ಸುತ್ತ-ಮುತ್ತ

ಧಾರವಾಡ ತಲುಪಿದ “ಕರ್ನಾಟಕ ಕರಿಯರ್ ಯಾತ್ರ”

ವರದಿಗಾರ (ಡಿ.17): ‘ನೆಮ್ಮದಿಯ ನಾಳೆಗಾಗಿ’ ಎಂಬ ಘೋಷಣೆಯೊಂದಿಗೆ ಮಂಗಳೂರಿನ ದಿ ಕ್ಯಾಂಪಸ್ ಕರಿಯರ್ ಅಕಾಡೆಮಿಯು, ಮಂಗಳೂರಿನ ಕರಾವಳಿ ಕಾಲೇಜುಗಳ ಸಮೂಹದ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿರುವ ‘ಕರ್ನಾಟಕ ಕರಿಯರ್ ಯಾತ್ರ’ ಇಂದು ಧಾರವಾಡ ತಲುಪಿದ್ದು, ಇಲ್ಲಿನ ವೈ.ಬಿ.ಅಣ್ಣಿಗೇರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಶಿಬಿರ ನಡೆಸಲಾಯಿತು.

ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರಿನ ಕರಿಯರ್ ಗೈಡೆನ್ಸ್ ಆಂಡ್ ಇನ್ಫೊರ್ಮೇಶನ್ ಸೆಂಟರ್ ನ ಸ್ಥಾಪಕಾಧ್ಯಕ್ಷ ಉಮರ್ ಯು.ಹೆಚ್., ಕರಿಯರ್ ಪ್ಲಾನಿಂಗ್ ನ ಅವಶ್ಯಕತೆ ಮತ್ತು ವಿಧಾನ, ಪಿಯುಸಿ ಬಳಿಕ ಕಲಿಕೆಗಿರುವ ಅವಕಾಶಗಳು ಹಾಗೂ ಸಿಇಟಿ/ನೀಟ್ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ನಡೆಯಲಿರುವ ಆನ್ ಲೈನ್ ಕೌನ್ಸಿಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ಕುರಿತಂತೆ ಮಾರ್ಗದರ್ಶನ ಮತ್ತು ಪೂರಕ ಮಾಹಿತಿ ನೀಡಿದರು.

To Top
error: Content is protected !!
WhatsApp chat Join our WhatsApp group