ಸಾಮಾಜಿಕ ತಾಣ

‘ನಮಗೆ ಮೋದಿ ಸಾಕು, ಇನ್ನು ಯೋಗಿ ಬೇಕು’: ಉತ್ತರ ಪ್ರದೇಶದಲ್ಲಿ ಹೀಗೊಂದು ಬ್ಯಾನರ್!

➤ ‘ಸುಳ್ಳು ಭರವಸೆಗಳಿಗೆ ಮತ್ತೊಂದು ಹೆಸರೇ ಮೋದಿ; ಹಿಂದುತ್ವದ ‘ಬ್ರಾಂಡ್ ಯೋಗಿ’!

 ವರದಿಗಾರ (ಡಿ. 12):  ನಿನ್ನೆಯಷ್ಟೇ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಂದು ಅಲ್ಲೆಲ್ಲಾ ಬಿಜೆಪಿ ಸೋಲುಂಡ ಬೆನ್ನಲ್ಲೇ ‘ನಮಗೆ ಸುಳ್ಳು ಭರವಸೆಗಳನ್ನು ನೀಡುವ ಮೋದಿ ಸಾಕು, ಹಿಂದುತ್ವದ ಬ್ರಾಂಡ್ ಯೋಗಿ ಬೇಕು’ ಎಂಬ ಬ್ಯಾನರ್ ಲಕ್ನೋದಲ್ಲಿ ರಾರಾಜಿಸತೊಡಗಿದೆ. ಈ ಕುರಿತು ಅಂತರ್ಜಾಲ ಸುದ್ದಿ ತಾಣ ‘ಜನತಾ ಕಾ ರಿಪೋರ್ಟರ್’ ವರದಿ ಮಾಡಿದೆ.

ಆ ಬ್ಯಾನರ್ ನ ಅಡಿಯಲ್ಲಿ ಉತ್ತರ ಪ್ರದೇಶ ನವನಿರ್ಮಾಣ ಸೇನಾ ಎಂಬ ಸಂಘಟನೆಯೊಂದರ ಹೆಸರನ್ನು ಬರೆಯಲಾಗಿದ್ದು, ಯೋಗಿಯನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿದೆ. ಬ್ಯಾನರಿನ ಪ್ರಾರಂಭದಲ್ಲಿ #Yogi4PM ಎಂದು ಬರೆದಿದ್ದಾರೆ. ಬ್ಯಾನರಿನಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿಥ್ಯನಾಥರ ಚಿತ್ರಗಳನ್ನು ಹಾಕಲಾಗಿದ್ದು, ಅವುಗಳ ಕೆಳಗೆ ‘ಸುಳ್ಳು ಭರವಸೆಗಳಿಗೆ ಮತ್ತೊಂದು ಹೆಸರೇ ಮೋದಿ, ಹಿಂದುತ್ವದ ಐಕಾನ್ ಯೋಗಿ’ ಎಂದು ಬರೆಯಲಾಗಿದೆ. ‘ಯೋಗಿ ಲಾವೋ, ದೇಶ ಬಚಾವೋ’ (ಯೋಗಿಯನ್ನು ಕರೆ ತನ್ನಿ ದೇಶವನ್ನು ರಕ್ಷಿಸಿ) ಎಂಬ ಘೋಷವಾಕ್ಯಗಳನ್ನೂ ಹಾಕಿದ್ದಾರೆ.

ಉತ್ತರಪ್ರದೇಶ ನವನಿರ್ಮಾಣ ಸೇನೆಯು ಮುಂದಿನ ವರ್ಷ ಫೆಬ್ರವರಿ 10ರಂದು ತಮ್ಮ ಸಂಘಟನೆಯ ಕಾಯಕ್ರಮವೊಂದನ್ನು ಆಯೋಜಿಸಲಿದ್ದು, ಅದರ ಪ್ರಚಾರಾರ್ಥವಾಗಿ ಹಾಕಿರುವ ಬ್ಯಾನರಿನಲ್ಲಿ ಈ ಎಲ್ಲಾ ಅಂಶಗಳು ಕಾಣಿಸಿಕೊಂಡಿದೆ. ಈ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಅಮಿತ್ ಜನಿ ಎಂಬಾತ, ‘ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ‘ಧರ್ಮ ಸಂಸದ್’ ನಲ್ಲಿ ಯೋಗಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಒತ್ತಾಯಿಸಲಾಗುವುದು. ಇಲ್ಲದಿದ್ದರೆ ಜನರು ಬಿಜೆಪಿಗೆ ಮತ ನೀಡುವುದಿಲ್ಲವೆಂದು’ ಆತ ಹೇಳಿಕೊಂಡಿದ್ದಾನೆ.

To Top
error: Content is protected !!
WhatsApp chat Join our WhatsApp group