ರಾಷ್ಟ್ರೀಯ ಸುದ್ದಿ

“ಜಾತ್ಯತೀತ ಮತಗಳನ್ನು ವಿಭಜಿಸಲು ಬಿಜೆಪಿಯಿಂದ 100 ಕೋಟಿ ರೂಪಾಯಿಗಳನ್ನು ಪಡೆದ ಸಿಪಿಎಂನ ಪ್ರಕಾಶ್ ಕಾರಾಟ್ ತಂಡ!!”

ಬೆಚ್ಚಿ ಬೀಳಿಸುವ ಹೇಳಿಕೆ ನೀಡಿದ ಮಾಜಿ ಸಿಪಿಎಂ ಸಂಸದ!

ವರದಿಗಾರ(ಡಿ.15): ಸಿಪಿಎಂ ನ ಮಾಜಿ ಸಂಸದ, ಕೇರಳದ ಅಬ್ದುಲ್ಲಾ ಕುಟ್ಟಿ ಸಿಪಿಎಂ ನಾಯಕ ಪ್ರಕಾಶ್ ಕಾರಾಟ್ ವಿಭಾಗದ ವಿರುದ್ಧ ಗಂಭೀರ ಆರೋಪವನ್ನೆಸಗಿದ್ದಾರೆ.

1999 -2009 ರ ಅವಧಿಯಲ್ಲಿ ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಸಂಸದನಾಗಿದ್ದ ಅಬ್ದುಲ್ಲಾ ಕುಟ್ಟಿ ಪ್ರಕಾರ, ಸಿಪಿಎಂ ನ ಪ್ರಕಾಶ್ ಕಾರಾಟ್, ಜಾತ್ಯತೀತ ಮತಗಳನ್ನು ವಿಭಜಿಸಲು ಬಿಜೆಪಿಯಿಂದ 100 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.

ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಅಬ್ದುಲ್ಲಾ ಕುಟ್ಟಿ ತನ್ನ ಫೇಸ್ಬುಕ್ ಪೇಜಿನಲ್ಲಿ ಈ ಆರೋಪವನ್ನೆಸಗಿದ್ದಾರೆ. ದೆಹಲಿಯಲ್ಲಿರುವ ತನ್ನ ಹಳೆಯ ಕಾಮ್ರೇಡ್ ಸ್ನೇಹಿತರಿಂದ ಈ ಮಾಹಿತಿ ದೊರಕಿರುವುದಾಗಿ ಅವರು ತಿಳಿಸಿದ್ದಾರೆ.

“ರಾಜಸ್ಥಾನದಲ್ಲಿ 28 ಕ್ಷೇತ್ರಗಳಲ್ಲಿ ಸಿಪಿಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ, ಸಿಪಿಎಂ ಸುಮಾರು 4 ಲಕ್ಷ ಜಾತ್ಯತೀತ ಮತಗಳನ್ನು ವಿಭಜಿಸಿದೆ. ಸಿಪಿಎಂ ಕಣದಲ್ಲಿರುವ ಕಾರಣ 3 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳು ವಿಜಯಿಗಳಾಗಿದ್ದಾರೆ. ಪಿಲಿಬಂಗ ಕ್ಷೇತ್ರದಲ್ಲಿ ಬಿಜೆಪಿಯ ದರ್ಮೇಂದ್ರ ಕುಮಾರ್, ಕಾಂಗ್ರೆಸ್ ಅಭ್ಯರ್ಥಿಯನ್ನು 278 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಲ್ಲಿ ಸಿಪಿಎಂ 2659 ಮತಗಳನ್ನು ಪಡೆದಿದೆ. ಬಹುತೇಕ ಕ್ಷೇತ್ರಗಳಲ್ಲಿ ತಮ್ಮ ಠೇವಣಿ ಕಳೆದುಕೊಂಡರೂ, ಕೋಟಿ ರೂಪಾಯಿಗಳನ್ನು ಪಡೆಯುವುದರಲ್ಲಿ ಅದ್ಭುತ ಆಟವನ್ನು ಆಡಿದ್ದಾರೆ” ಎಂದು ಅವರು ತನ್ನ ಫೇಸ್ಬುಕ್ ಪೇಜಿನಲ್ಲಿ ಹೇಳಿದ್ದಾರೆ.

ಪಕ್ಷದ ರಾಜ್ಯ ನಾಯಕತ್ವದೊಂದಿಗೆ ಗಂಭೀರ ಭಿನ್ನಾಭಿಪ್ರಾಯದ ಕಾರಣ 2009ರಲ್ಲಿ ಪಕ್ಷದಿಂದ ಹೊರದಬ್ಬಲ್ಪಟ್ಟ ಅಬ್ದುಲ್ಲಾ ಕುಟ್ಟಿ, ಅದೇ ವರ್ಷ ಕಾಂಗ್ರೆಸ್ ಸೇರಿ, ಉಪ ಚುನಾವಣೆಯಲ್ಲಿ ಕಣ್ಣೂರಿನಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿದ್ದರು. 2011ರಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಸೋಲಿಸಿ ಮತ್ತೊಮ್ಮೆ ವಿಜಯಿಯಾಗಿದ್ದ ಅಬ್ದುಲ್ಲಾ ಕುಟ್ಟಿ 2016ರಲ್ಲಿ ತಲಶ್ಶೇರಿ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯನ್ನು ವಿರುದ್ಧ ಪರಾಜಯಗೊಂಡಿದ್ದರು.

To Top
error: Content is protected !!
WhatsApp chat Join our WhatsApp group