ರಾಷ್ಟ್ರೀಯ ಸುದ್ದಿ

ರಾಜಸ್ಥಾನದ ಗೋಪಾಲನಾ ಮಂತ್ರಿಗೇ ಸೋಲು !!

ವರದಿಗಾರ (ಡಿ 11) :   ದೇಶದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಸಂಪೂರ್ಣವಾಗಿ ಸೋತುಹೋಗಿದೆ. ಇದರ ಮಧ್ಯೆ ಬಿಜೆಪಿಯ ಮತ ರಾಜಕಾರಣದ ಬಹುಮುಖ್ಯ ಅಂಗವಾಗಿದ್ದ ಗೋವುಗಳ ಸಂರಕ್ಷಣೆಯ ಕುರಿತಾಗಿ ರಾಜಸ್ಥಾನದಲ್ಲಿ ಒಂದು ಖಾತೆಯನ್ನೇ ತೆರೆದಿತ್ತು. ಅದು ‘ಗೋ ಪಾಲನಾ ಮಂತ್ರಿ’. ಹೀಗೆ ವಸುಂಧರಾ ರಾಜೇ ಮಂತ್ರಿಮಂಡಲದಲ್ಲಿ ಗೋಪಾಲನಾ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಓತಾರಾಮ್ ದೇವಸಿ ಅವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯ ವಿರುದ್ಧ ಹೀನಾಯವಾಗಿ ಸೋಲನ್ನಪ್ಪಿದ್ದಾರೆ.

ರಾಜಸ್ಥಾನದ ಸಿರೋಹಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಟಿಕೆಟ್ ನಿರಾಕರಿಸಲ್ಪಟ್ಟು ಸ್ವತಂತ್ರ ಅಭ್ಯರ್ಥಿಯಾಗಿ ಬಂಡಾಯದ ಬಾವುಟ ಹಾರಿಸಿದ್ದ ಸನ್ಯಾಮ್ ಲೋಧಾ ವಿರುದ್ಧ 10,253 ಮತಗಳ ಅಂತರದಿಂದ ಸೋಲನ್ನೊಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಗೋರಕ್ಷಣೆ ಹಾಗೂ ಮಸೀದಿ-ಮಂದಿರಗಳಂತಹಾ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ನೆಲೆ ಕಂಡುಕೊಂಡಿರುವ ಬಿಜೆಪಿ ಪಕ್ಷವು ಇಂದಿನ ಸೋಲಿನಿಂದ ಹಲವು ಪಾಠಗಳನ್ನು ಕಲಿಯಬೇಕಾಗಿದೆ. ಅಭಿವೃದ್ಧಿ ವಿಚಾರಗಳಿಂದ ದೂರ ಸರಿದ ಬಿಜೆಪಿ ಪಕ್ಷದ ಗೋಪಾಲನಾ ಮಂತ್ರಿಯೊಬ್ಬನಿಗೆ ಎದುರಾಗಿರುವ ಸೋಲು ಜನರು ಕೇವಲ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿತ್ತಾರೆಯೇ ವಿನಃ ಭಾವನಾತ್ಮಕ ವಿಚಾರಗಳಲ್ಲ ಎನ್ನುವುದರ ಮುನ್ಸೂಚನೆಯಾಗಿದೆ.

 

 

To Top
error: Content is protected !!
WhatsApp chat Join our WhatsApp group