ಸಾಮಾಜಿಕ ತಾಣ

ಪಂಚ ರಾಜ್ಯಗಳ ಫಲಿತಾಂಶಗಳೇನೇ ಇದ್ದರೂ ಮತಯಂತ್ರಗಳು ನಂಬಿಕೆಗೆ ಅರ್ಹವಲ್ಲ : ಹಾರ್ದಿಕ್ ಪಟೇಲ್

➤ ‘ರಾಹುಲ್ ಗಾಂಧಿಯ ಪ್ರಾಮಾಣಿಕತೆ ಕಾಂಗ್ರೆಸ್ಸನ್ನು ಗೆಲ್ಲಿಸಿತು’

ವರದಿಗಾರ (ಡಿ 12) :   ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕ್ಕಚ್ಚಿದ್ದರೂ ಕೂಡಾ ನಾನಿನ್ನೂ  ಮತಯಂತ್ರಗಳನ್ನು (ಇವಿಎಂ) ನಂಬುವುದಿಲ್ಲ ಎಂದು ಪಾಟೀದಾರ್ ಆಂಧೋಲನದ ಮುಂಚೂಣಿಯ ನಾಯಕ ಹಾರ್ದಿಕ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇವಿಎಂನ್ನು ದುರುಪಯೋಗಪಡಿಸಿಕೊಂಡು ತನಗೆ ಬೇಕಾದ ಹಾಗೆ ಫಲಿತಾಂಶಗಳನ್ನು ತಿರುಚುತ್ತದೆ ಎಂಬ ಆರೋಪಗಳ ನಡುವೆಯೇ ಹಾರ್ದಿಕ್ ಪಟೇಲರ ಈ ಅಭಿಪ್ರಾಯ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಟ್ವಿಟ್ಟರ್ ಮೂಲಕ ತನ್ನ ಭಿಪ್ರಾಯ ವ್ಯಕ್ತಪಡಿಸಿದ ಹಾರ್ದಿಕ್ ಪಟೇಲ್, ಪಂಚ ರಾಜ್ಯಗಳ ಫಲಿತಾಂಶಗಳ ಬಳಿಕವೂ ನಾನು ಮತಯಂತ್ರಗಳ ಪ್ರಾಮಾಣಿಕತೆಯ ಬಗೆಗೆ ಇನ್ನೂ ಸಂಶಯ ಹೊಂದಿದ್ದೇನೆ, ಅದರ ಮೇಲೆ ಭರವಸೆ ಇಡುವ ಹಾಗಿಲ್ಲ ಎಂದಿದ್ದಾರೆ.

ಚುನಾವಣೆಯಲ್ಲಿ ವಿಜಯಿಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ನಾನು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. 2019 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಹೋರಾಟ, ಅದು ರಾಹುಲ್ ಗಾಂಧಿಯ ವಿರುದ್ಧವಾಗಿರಲಿದೆ. ರಾಹುಲ್ ಗಾಂಧಿ ತನ್ನ ಪ್ರಾಮಾಣಿಕತೆಗಾಗಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

To Top
error: Content is protected !!
WhatsApp chat Join our WhatsApp group