತಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ಕೇಜ್ರಿವಾಲ್, ‘2002 ರ ಗುಜರಾತ್ ಹತ್ಯಾಕಾಂಡದಅಪರಾಧಿಗಳಿಗೆ ಮತ್ತು2013 ರ ಮುಝಫ್ಫರ್ ನಗರ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಅಪರಾಧಿಗಳಿಗೂ ಶಿಕ್ಷೆಯಾಗಲಿ ಎಂದುಒತ್ತಾಯಿಸಿದ್ದಾರೆ.

“ನಾನು ಸಜ್ಜನ್ ಕುಮಾರ್ ಮೇಲೆ ಹೈಕೋರ್ಟ್ನ ತೀರ್ಪನ್ನು ಸ್ವಾಗತಿಸುತ್ತಿದ್ದೇನೆ, ಆದರೆ ತೀರ್ಪು ನೀಡಲು ಸುದೀರ್ಘ  34 ವರ್ಷಗಳನ್ನುತೆಗೆದುಕೊಂಡಿದ್ದರೂ … ಎಂದಿಗೂ ಹೆಚ್ಚು ತಡವಾಗಿಲ್ಲ”ಎಂದು ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದಾರೆ.

“2002ರ ಗುಜರಾತ್ಹತ್ಯಾಕಾಂಡ, 2013 ಮುಝಫ್ಫರ್ ನಗರ ಹಿಂಸಾಚಾರ ಮತ್ತು ದೇಶದಲ್ಲಿ ನಡೆದ ಇತರಎಲ್ಲ ಸಾಮೂಹಿಕ ಹಿಂಸಾಚಾರಗಳಿಗೆ ನ್ಯಾಯವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.ಇಂತಹ ಎಲ್ಲಾ ಹಿಂಸಾಚಾರಗಳನ್ನು ರಾಜಕೀಯಲಾಭಕ್ಕಾಗಿ ನಡೆಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಜನರು ಶಾಂತಿಯಿಂದ ಬದುಕಲು ಬಯಸುತ್ತಾರೆ. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಕಚ್ಚಾಟ ನಡೆಸಲು ಬಯಸುವುದಿಲ್ಲವೆಂದು ಕೇಜ್ರಿವಾಲ್ ಹೇಳಿದರು.

“ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಮುಖಂಡರ ಆಜ್ಞೆಯ ಮೇರೆಗೆ ಗಲಭೆಗಳು ನಡೆಯುತ್ತವೆ. ಶಿಕ್ಷೆಯನ್ನು ನೀಡಿದರೆ ಭವಿಷ್ಯದಲ್ಲಿ ಹಿಂಸಾಚಾರಗಳಿಗೆ ಪ್ರಚೋದಿಸಲು ಧೈರ್ಯವಿರುವುದಿಲ್ಲ” ಎಂದು ಅವರು ಹೇಳಿದರು.

ಸೋಮವಾರ ದೆಹಲಿ ಹೈಕೋರ್ಟ್ 1984 ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

To Top
error: Content is protected !!
WhatsApp chat Join our WhatsApp group