ಅನಿವಾಸಿ ಕನ್ನಡಿಗರ ವಿಶೇಷ

ಪಂಚ ರಾಜ್ಯಗಳ ಫಲಿತಾಂಶ ಕೇಂದ್ರ ಸರಕಾರದ ವಿರುದ್ದದ ಜನಾದೇಶ: ಐ ಎಸ್ ಎಫ್

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಇದು ಕೇಂದ್ರ ಸರಕಾರದ ಆಡಳಿತ     ವಿರೋಧಿ ಅಲೆಗೆ ಮತ್ತು ಮಧ್ಯಪ್ರದೇಶ,ರಾಜಸ್ತಾನ ಹಾಗು ಛತ್ತೀಸ್ಗಢದಲ್ಲಿ ಬಿಜೆಪಿಯ ಆಡಳಿತದಿಂದ ಭ್ರಮನಿರಸನಗೊಂಡ ಜನತೆ ಬಿಜೆಪಿಗೆ ನೀಡಿದ ತೀರ್ಪಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ಪ್ರಾಂತ್ಯ ಅಭಿಪ್ರಾಯಪಟ್ಟಿದೆ.ಪ್ರಸಕ್ತ ಭಾರತದಲ್ಲಿ ದನ,ಹಾಗು ರಾಮ ಬಿಜೆಪಿ ಯ ಚುನಾವಣೆಯ ಅಜೆಂಡವಾಗಿದ್ದು ಮತದಾರರು ಇದನ್ನು ಸಾರಾಸಗಟಾಗಿ ತಿರಸ್ಕರಿಸಿದಕ್ಕೆ ಇಂದಿನ ಫಲಿತಾಂಶ ಪುಷ್ಟಿ ನೀಡುತ್ತದೆ.ಕೇಂದ್ರ ಸರಕಾರದ ರಫೆಲ್ ಹಗರಣ,ನೋಟ್ ಬ್ಯಾನ್ ಹಾಗು ಆರ್ಬಿಐ ನೊಂದಿಗಿನ ಸಂಘರ್ಷ ಇವೆಲ್ಲ ಚುನಾವಣೆಯಲ್ಲಿ ಮುಖ್ಯ ಪಾತ್ರವಹಿಸಿದೆ.ಮುಂದಿನ ಲೋಕಸಭಾ ಚುನಾವಣೆಗೆ ಈ ಫಲಿತಾಂಶವು ದಿಕ್ಸೂಚಿಯಾಗಿದ್ದು ಎಲ್ಲಾ ಜಾತ್ಯತೀತ ಪಕ್ಷಗಳು ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಈಗ ಕಾಲ ಪಕ್ವಾಗಿದೆ ಎಂದು ಹೇಳಿದೆ,ಮತ್ತು

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕೋಮುವಾದಿ ಸರಕಾರವನ್ನು ಕಿತ್ತೊಗೆದು ಜಾತ್ಯತೀತಗೆ ಒತ್ತು ನೀಡಿ ಮತ ಚಲಾಯಿಸಿದ ಮತದಾರರಿಗೆ ಇಂಡಿಯನ್ ಸೋಶಿಯಲ್ ಫೋರಮ್ ಪಶ್ಚಿಮ ಪ್ರಾಂತ್ಯ( ಜಿದ್ದಾ) ಅಭಿನಂದನೆ ಸಲ್ಲಿಸಿದೆ.ಈವಿಯಂನ ಪಾರದರ್ಶಕತೆಯ ಕುರಿತು ಇನ್ನೂ ಜನರಲ್ಲಿ ಗೊಂದಲವಿದ್ದು,ಪಾರದರ್ಶಕ ಚುನಾವಣೆಗೆ ಬ್ಯಾಲೆಟ್ ಪೇಪರ್ ಪದ್ದತಿಯನ್ನು ಪುನಃ ಜಾರಿಗೆ ತರಬೇಕೆಂದು ಐಎಸೆಫ್ ಒತ್ತಾಯಿಸಿದೆ.

To Top
error: Content is protected !!
WhatsApp chat Join our WhatsApp group