ರಾಷ್ಟ್ರೀಯ ಸುದ್ದಿ

ಜಾತಿ ರಾಜಕಾರಣವನ್ನು ಮಾಡುತ್ತಿರುವ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಗೆ ಬೆಂಬಲ: ಮಾಯಾವತಿ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಬಿಎಸ್ ಪಿ ಬೆಂಬಲ

ವರದಿಗಾರ (ಡಿ.12): ಬಿಜೆಪಿ ಜಾತಿ ರಾಜಕಾರಣ ಮಾಡುತ್ತಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆಗೆ ಎರಡು ಸ್ಥಾನಗಳಿಂದ ಬಹುಮತಕ್ಕೆ ಕೊರತೆಯಿರುವ ಕಾಂಗ್ರೆಸ್‌ ನ್ನು ಬೆಂಬಲಿಸುವುದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್‌ನ ಹಲವು ಸಿದ್ಧಾಂತಗಳನ್ನು ನಾವು ಒಪ್ಪುವುದಿಲ್ಲವಾದರೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇವೆ ಎಂದು ಮಾಯಾವತಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈಗ ಮಧ್ಯಪ್ರದೇಶದಲ್ಲಿ ಬೆಂಬಲ ನೀಡುತ್ತಿದ್ದು, ಅಗತ್ಯಬಿದ್ದರೆ ರಾಜಸ್ಥಾನದಲ್ಲೂ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಛತ್ತೀಸಗಡ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಜನರು ಬಿಜೆಪಿಗೆ ವಿರುದ್ಧವಾಗಿ ಮತನೀಡಿದ್ದಾರೆ ಎಂಬುದನ್ನು ಫಲಿತಾಂಶವೇ ತೋರಿದೆ. ಇತರ ಪರ್ಯಾಯಗಳ ಇಲ್ಲದಿರುವುದರಿಂದ ಕಾಂಗ್ರೆಸ್‌ ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ

 

To Top
error: Content is protected !!
WhatsApp chat Join our WhatsApp group